ಶ್ರೀಲಕ್ಷ್ಮಿ ಗುರುಪ್ರಸಾದ್
ಶ್ರೀಲಕ್ಷ್ಮಿ ಗುರುಪ್ರಸಾದ್
ಶ್ರೀಲಕ್ಷ್ಮಿ ಗುರುಪ್ರಸಾದ್ ಬಹುಮುಖಿ ಪ್ರತಿಭೆಗಳ ಸಂಗಮ. ಐಟಿ ತಜ್ಞೆಯಾದ ಅವರು ಬಹುರೂಪಿ ಬರಹಗಾರ್ತಿ, ಬಾನುಲಿ ಮತ್ತು ದೂರದರ್ಶನಗಳಲ್ಲಿನ ನಿರೂಪಕಿ ಮತ್ತು ಹಲವು ಆಸಕ್ತಿಗಳನ್ನು ಜೊತೆಗೂಡಿಸಿಕೊಂಡು ಸದಾ ಕ್ರಿಯಾಶೀಲರಾದ ಸಹೃದಯಿ.
ಜುಲೈ 3 ಶ್ರೀಲಕ್ಷ್ಮಿ ಅವರ ಜನ್ಮದಿನ. ಬೆಂಗಳೂರಿನವರಾದ ಅವರು ಐಟಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸಿದ್ಧ ಐಟಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದವರು.
ಶ್ರೀಲಕ್ಷ್ಮಿ ಅವರ ಕಥೆ, ಕವಿತೆ, ಪ್ರಬಂಧ, ಪರಿಚಯ, ಹಾಸ್ಯ, ಚಿಂತನ ಮುಂತಾದ ಬರಹಗಳು ನಾಡಿನ ಪ್ರಮುಖ ನಿಯತಕಾಲಿಕಗಳಲ್ಲಿ ನಿರಂತರ ಮೂಡಿಬರುತ್ತಿವೆ. ಅವರು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ನಿರೂಪಕರಾಗಿಯೂ ಧ್ವನಿ ಮೂಡಿಸಿದ್ದಾರೆ.
ಆತ್ಮೀಯರಾದ ಶ್ರೀಲಕ್ಷ್ಮಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Srilakshmi S Guruprasad
ಕಾಮೆಂಟ್‌ಗಳು