ಕಿರಣ್ ದಾಬಡೆ
ಕಿರಣ್ ದಾಬಡೆ
ಪ್ರೊ. ಕಿರಣ್ ದಾಬಡೆ ಅವರು ಪ್ರಾಧ್ಯಾಪಕರಾಗಿ, ಸಮಾಜ ಶಾಸ್ತ್ರಜ್ಞರಾಗಿ, ಬರೆಹಗಾರರಾಗಿ ಹಾಗೂ ಗುರುದೇವ್ ಆರ್.ಡಿ. ರಾನಡೆ ಅವರ ನೇರ ಪ್ರಭಾವಕ್ಕೊಳಗಾದವರಾಗಿ ಬಹುಮುಖಿ ಸಾಧನೆ ಮಾಡಿದ್ದಾರೆ. ಅತೀಂದ್ರಿಯತೆ (mysticism) ಮತ್ತು ಮನಃಶಾಸ್ತ್ರಗಳಿಗೂ ಇವರ ಆಸಕ್ತಿ ವ್ಯಾಪಿಸಿದೆ.
ಕಿರಣ್ ದಾಬಡೆ ಅವರು 1950ರ ಜೂನ್ 3ರಂದು ಬೆಳಗಾವಿಯಲ್ಲಿ ಜನಿಸಿದರು. ತಂದೆ ಬಿ. ಎಸ್. ದಾಬಡೆ ಅವರು ನ್ಯಾಯವಾದಿಗಳಾಗಿದ್ದರು. ತಾಯಿ ಪ್ರಮೀಳ. ಕಿರಣ್ ದಾಬಡೆ ಅವರು ಶಾಲೆ ಮತ್ತು ಬಿ.ಎ. ವರೆಗಿನ ಓದನ್ನು ವಿಜಯಪುರದಲ್ಲಿ ಕೈಗೊಂಡು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ 1972ರಲ್ಲಿ ಎಂ.ಎ. ಪದವಿ ಪಡೆದರು. 1993ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ 'Sociological Analysis of Nimbargi Sampradaya: A case study in Sociology of religion' ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದರು.
ಕಿರಣ್ ದಾಬಡೆ ಅವರು 1973ರಲ್ಲಿ ಕೆಲ ಸಮಯ ಉಜಿರೆಯ ಎಸ್.ಡಿ. ಎಮ್. ಕಾಲೇಜಿನಲ್ಲಿ ಅಧ್ಯಾಪನ ನಡೆಸಿದರು. 1974ರಿಂದ 2008 ಅವಧಿಯಲ್ಲಿ ಉಡುಪಿಯ ಎಸ್.ಪಿ. ಸಂಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪನ ನಡೆಸಿದರು.
ಕಿರಣ್ ದಾಬಡೆ ಅವರ ಪ್ರಕಟಿತ ಕೃತಿಗಳಲ್ಲಿ ''Sociology of Religion : A Case study of Nimbargi Sampradaya (1998)',
'ನಿಂಬರಗಿ ಸಂಪ್ರದಾಯದಲ್ಲಿರುವ ಕೆಲವು ಪ್ರಚಲಿತ ಕಥೆಗಳು', A brief Bio-information of Kannada Poet Saints 2020' ಸೇರಿವೆ. ಕಿರಣ್ ದಾಬಡೆ ಅವರ ಅನೇಕ ಲೇಖನಗಳು 'Pathway to God', (ಬೆಳಗಾವಿಯ ಎ.ಸಿ. ಪಿ. ಆರ್), ಸಮಾಜ ಶೋಧನ (ಮಂಗಳೂರು), ಫ್ರೀ ಪ್ರೆಸ್ ಜರ್ನಲ್ ಮುಂಬೈ ಮುಂತಾದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಇವರ ಪದ ಸಂಪತ್ತಿನಲ್ಲಿ Santometry, Theometry, Kshetrometry, Santolatry ಸೇರಿವೆ.
ಕಿರಣ್ ದಾಬಡೆ ಅವರು ಮಹಾನ್ ತತ್ವಶಾಸ್ತ್ರಜ್ಞರಾದ ಗುರುದೇವ್ ಆರ್.ಡಿ. ರಾನಡೆ (1886-1957) ಅವರ ನೇರ ಕೃಪೆ ಗಳಿಸಿದವರು. ಇವರು ಅಂತರರಾಷ್ಟ್ರೀಯ ಜರ್ನಲ್ 'ಪಾಥ್ ವೇ ಟು ಗಾಡ್'ನ ಸಂಪಾದಕ ಮಂಡಲಿಯಲ್ಲಿದ್ದಾರೆ. ಇವರು ದೈವಿಕ ವ್ಯಕ್ತಿತ್ವದಿಂದ ಕಂಗೊಳಿಸುತ್ತಿದ್ದ ಗುರುದೇವ ರಾನಡೆ ಅವರ ನಿಂಬರಗಿ ಸಂಪ್ರದಾಯದಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ.
ಕಿರಣ್ ದಾಬಡೆ ಅವರ ಪತ್ನಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೊದಲನೆ ಪುತ್ರ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಎರಡನೇ ಪುತ್ರ ನೀಹಾರ್ ದಾಬಡೆ ಅವರು ಬಿ.ಇ. ಮೆಕಾನಿಕಲ್ ಓದಿದ್ದು, ಎ. ಆರ್. ರಹಮಾನ್ ಅವರ ಸಂಗೀತ ವಿದ್ಯಾಲಯದಲ್ಲಿ ಸಂಗೀತದ ಕೋರ್ಸ್ ಅನ್ನು ಮುಗಿಸಿ, ಯಶ್ ರಾಜ್ ಸ್ಟುಡಿಯೋದ ಶಾಂತನೊ ಅವರಲ್ಲಿ ತರಬೇತಿ ಗಳಿಸಿದ್ದಾರೆ. ಅವರಿಗೆ ಕಾರ್ಟೂನ್ ಪೇಂಟಿಗ್ಸ್ ಮತ್ತು ಸಂಗೀತದಲ್ಲಿ ಹಲವಾರು ಬಹುಮಾನಗಳು ಸಂದಿವೆ. ನಮ್ಮ ಮೆಟ್ರೊ ಸಿಗ್ನೇಚರ್ ಟ್ಯೂನ್ ನಿರ್ವಹಿಸಿದ ಕೀರ್ತಿ ಇವರದ್ದಾಗಿದೆ.
ಹಿರಿಯರಾದ ಕಿರಣ್ ದಾಬಡೆ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Kiran Dabade Sir 🌷🙏🌷
ಕಾಮೆಂಟ್‌ಗಳು