ಎಚ್. ಎಸ್. ರಾಮಾನುಜ
ಎಚ್. ಎಸ್. ರಾಮಾನುಜ
ಎಚ್. ಎಸ್. ರಾಮಾನುಜ ಅವರು ಪತ್ರಿಕಾಲೋಕ ಮತ್ತು ಜಾಹೀರಾತು ಲೋಕದಲ್ಲಿ ತಜ್ಞ ಭಾಷಾಂತರಕಾರರಾಗಿ ಮತ್ತು ಭಾಷಾ ವ್ಯಾಖ್ಯಾನಕಾರರಾಗಿ ಹೆಸರಾಗಿದ್ದರು.
ಹೆರಗು ಶ್ರೀನಿವಾಸ ರಾಮಾನುಜ ಅವರು 1960ರ ಮೇ 2ರಂದು ಜನಿಸಿದರು. ಮೂಲತಃ ಹಾಸನದವರಾದ ರಾಮಾನುಜ ಅವರು ಓದಿ ಬೆಳೆದದ್ದು ಬೆಂಗಳೂರಿನಲ್ಲಿ.
ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಸಮೂಹ ಪತ್ರಿಕೆಗಳಲ್ಲಿ ಭಾಷಾಂತರಕಾರರಾಗಿ ಮತ್ತು ಭಾಷಾ ವ್ಯಾಖ್ಯಾನಕಾರರಾಗಿ ಸೇವೆ ಸಲ್ಲಿಸುತ್ತಿದ್ದ ರಾಮಾನುಜ ಅವರ ತಜ್ಞ ಭಾಷಾಂತರ ಸೇವೆ ಸಾಹಿತ್ಯ, ಸಾಂಸ್ಕೃತಿಕ, ಆರ್ಥಿಕ, ವಾಣಿಜ್ಯ, ಕಾನೂನು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಲ್ಲುತ್ತಿತ್ತು.
ಸಾಹಿತ್ಯ, ಸಂಸ್ಕೃತಿ ಮತ್ತು ಕಲೆಗಳ ಕುರಿತು ಅಪಾರ ಆಸಕ್ತಿ ಮತ್ತು ಅಭಿರುಚಿ ಉಳ್ಳ ರಾಮಾನುಜ ಅವರ ಸ್ನೇಹ ಫೇಸ್ಬುಕ್ನಲ್ಲಿ ಪ್ರಾರಂಭದ ದಿನಗಳಿಂದ ಲಭಿಸಿದ ಸೌಭಾಗ್ಯ ನನ್ನದಾಗಿತ್ತು. ಅನೇಕ ವಿಚಾರಗಳ ಕುರಿತು ನನ್ನ ಜೊತೆ ಮೆಸೆಂಜರ್ ಸಂಪರ್ಕದಲ್ಲಿದ್ದ ಅವರು, ಮಹಾನ್ ಚಲನಚಿತ್ರ ಮತ್ತು ರಂಗ ಕಲಾವಿದರೂ, ತಮ್ಮ ಮುದ್ರಣಾಲಯದಿಂದ ಹೆಸರಾಗಿದ್ದ ಸಂಪತ್ ಅವರು ತಮ್ಮ ತಾಯಿಯ ಸಂಬಂಧಿ ಎಂದು ತಿಳಿಸಿದ್ದರು.
ಎಚ್. ಎಸ್. ರಾಮಾನುಜ ಅವರು 2024ರ ಸೆಪ್ಟೆಂಬರ್ 13ರಂದು ಹೃದಯಾಘಾತದಿಂದ ನಿಧನರಾದರು.. ರಾಮಾನುಜ ಅವರಿಗೆ ಇನ್ನೂ ಈ ಲೋಕವನ್ನು ಬಿಟ್ಟುಹೋಗುವ ವಯಸ್ಸಾಗಿರಲಿಲ್ಲ. ಆತ್ಮೀಯ ಸಹೃದಯಿ, ಸಜ್ಜನ, ನಿಷ್ಠಾವಂತ ಜೀವಿ ನಮ್ಮಿಂದ ಕಣ್ಮರೆಯಾದದ್ದು ದುಃಖದ ಸಂಗತಿ.
Ramanuja H S 🌷🙏🌷
ಕಾಮೆಂಟ್‌ಗಳು