ಎನ್. ಎಸ್. ಮಂಜು
ಎನ್. ಎಸ್. ಮಂಜು
ನಂಜನಗೂಡು ಶಿವನಂಜು ಮಂಜು ಅವರು ಭಾರತೀಯ ವೃತ್ತಿಪರ ಫುಟ್ಬಾಲ್ ಆಟಗಾರರಾಗಿ ಖ್ಯಾತರು. ಇವರು ಭಾರತ ತಂಡವನ್ನು ಪ್ರತಿನಿಧಿಸಿದ್ದ ಕೀರ್ತಿವಂತರು.
ಮಂಜು ಅವರು 9.5.1984 ರಂದು ಮೈಸೂರಿನಲ್ಲಿ ಜನಿಸಿದರು.
ಮಂಜು ಭಾರತೀಯ ಪುಟ್ಬಾಲ್ನ ಪ್ರತಿಷ್ಟಿತ ಐ-ಲೀಗ್ನಲ್ಲಿ ಬೆಂಗಳೂರು ಎಫ್ಸಿ ಪರ ಡಿಫೆಂಡರ್ ಆಗಿ ಆಡಿದ್ದರು. ಭಾರತ ತಂಡದ ಪರ 25 ಬಾರಿ ಆಡಿದ್ದರು. ಅವರು ಪ್ರಸ್ತುತ ಇಂಡಿಯನ್ ಸೂಪರ್ ಲೀಗ್ಗಾಗಿ ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಚಾನೆಲ್ನಲ್ಲಿ ಫುಟ್ಬಾಲ್ ಕುರಿತಾದ ನಿರೂಪಕರಾಗಿದ್ದಾರೆ.
ಮಂಜು ಅವರು ತಮ್ಮ ಆರಂಭಿಕ ವೃತ್ತಿಜೀವನದಲ್ಲಿ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಮಹೀಂದ್ರಾ ಯುನೈಟೆಡ್ ಮತ್ತು ಮೋಹನ್ ಬಗಾನ್ ತಂಡಗಳಿಗಾಗಿ ರಾಷ್ಟ್ರೀಯ ಫುಟ್ಬಾಲ್ ಲೀಗ್ ಮತ್ತು ಐ-ಲೀಗ್ನಲ್ಲಿ ಆಡಿದರು. 2009 ರಲ್ಲಿ FPAI ಅವಾರ್ಡ್ಸ್ ನೈಟ್ನ ಉದ್ಘಾಟನಾ ಆವೃತ್ತಿಯಲ್ಲಿ ಮಂಜು ಅವರು ‘ಅತ್ಯುತ್ತಮ ಭಾರತೀಯ ಆಟಗಾರ’ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
2011ರಲ್ಲಿ ಮಂಜು ಅವರು ತಮ್ಮ ರಾಷ್ಟ್ರೀಯ ತಂಡದ ಸಹ ಆಟಗಾರರಾದ ರೆನೆಡಿ ಸಿಂಗ್ ಜೊತೆಗೆ, ಬೈಚುಂಗ್ ಭುಟಿಯಾ ಅವರ ಮಾಲೀಕತ್ವದ ಐ-ಲೀಗ್ 2 ನೇ ವಿಭಾಗದ ಯುನೈಟೆಡ್ ಸಿಕ್ಕಿಂ ಎಫ್ಸಿ ತಂಡಕ್ಕೆ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. 2012 ರಲ್ಲಿ ಮಂಜು ಅವರು ಪುಣೆ ಎಫ್ಸಿ ತಂಡದೊಂದಿಗೆ ಆಡಲು ಸಹಿ ಹಾಕಿದ್ದರು. 2013-14 ಋತುವಿಗಾಗಿ ಹೊಸ ನೇರ-ಪ್ರವೇಶವಾಗಿ ಐ-ಲೀಗ್ ಕ್ಲಬ್ ಬೆಂಗಳೂರು FC ಪರವಾಗಿ ಆಡತೊಡಗಿದರು.
ದೇಶೀಯ ಲೀಗ್ ಫುಟ್ಬಾಲ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಜು ಅವರು ಭಾರತ ರಾಷ್ಟ್ರೀಯ ಫುಟ್ಬಾಲ್ ತಂಡಕ್ಕೆ ಆಯ್ಕೆಗೊಂಡರು. ಹಿರಿಯರ ತಂಡದಲ್ಲಿ ಆಡುವ ಮೊದಲು, ಮಂಜು ಅವರು ಭಾರತ U23 ತಂಡದ ನಾಯಕರಾಗಿದ್ದರು. ಅವರು ಪ್ರತಿಷ್ಠಿತ ನೆಹರು ಕ್ಯುಪಿನ್ 2007 ಮತ್ತು 2009 ಗೆದ್ದ ಭಾರತ ರಾಷ್ಟ್ರೀಯ ತಂಡದಲ್ಲಿದ್ದರು.
ಮಂಜು ಅವರಿಗೆ ರಾಜ್ಯ ಸರ್ಕಾರದಿಂದ 2004ರಲ್ಲಿ ಏಕಲವ್ಯ ಪ್ರಶಸ್ತಿ ಮತ್ತು 2003ರಲ್ಲಿ ಕರ್ನಾಟಕ ಒಲಂಪಿಕ್ಸ್ ಅಸ್ಸೋಸಿಯೇಷನ್ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ತಮ್ಮ ಪ್ರತಿಭೆ ಪರಿಶ್ರಮಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಭಾರತೀಯ ವೃತ್ತಿಪರ ಫುಟ್ಬಾಲ್ ಆಟಗಾರರಾದ ನಮ್ಮ ಹೆಮ್ಮೆಯ ಕನ್ನಡಿಗ ಎನ್. ಎಸ್. ಮಂಜು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
On the birthday of our Great Foot Ball Player S. N. Manju 🌷🌷🌷
ಕಾಮೆಂಟ್ಗಳು