ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಮರುಳಸಿದ್ದಪ್ಪ


 ಕೆ. ಮರುಳಸಿದ್ದಪ್ಪ


ಹಿರಿಯರಾದ ಡಾ. ಕೆ. ಮರುಳಸಿದ್ದಪ್ಪ ಅವರು ನಮ್ಮ ಕನ್ನಡ ನಾಡಿನ ಮಹತ್ವದ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬರಹಗಾರರು. 

ಮರುಳಸಿದ್ದಪ್ಪನವರು 1940ರ ಜನವರಿ 12ರಂದು ಜನಿಸಿದರು.  ಅವರ ಊರು ಚಿಕ್ಕಮಗಳೂರು ಜಿಲ್ಲೆಯ ಕಾರೇಹಳ್ಳಿ. ತಂದೆ ಉಜ್ಜನಪ್ಪ.‍ ತಾಯಿ ಕಾಳಮ್ಮ. ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್ ಹಾಗೂ ಸ್ವರ್ಣಪದಕಗಳೊಂದಿಗೆ ಕನ್ನಡ ಎಂ.ಎ. ಪದವಿ ಗಳಿಸಿದರು.

ಮರುಳಸಿದ್ದಪ್ಪನವರು 'ಆಧುನಿಕ ಕನ್ನಡ ನಾಟಕ ವಿಮರ್ಶೆ' ಮಹಾಪ್ರಬಂಧ ಮಂಡಿಸಿ ಡಾಕ್ಟೊರೇಟ್ ಗೌರವ ಗಳಿಸಿದರು.  ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿ ಅನೇಕ ಪ್ರತಿಭೆಗಳನ್ನು ಬೆಳಗಿಸಿದರು. 

ಮರುಳಸಿದ್ದಪ್ಪನವರಿಂದ ರಂಗಭೂಮಿ, ನಾಟಕ ಮತ್ತು ಜಾನಪದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಸಲ್ಲುತ್ತಿದೆ. ಅವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿ‌ ಸಹಾ ಅಪಾರ ಕೆಲಸ ಮಾಡಿದ್ದಾರೆ. ಪ್ರಗತಿಪರ ನೈತಿಕ ಚಳವಳಿಗಳಲ್ಲಿ ಅವರದ್ದು ಸದಾ ಪ್ರಧಾನ ಹೆಸರು.

ಮರುಳಸಿದ್ದಪ್ಪನವರು ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ ಸಂಪುಟಗಳಲ್ಲಿ ಷಟ್ಪದಿ ಸಾಹಿತ್ಯ ಮೂಡಿಸಿದ್ದಾರೆ. ಅವರ ಹೆಸರಾಂತ ಸಂಪಾದನೆಗಳಲ್ಲಿ ಕನ್ನಡ ನಾಟಕ: ವಿಮರ್ಶೆ (೧೯೭೮),  ಲಾವಣಿಗಳು (೧೯೭೨),  ಶತಮಾನದ ನಾಟಕ(೨೦೦೩), ಒಡನಾಟ (೨೦೦೩), ವಚನ ಕಮ್ಮಟ ( ಇತರರೊಂದಿಗೆ), ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦) ಮುಂತಾದವು ಸೇರಿವೆ. 

ಮರುಳಸಿದ್ದಪ್ಪನವರ ಅನುವಾದಗಳಲ್ಲಿ 
ಮೀಡಿಯಾ (ಯುರಿಪಿಡೀಸನ ನಾಟಕ), ಎಲೆಕ್ಟ್ರ (ಸಾಫೋಕ್ಲಿಸನ ನಾಟಕ), ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ), ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್ ಕೃತಿ) ಸೇರಿವೆ.

ಉಲ್ಲಾಸ (೨೦೧೩), ಲಂಕೇಶ ಬದುಕು ಬರಹ (೨೦೧೯), ಸಂಗಾತಿ ಮುಂತಾದ ಹಲವಾರು ಕೃತಿಗಳನ್ನೂ ಮೂಡಿಸಿದ್ದಾರೆ. 
 
ನೋಟ ನಿಲುವು (೨೦೦೨) ಅವರ ಪ್ರವಾಸ ಕಥನ.

ಮರುಳಸಿದ್ದಪ್ಪನವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.  ‘ಎದೆಯ ದನಿ’ ಎಂಬ ಗೌರವಗ್ರಂಥವನ್ನು ಅಭಿಮಾನಿಗಳು ಸಮರ್ಪಿಸಿದ್ದಾರೆ.

ಮರುಳಸಿದ್ದಪ್ಪನರು ಪ್ರತಿದಿನ ಫೇಸ್ಬುಕ್ಕಿನಲ್ಲಿ ನೀಡುತ್ತಿರುವ ವಚನ ಸಾಹಿತ್ಯದ ಒಳತಿರುಳನ್ನು ಸವಿಯುವ ಭಾಗ್ಯ ನಮ್ಮದಾಗಿದೆ.

ಪೂಜ್ಯರಾದ ಮರುಳಸಿದ್ದಪ್ಪನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

 On the birthday of our great scholar and writer Prof. Marulasiddappa Karehalli Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ