ಸುಪ್ರೀತಾ ಬೆಳವಾಡಿ
ಸುಪ್ರೀತಾ ಬೆಳವಾಡಿ
ಸುಪ್ರೀತಾ ಬೆಳವಾಡಿ ವಿದೇಶದಲ್ಲಿ ನೆಲೆಸಿರುವ ಆಪ್ತ ಕನ್ನಡದ ಮಿಡಿವ ಸಹೃದಯಿಗಳಲ್ಲಿ ಒಬ್ಬರು.
ಜುಲೈ 3 ಸುಪ್ರೀತಾ ಬೆಳವಾಡಿ ಅವರ ಜನ್ಮದಿನ. ಮೂಲತಃ ಅವರು ಹುಟ್ಟಿ ಬೆಳೆದದ್ದು ಹಾಸನದಲ್ಲಿ. ಇಂಜಿನಿಯರಿಂಗ್ ಓದಿ ಮುಂದೆ ಕುಟುಂಬದೊಂದಿಗೆ ಅಮೆರಿಕದಲ್ಲಿ ನೆಲೆಸಿರುವ ಸುಪ್ರೀತಾ ಬೆಳವಾಡಿ ಅವರ ಕನ್ನಡ ಮತ್ತು ಭಾರತೀಯ ಸಾಂಸ್ಕೃತಿಕ ಪ್ರೀತಿ, ಅವರ ಪ್ರತಿ ಬರಹಗಳಲ್ಲೂ ಪುಟಿ ಪುಟಿದು ನಲಿಯುತ್ತವೆ.
ಆಧ್ಯಾತ್ಮ, ಭಾರತೀಯ ಸಂಸ್ಕೃತಿ, ಸಕಾರಾತ್ಮಕ ಚಿಂತನೆ, ಮಾಡುವ ದೈನಂದಿನಗಳಲ್ಲಿ ಕಂಡುಕೊಳ್ಳಬಹುದಾದ ಸೃಜನಶೀಲತೆ, ಹೊಸ ವಿಚಾರಗಳ ಕುರಿತಾದ ಕುತೂಹಲ ಇವೆಲ್ಲವುಗಳೂ ಸುಪ್ರೀತಾ ಅವರ ಬರವಣಿಗೆಗಳಲ್ಲಿ ಅಭಿವ್ಯಕ್ತಗೊಂಡು ಕನ್ನಡದ ನಿಯತಕಾಲಿಕೆಗಳಲ್ಲಿ ಮತ್ತು ಅಂತರಜಾಲದ ಬರಹಗಳಾಗಿ ಮತ್ತು ಹಲವು ಯೂಟ್ಯೂಬ್ ಧ್ವನಿಗಳಾಗಿ ಮೂಡಿವೆ.
ಆತ್ಮೀಯ ಸೃಜನಶೀಲ ಸಹೃದಯಿ ಸುಪ್ರೀತಾ ಬೆಳವಾಡಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Supreetha Belavadi
ಕಾಮೆಂಟ್‌ಗಳು