ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ



 ಜ್ಯೋತಿ ಬಣದಲಿ ಅವನೆ ದಿವ್ಯ ಪರಂಜ್ಯೋತಿ,
ಅಡಗಿಹನು ಎಲ್ಲರೊಳಗಣ ಗುಡಿಯ ಗರ್ಭದಲ್ಲಿ.
ಜ್ಞಾನವೇ ಅವನ ಪರಿ, ಜ್ಞಾನವೇ ಅವನ ಸಿರಿ,
ದಾರಿ ಸೇರಲೂ ಅವನ ಜ್ಞಾನ ಒಂದೆ.
ಸುಳಿವಿಲ್ಲ ಯಾವ ತಮ, ಬೇಕಿಲ್ಲ ಯಾವ ಮಮ,
ಪ್ರೇಮದೊಳಗಣ ಅವನ ಸೇರಲಲ್ಲಿ.
ನಮ್ಮಲ್ಲಿ ನೋಡುವವ, ಅನುಮತಿಯ ಕೊಡುವ ನವ,
ಸಲಹಿ ಪೂರೈಸಿ, ಅನುಭಾವಿಸುವ ಎಲ್ಲವೂ ಅವ,
ಆತ್ಮರೂಪಿ ತಾನು ಪರಮಪುರುಷ.
At Kukkarahalli Lake, Mysore on 26.8.2013

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ