ತಿರುಪ್ಪಾವೈ26
ತಿರುಪ್ಪಾವೈ 26
ಎಲ್ಲ ನದಿಗಳಲ್ಲಿ ನಿನ್ನ ನಾಮಾಮೃತವು ತೇಲಿತೇಲಿ ಬರುತ್ತಿರಲಿ
Thiruppavai 26
ಮಾಲೇ ಮಣಿವಣ್ಣಾ ಮಾರ್ಗಳಿಲ್ ನೀರಾಡುವಾನ್
ಮೇಲೈಯಾರ್ ಶೆಯ್‍ವನಗಳ್ ವೇಂಡುವನ ಕೇಟ್ಟಿಯೇಲ್
ಜ್ಞಾನತ್ತೆಯೆಲ್ಲಾಂ ನಡುಂಗ ಮುರಲ್ವನ ಪಾಲನ್ನವಣ್ಣತ್ತುನ್ ಪಾಂಚಶನ್ನಿಯಮೇ ಪೋಲ್ವನ ಶಂಗಗಂಳ್ ಪೋಯ್ಪಾಡುಡೈಯನವೇ
ಶಾಲಪ್ಪೆರುಂ ಪರೈಯೇ ಪಲ್ಲಾಂಡಿಶೈಪ್ಪಾರೇ
ಕೋಲವಿಳಕ್ಕೇ ಕೊಡಿಯೇ ವಿತಾನಮೇ ಆಲಿನಿಲೈಯಾಯ್ ಅರುಳೇಲೋರೆಂಬಾವಾಯ್
ಭಾವಾನುವಾದ 26
ಮಾರ್ಗಶಿರದುದಯದಲಿ ಯಮುನೆಯೊಳ್ಮೀಯಲೆಮಗೆ ನೆರವಾಗು ನೀಡೆಮಗೆ ಧ್ವಜಪತಾಕೆಗಳ ಪಾಂಚಜನ್ಯ
ಸಾರಂಗ ವಂದಿ ಮಾಗಧರನ್ನು ಕಳುಹೆಮಗೆ ಭೋರ್ಗರೆವ ಭೇರಿ ಮೃದಂಗ ಬರಲಿ
ಭಕ್ತಜನ ತಾಳವಾದ್ಯ ಸಹಿತೆಲ್ಲ
ಇರಲೆಮಗೆ ವಿಷ್ಣುಚಿತ್ತರ ಸನ್ನಿಧಿ
ನರಸಿಭಗತ ಮೀರಾ ಪಾಡುತಾಡುತ ಬರಲೀ
ಗಂಗೆ ಯಮುನೆಯರ ಸಿಂಧುಕಾವೇರಿ ಭೀಮಭದ್ರೆಯರ ಸಲಿಲದಲಿ ಮೊಳಗಲೋಂಕಾರನಾದ ಮೂಡಿ ಬರಲೀ ತುಕಾರಾಮಸಖರಾ ಅಭಂಗನಾದ ಸುಧೆ
ತುಂಬಿರಲಾನಂದ ಸಿರಿಸಂಪದವು ನಿನ್ನ ಭಕುತರಾ ಮನಮನದಿ ಅಕ್ಷಯವಾಗಿ
ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ತಿರುಪ್ಪಾವೈ 26
ಸಂಕ್ಷಿಪ್ತ ಭಾವಾರ್ಥ
ಹೇ ನಾಥ ನಾರಾಯಣ, ನಾವುಗಳೆಲ್ಲರೂ ನಿನ್ನ ಅನುಚರರು, ಭಕ್ತರು. ನಿನ್ನನ್ನೇ ಆಶ್ರಯಿಸಿರುವವರು. ಆದ್ದರಿಂದ ಕೆಲವು ವಿಶೇಷ ಸವಲತ್ತುಗಳನ್ನು ನೀನು ನಮಗೆ ಕೊಡಬೇಕು.
ಅವುಗಳಾವುವೆಂದರೆ, ನಾವು ಮಾರ್ಗಶಿರ ಮಾಸದಲ್ಲಿ ಮಂಗಳ ಮಜ್ಜನಕ್ಕೆಂದು ಯಮುನೆಯೆಡೆದೆ ಹೋಗುತ್ತಿದ್ದೇವೆ. ನಮಗೆ ಈ ಸಮಯದಲ್ಲಿ ಬೇರಾವ ಚಿಂತೆಯೂ ಕಾಡದಂತೆ ಸದಾಕಾಲ ನಿನ್ನ ಅಮರ ಗುಣಗಾನ ಮಾಡುವ ವಂದಿಮಾಗಧರನ್ನು ಕಳುಹಿಸಿಕೊಡು.
ಲೋಕಕ್ಕೆಲ್ಲಾ ತಿಳಿಯಲಿ ನಿನ್ನ ಭಕ್ತರಿಗೆ ನೀನು ಏನೆಲ್ಲಾ ಕರುಣಿಸುತ್ತೀಯೆಂದು. ಜೊತೆಗೆ ನಮಗೆಲ್ಲಾ ಪಿತೃಸಮಾನರಾದ ನಿನ್ನನ್ನೇ ತಮ್ಮ ಹೃತ್ಕಮಲದಲ್ಲಿ ಹಿಡಿದಿಟ್ಟುಕೊಂಡಿರುವ ಪೆರಿಯಾಳ್ವಾರರೂ ನಿನ್ನ ಅಮರ ಗುಣಗಾನ ಮಾಡಿ ಕಾಲಿಗೆ ಗೆಜ್ಜೆಕಟ್ಟಿ ಆಡಿಪಾಡಿ ನಲಿಯುತ್ತ, ತಾಳ ದಂಡಿಗೆ ಪಿಡಿದು ಮನಮರೆತು ಪಾಡುತ್ತಿರುವ ಭಕ್ತ ವೃಂದವೂ ಸಹ ನಮ್ಮೊಡನಿರುವಂತೆ ಅನುಗ್ರಹಿಸು.
ನರಸೀಭಗತ, ಮೀರಾ ಮಂತಾದ ಭಕ್ತ ಶ್ರೇಷ್ಠರನ್ನು ಬರುವಂತೆ ಮಾಡು.
ಎಲ್ಲೆಲ್ಲೂ ಪ್ರಕೃತಿ ಹಸಿರು ಸಿಂಗರದಿಂದ ಕಂಗೊಳಿಸಲಿ. ನಿನ್ನನ್ನು ಪಾಡುತ್ತಾ ನಡೆಯುವ ನಿನ್ನ ಭಕ್ತರ ದಾರಿಯಲ್ಲಿ ಹೂವ ನಡೆಮುಡಿ ಹಾಸಿರಲಿ. ಇದರಿಂದಾಗಿ ನಮಗೆ ನಿನ್ನ ಬಗ್ಗೆ ಇನ್ನೂ ಹೆಚ್ಚು ಪ್ರೀತಿಯುಂಟಾಗಲಿ.
ನಿನ್ನ ಭಕ್ತ ಸಮೂಹ ನಿನ್ನ ಗುಣಗಾನ ಮಾಡುತ್ತಾ ಸ್ನಾನಕ್ಕೆ ಇಳಿದಾಗ ಗಂಗೆ ಯಮುನೆ ಸಿಂಧು ಕಾವೇರಿ ಬ್ರಹ್ಮಪುತ್ರಾ ಅಲಕನಂದ ತುಂಗಭದ್ರೆ ಭೀಮಾದಿ ನದಿಗಳಲ್ಲಿ ನಿನ್ನ ನಾಮಾಮೃತವು ತೇಲಿತೇಲಿ ಬರುತ್ತಿರಲಿ.
ಹೀಗೆ ನೀನು ನಮ್ಮನ್ನು ಅನುಗ್ರಹಿಸಿ ರಕ್ಷಿಸು. ಇದರಿಂದ ನಮ್ಮ ವ್ರತವೂ ಈಡೇರಿ ಸಮಸ್ತ ಲೋಕಕ್ಕೂ ಮಂಗಳ ಉಂಟಾಗಲಿ.
ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆ
Art credits: Keshav (©KrishnaforToday)
ಕಾಮೆಂಟ್‌ಗಳು