ಆಶ್ರಯಿ ಎನ್ ರಾಮ್
ಆಶ್ರಯಿ ಎನ್ ರಾಮ್
ಆಶ್ರಯಿ ಎನ್ ರಾಮ್, ಪ್ರಸಿದ್ಧ ನವರತ್ನರಾಮ್ ಕುಟುಂಬದವರಾಗಿ, ಕ್ರೀಡಾ ಕ್ಷೇತ್ರ ಮತ್ತು ಪ್ರಾಣಿ ದಯಾಪರತೆಗಳಿಂದ ಹೆಸರಾದವರು.
ಜುಲೈ 3 ಆಶ್ರಯಿ ಅವರ ಜನ್ಮದಿನ. ತಂದೆ ನವರತ್ನ ರಾಮ್ ಮತ್ತು ತಾಯಿ ಉಷಾ ನವರತ್ನ ರಾಮ್ ಇಬ್ಬರೂ ಪ್ರಸಿದ್ಧ ಸಾಹಿತಿಗಳು. ಶ್ರೇಷ್ಠ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದ ಆಶ್ರಯಿ ಅವರ ಆಸಕ್ತಿ ಕ್ಷೇತ್ರಗಳು ವಿಪುಲವಾದದ್ದು. ವೃತ್ತಿಯಲ್ಲಿ ಇವರು ವಕೀಲರು.
ಆಶ್ರಯಿ ಅವರು ಕ್ರಿಕೆಟ್ ಲೋಕದಲ್ಲಿ ಆಲ್ ರೌಂಡರ್ ಆಗಿ ಹೆಸರಾದವರು. ಅಂತೆಯೇ ಆಯ್ಕೆದಾರರಾಗಿ ಸಹಾ ಕರ್ನಾಟಕದ ಕ್ರಿಕೆಟ್ ಲೋಕದಲ್ಲಿ ಅವರು ಇಂದಿಗೂ ಹೆಸರು.
ಆಶ್ರಯಿ ಅವರು ಪ್ರಾಣಿ ದಯಾಪರತೆಗೆ ಹೆಸರಾದವರು. ಎಲ್ಲ ಪ್ರಾಣಿಗಳನ್ನೂ ತಮ್ಮ ನೆಲೆಗೆ ಆಕರ್ಷಿಸಿ ಅವುಗಳಿಗೆ ಅವರು ತೋರುವ ಸ್ನೇಹ ಅನುಪವೆನಿಸಿದೆ.
ಆಶ್ರಯಿ ಅವರ ಜೊತೆಯಲ್ಲಿ ಅವರ ಪ್ರಸಿದ್ಧ ಸಾಹಿತ್ಯ ಕುಟುಂಬದ ಅನೇಕ ಸವಿಭಾವಗಳು ಹಾಸುಹೊಕ್ಕಾಗಿವೆ.
ಆತ್ಮೀಯರಾದ ಆಶ್ರಯಿ ಎನ್. ರಾಮ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Ashrayii N. Ram
ಕಾಮೆಂಟ್‌ಗಳು