ಅಂಜನಾ ಪಿ. ರಾವ್
ಅಂಜನಾ ಪಿ ರಾವ್
ವಿದುಷಿ ಅಂಜನಾ ಪಿ. ರಾವ್ ಕರ್ನಾಟಕ ಸಂಗೀತಲೋಕದಲ್ಲಿ ಹೆಸರಾಗಿದ್ದಾರೆ.
ಸೆಪ್ಟೆಂಬರ್ 20, ಅಂಜನಾ ಅವರ ಜನ್ಮದಿನ. ಅಂಜನಾ ಅವರು ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಪದವೀಧರೆ.
ತಮ್ಮ 4ನೇ ವಯಸ್ಸಿನಿಂದ ವಿದ್ವಾನ್ ಎಚ್. ಎಸ್. ನಾಗರಾಜ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಕೆಯನ್ನು ಪ್ರಾರಂಭಿಸಿದ ಅಂಜನಾ, ತಮ್ಮ 8ನೇ ವಯಸ್ಸಿನಲ್ಲಿಯೇ ಪ್ರೌಢ ಮಟ್ಟದ ಕಚೇರಿಗಳನ್ನು ನೀಡಿ ಬಾಲ ಕಲಾವಿದೆ ಎನಿಸಿಕೊಂಡವರು.
ಅಂಜನಾ ಅವರು ತಮ್ಮ ನಂತರದ ಸಂಗೀತ ಶಿಕ್ಷಣವನ್ನು ವಿದ್ವಾನ್ ಎಸ್. ಆರ್. ಮಾರುತಿ ಪ್ರಸಾದ್ ಅವರ ಬಳಿ ನಡೆಸಿ, ಪ್ರಸ್ತುತ ಉನ್ನತ ಮಟ್ಟದ ಕಲಿಕೆಯನ್ನು ವಿದುಷಿ ಡಾ.ಟಿ ಎಸ್ ಸತ್ಯವತಿ ಅವರ ಬಳಿ ಮುಂದುವರಿಸಿದ್ದಾರೆ.
ಗಾಯನ ಸಮಾಜ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಅಲ್ಲದೆ ಭಾರತಾದ್ಯಂತ ಕಾರ್ಯಕ್ರಮಗಳನ್ನು ನೀಡಿರುವ ಅಂಜನಾ ಅವರು, ಟಿ ಟಿ ಡಿ svbc channelನ ಸ್ವರ ರಾಗ ಸುಧಾ, ನಾದನೀರಜಾನಂ, ಸ್ವರ ಮಾಧುರಿ ಹಾಗು ಭಕ್ತಿ ಗಾನ ಸುಧಾ ಮುಂತಾದ ಸರಣಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹಲವಾರು ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ.
ವಿದುಷಿ ಅಂಜನಾ ಪಿ. ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Anjana Prahallad 🌷🌷🌷
ಕಾಮೆಂಟ್‌ಗಳು