ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲಕ್ಷ್ಮೀ ಮಧು

 

ಲಕ್ಷ್ಮೀ ಮಧು


ಫೇಸ್ಬುಕ್ನಲ್ಲಿನ ಅತ್ಯುತ್ತಮ ಸಂವೇದನಾ ಶೀಲ ಬರಹಗಾರರಲ್ಲಿ ಲಕ್ಷ್ಮಿ ಮಧು ಒಬ್ಬರು.  ಅವರ ಬರಹಗಳು ಸರಳತೆ, ಪ್ರಾಜ್ಞತೆ, ನವುರು ಹಾಸ್ಯ ಇವೆಲ್ಲವುಗಳ ಭವ್ಯ ಸಂಗಮ. 

ಜುಲೈ 27, ಲಕ್ಷ್ಮೀ ಮಧು ಅವರ ಜನ್ಮದಿನ. 
ಅವರ ತಾಯಿ ಆಂಧ್ರದವರು. ಹೀಗಾಗಿ ಅವರು ಹುಟ್ಟಿದ್ದು ಆಂಧ್ರಪ್ರದೇಶದ ಒಂದು ಚಿಕ್ಕ ಊರಿನಲ್ಲಿ.  ತಳುಕಿನ  ವೆಂಕಣ್ಣಯ್ಯ, ತ.ಸು. ಶಾಮರಾವ್, ಮತ್ತು ತ.ರಾ.ಸು. ಅವರ ತಂದೆ ರಾಮಸ್ವಾಮಯ್ಯ ಅವರೆಲ್ಲಾ ಸೇರಿ ಒಟ್ಟು ಏಳು ಜನ ಸಹೋದರರು ತಳುಕು ಸಹೋದರರು ಎಂದೇ ಖ್ಯಾತರು. ಅವರಲ್ಲಿ ಕೊನೆಯವರಾದ ಹನುಮಂತರಾವ್ ಅವರು ಲಕ್ಷ್ಮೀ ಮಧು ಅವರ  ತಂದೆಯ ತಂದೆ. 

ಲಕ್ಷ್ಮೀ ಮಧು ಅವರ ತಂದೆ ತ. ಹ. ನಾಗರಾಜನ್. ತಾಯಿ ಗಂಗಾದೇವಿ. ತಂದೆ ಕನ್ನಡ ಶಿಕ್ಷಕರೂ ಮತ್ತು ಪ್ರಗತಿಶೀಲ ಬರಹಗಾರರೂ ಆಗಿದ್ದರು. ಹೀಗಾಗಿ ಇವರ ಮನೆಯಲ್ಲಿ ಬಾಲ್ಯದಿಂದಲೂ ಸಾಹಿತ್ಯದ ವಾತಾವರಣ ಸಹಜವಾಗಿಯೇ ಇತ್ತು.

ಲಕ್ಷ್ಮೀ ಮಧು ಹೇಳ್ತಾರೆ "ನನ್ನ ಬಗ್ಗೆ ಹೇಳಿಕೊಳ್ಳುವಷ್ಟು ಏನೂ ಇಲ್ಲ. ನಾನೊಬ್ಬ ಸಾಧಾರಣ ಗೃಹಿಣಿ.‍ ಓದಿದ್ದು ಅರ್ಧ ಎಮ್ಮೆ (M. A)😄 ಮತ್ತು ಲಕ್ಷಗಟ್ಟಲೆ ಕತೆ ಪುಸ್ತಕ. ಬರೆದಿದ್ದು ಏನೂ ಇಲ್ಲ."

ಲಕ್ಷ್ಮೀ ಮಧು ಅವರು ತಮ್ಮ ಬಗ್ಗೆ ಏನೇ ಹೆಳ್ಕೊಳ್ಳಲಿ.  ಅವರ ಚಿಂತನಾತ್ಮಕ ಪ್ರಬಂಧಗಳ ಶೈಲಿಯಂತೂ ನನಗೆ ಅಚ್ಚುಮೆಚ್ಚು.  ಅವರು ಬರೆದ ರಾಮಾಯಣದ ಶ್ರೀರಾಮನ ವ್ಯಕ್ತಿತ್ವದ ಘನತೆಯ ಕುರಿತ ಪ್ರಬಂಧವಂತೂ ರಾಮಾಯಣದ ಕುರಿತು ನಾನು ಓದಿರುವ ಅತ್ಯುತ್ತಮ ವ್ಯಾಖ್ಯಾನಗಳಲ್ಲೊಂದು. ಹಾಗೆಯೇ ಅವರ ಕವಿತೆ, ಪ್ರಬಂಧ ಮತ್ತು ಕಥನಾತ್ಮಕ ನಿರೂಪಕಗಳಲ್ಲಿ ಸರಳತೆ, ಲವಲವಿಕೆ, ಹಾಸ್ಯಪ್ರಜ್ಞೆ, ಅವಶ್ಯಕವಿದ್ದಾಗ ನೇರ ರಾಮ ಬಾಣ ಮತ್ತು ಸದ್ವಿವಿವೇಕದ ಅನುಭೂತಿಗಳು ನಿಚ್ಚಳವಾಗಿವೆ.

ನಮಗೆಲ್ಲ ತಿಳಿದಿರುವ ಹಾಗೆ ಲಕ್ಷ್ಮಿ ಅವರ ಪತಿ ಬಿ. ಎ. ಮಧು Madhu B A ಕನ್ನಡ ಚಲನಚಿತ್ರ ಸಾಹಿತಿಗಳಾಗಿ ಖ್ಯಾತರು.  ಪತಿಯವರ ಸಾಹಿತ್ಯದ ಕೆಲಸಕ್ಕೂ ಲಕ್ಷ್ಮೀ ಅವರ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲಗಳು ಅವರ ಸುಂದರ ದಾಂಪತ್ಯದಲ್ಲಿ ಸಮ್ಮಿಳಿತಗೊಂಡಿವೆ. 

ಲಕ್ಷ್ಮೀ ಮಧು ಅವರ ಸಂಗೀತ, ಸಾಹಿತ್ಯ, ಸಂಸ್ಕೃತಿ, ಕುಟುಂಬ ಪ್ರೇಮ, ಸಾಮಾಜಿಕ ಕಾಳಜಿ ಇವೆಲ್ಲವುಗಳಲ್ಲಿ,  ಅವರದೇ ಆದ ವಿಶಿಷ್ಟ ನೆಲೆಗಳನ್ನು ಗುರುತಿಸಬಹುದು ಎನಿಸುತ್ತದೆ. 

ನಮ್ಮೆಲ್ಲರ ಆತ್ಮೀಯರಾದ ಪ್ರತಿಭಾನ್ವಿತ ಹಸನ್ಮುಖಿ ಲಕ್ಷೀ ಮಧು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.

Happy birthday Lakshmi Madhu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ