ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಧುವಂತಿ ಮುಳಿಯ


ಮಧುವಂತಿ ಮುಳಿಯ 


ಮಧುವಂತಿ ಮುಳಿಯ ಪ್ರತಿಭಾನ್ವಿತ ನೃತ್ಯ ಕಲಾವಿದೆ.

ಮೇ 22, ಮಧುವಂತಿ ಜನ್ಮದಿನ. ಮಧುವಂತಿ ಅವರ ತಾಯಿ ವಾಣಿಶ್ರೀ ರವಿಶಂಕರ್ Vanishree Ravishankar ಅವರು ಪ್ರಖ್ಯಾತ ನೃತ್ಯ ಕಲಾವಿದೆಯಾಗಿದ್ದು,  ಚೆನ್ನೈ ನಗರದ ಪ್ರಸಿದ್ಧ  'ನಾಟ್ಯ ಸಮರ್ಪಣಂ' ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ.  ವಾಣಿಶ್ರೀ ರವಿಶಂಕರ್ ಅವರು ಕನ್ನಡ ಸಾಹಿತ್ಯ ಲೋಕದ ಮಹಾನ್ ಸಾಹಿತಿ ಮತ್ತು  ವಿದ್ವಾಂಸರಾದ ಮುಳಿಯ ತಿಮ್ಮಪ್ಪಯ್ಯನವರ ಮೊಮ್ಮಗಳು.

ಮಧುವಂತಿ ನಾಟ್ಯ ಲೋಕದಲ್ಲಿ ಅನೇಕ ನೃತ್ಯ ಕಾರ್ಯಕ್ರಮ ನೀಡುತ್ತಾ ಹೆಸರಾಗಿದ್ದಾರೆ.  ಅವರು ಬಯೋಟೆಕ್ನಲ್ಲಿ ಎಂ.ಟೆಕ್ ವಿದ್ಯಾಸಾಧನೆಯನ್ನೂ ಮಾಡಿದ್ದಾರೆ.

ಉತ್ಸಾಹಿ ಪ್ರತಿಭಾನ್ವಿತ ಕಲಾವಿದೆ ಮಧುವಂತಿ ಮುಳಿಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Madhuvanthi Muliya 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ