ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಪ್ರಜ್ - ಸುಹಾಸಿನಿ


 ಸುಪ್ರಜ್ - ಸುಹಾಸಿನಿ

ಯುವ ಹೋಮಿಯೊಪತಿ ವೈದ್ಯರಾದ ಸುಪ್ರಜ್ ಕೌಲಗಿ ಚಿತ್ರಕಲಾವಿದರಾಗಿ, ಬರಹಗಾರರಾಗಿ,  ಸಾಮಾಜಿಕ ಸೇವಾಕರ್ತರಾಗಿ ಮತ್ತು ಸಾಂಸ್ಕೃತಿಕ ಸಂಘಟನಾಕಾರರಾಗಿ ಸಕ್ರಿಯ ವ್ಯಕ್ತಿಯಾಗಿ ಎದ್ದು ಕಾಣುತ್ತಾರೆ.

ಸುಪ್ರಜ್ ಕೌಲಗಿ 1995ರ ಡಿಸೆಂಬರ್ 31ರಂದು ಜನಿಸಿದರು. ಮೇಲುಕೋಟೆಯವರಾದ ಸುಪ್ರಜ್ ಮೇಲುಕೋಟೆ, ಮೈಸೂರುಗಳಲ್ಲಿ ಓದಿದ ನಂತರ ಬೆಂಗಳೂರಿನ ಸರ್ಕಾರಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನಿಂದ ವೈದ್ಯ ಪದವಿ ಪಡೆದರು. ಮೈಸೂರಿನ ವೈಜಯಂತೀ ಚಿತ್ರಕಲಾಶಾಲೆಯಿಂದ ಚಿತ್ರಕಲೆಯನ್ನೂ ಕಲಿತು ಅದ್ಭುತ ಚಿತ್ರಕಾರರೂ ಆಗಿದ್ದಾರೆ.

ಮೈಸೂರಿನಲ್ಲಿ ನೆಲೆಸಿರುವ ಸುಪ್ರಜ್ ಕೌಲಗಿ ತಮ್ಮ ವೃತ್ತಿ ಪ್ರವೃತ್ತಿಗಳ ನಡುವೆ ಬರಹ, ಗ್ರಾಮೀಣ ಹಿತಾಸಕ್ತಿಗಳ ಸಂಘಟನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಸಕ್ರಿಯರಾದ ಉತ್ಸಾಹಶಾಲಿಯಾಗಿದ್ದಾರೆ.

ಸುಪ್ರಜ್ ಮತ್ತು ನೃತ್ಯಪಟು ಸುಹಾಸಿನಿ‌ ಅವಳಿಗಳು. ಸುಹಾಸಿನಿ ಅಭಿವ್ಯಕ್ತಿ ಎಂಬ ನೃತ್ಯಶಾಲೆ ನಡೆಸುತ್ತಿದ್ದಾರೆ. ಆಕೆ ಒಬ್ಬ ಉತ್ತಮ ಸಂವೇದನಾಶಿಲರಾದ ನೃತ್ಯಗಾತಿ. ಕುವೆಂಪು ಅವರ ಭಾವಗೀತೆ ಮತ್ತು ಡಿ.ಎಂ.ಕೃಷ್ಣ ಅವರ ಪೆರಂಬೋಕು ಕವಿತೆಗಳನ್ನು ನೃತ್ಯಕ್ಕೆ ಅಳವಡಿಸಿ ಚಿತ್ರೀಕರಿಸಿದ್ದಾರೆ.

ಯುವ ಪ್ರತಿಭೆ, ಉತ್ಸಾಹಿ, ಸಮಾಜಮುಖಿ ಸಕ್ರಿಯ ಸುಪ್ರಜ್ ಕೌಲಗಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಅವರ ಅವಳಿ ಸಹೋದರಿ ಸುಹಾಸಿನಿ ಅವರಿಗೂ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

ಇಂಥ ಯುವ ಉತ್ಸಾಹಿ ಪ್ರತಿಭೆಗಳು ನಮ್ಮೊಡನಿರೋದೇ ಖುಷಿ.

Happy birthday Supraj Koulagi and Suhasini Koulagi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ