ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಸಂತ ಗಣೇಶ್


 ವಸಂತ ಗಣೇಶ್

ವಸಂತ ಗಣೇಶ್ ಸಾಹಿತ್ಯ ಪ್ರೀತಿಯಿಂದಲೇ  ರೂಪುಗೊಂಡ ಅಪರೂಪದ ಸಹೃದಯ ಬರಹಗಾರ್ತಿ.  ಇವರು ಸಂದರ್ಶನ ರೂಪದಲ್ಲಿ ಮೂಡಿಸಿರುವ ಅನೇಕ ವ್ಯಕ್ತಿಚಿತ್ರಗಳ ಅಭಿಮಾನಿ ನಾನು. 

"ತೀರಾ ಸಾಮಾನ್ಯರಲ್ಲಿ ಸಾಮಾನ್ಯಳು‌ ನಾನು" ಎನ್ನುವ ಸರಳ ಸ್ವಭಾವದ ವಸಂತ ಗಣೇಶ್ ಅವರ ಹುಟ್ಟುಹಬ್ಬ ಜೂನ್ 28ರಂದು.  ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಣ್ಣ ಹಳ್ಳಿ ಸೂರಾಪುರ ಇವರು ಹುಟ್ಟಿದ ಊರು. ತಂದೆ ಸುಬ್ಬರಾವ್ ಜಮೀನ್ದಾರರು.  ತಾಯಿ ವಿಜಯಲಕ್ಷ್ಮಿ ಗೃಹಿಣಿ. 

ವಸಂತ ಗಣೇಶ್ ಕೆಲ ವರ್ಷಗಳ ಕಾಲ ಅಕೌಂಟೆಂಟ್ ಆಗಿ ವೃತ್ತಿ ನಿರ್ವಹಿಸಿದರು.  ಮುಂದೆ ಕುಟುಂಬದ ಆದ್ಯತೆಗಳ ಮೇಲೆ  ಗೃಹಿಣಿಯಾಗಿದ್ದಾರೆ. ಅಡಿಗೆ ಮಾಡುವದು ಮತ್ತು ಪ್ರವಾಸ ಇವರ ಇಷ್ಟದ ಹವ್ಯಾಸ. ಶಿಲ್ಪಕಲೆ ಹಾಗೂ ಐತಿಹಾಸಿಕ ಸ್ಮಾರಕಗಳ ಕುರಿತು ತಿಳಿಯುವ ಹಂಬಲ ಇವರದು.  ಆ ಕುರಿತು ಅನೇಕ ಲೇಖನಗಳನ್ನು ಮೂಡಿಸಿದ್ದಾರೆ. 

ವಸಂತ ಅವರಿಗೆ ಸಾಹಿತ್ಯ ಪ್ರೀತಿ ಚಿಕ್ಕಂದಿನಿಂದಲೂ ಜೊತೆಗೂಡಿದೆ. ಬಾಲಮಿತ್ರ, ಚಂದಮಾಮ, ಭಾರತ ಭಾರತಿ ಪುಸ್ತಕಗಳಿಂದ ಇವರ ಓದು ಆರಂಭಗೊಂಡಿತು. ಹೈಸ್ಕೂಲಿಗೆ ಬಂದ ಮೇಲೆ ಕಾದಂಬರಿಗಳನ್ನು ಓದಲು ಪ್ರಾರಂಭಿಸಿದರು. ಇತ್ತೀಚಿನ ಐದಾರು ವರ್ಷಗಳಿಂದ ಸಣ್ಣ ಪುಟ್ಟ ಬರಹಗಳು, ಕವಿತೆ ‌ಕಥೆ ಬರೆಯಲು ಆರಂಭಿಸಿದರು. 

'ಪುಸ್ತಕ ಅವಲೋಕನ' ಎನ್ನುವ ಫೇಸ್ ಬುಕ್ ಬಳಗದ ಅಡ್ಮಿನ್ಗಳಲ್ಲಿ ಒಬ್ಬರಾಗಿ ಸೇರಿದ ಮೇಲೆ ವಸಂತ ಅವರಲ್ಲಿ ಸಾಹಿತ್ಯದಲ್ಲಿ ಒಲವು ಮತ್ತಷ್ಟು ಹೆಚ್ಚಾಗಿದೆ. ಅಲ್ಲಿ ಹಲವಾರು ಲೇಖಕರ ಪರಿಚಯ (ಸಂದರ್ಶನ)  ಮಾಡುತ್ತಾ ಬಂದಿದ್ದಾರೆ. ಜೊತೆಗೆ ಹಳೆಯ ಲೇಖಕರ ಪರಿಚಯವನ್ನೂ  ಬರೆಯುತ್ತಾ ಬಂದಿದ್ದಾರೆ.

ಆತ್ಮೀಯ ಸಹೃದಯರಾದ ವಸಂತ ಗಣೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ