ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಷರ್‍ವುಡ್ ಆಂಡರ್‍ಸನ್


 ಷರ್‍ವುಡ್ ಆಂಡರ್‍ಸನ್ 


ಷರ್‍ವುಡ್ ಆಂಡರ್ಸನ್ ಪ್ರಖ್ಯಾತ ಕಥೆಗಾರ. 

ಷರ್‍ವುಡ್ ಆಂಡರ್‍ಸನ್  1876ರ ಸೆಪ್ಟೆಂಬರ್ 13ರಂದು ಅಮೆರಿಕದ ಓಹಿಯೋದ ಕಾಮ್ಡೆನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ. ಆಂಡರ್ಸನ್ ಚಿಕ್ಕವನಿದ್ದಾಗಲೇ ಇವನ ಹೆತ್ತವರು ಈ ಹಳ್ಳಿಯನ್ನು ತೊರೆದರು. ಹಲವಾರು ಸ್ಥಳಗಳ ನಂತರ 1884ರಲ್ಲಿ ಕ್ಲೈಡ್ ಎಂಬಲ್ಲಿ ಈ ಕುಟುಂಬ ನೆಲೆಸಿತು.  ಕಡು ಬಡತನದಿಂದಾಗಿ ಷರ್ವುಡ್ ಬಾಲ್ಯದಲ್ಲಿಯೇ ಸಂಪಾದನೆಗೆ ತೊಡಗಬೇಕಾಯಿತು. ಇದರಿಂದಾಗಿ ಇವನ ವಿದ್ಯಾಭ್ಯಾಸಕ್ಕೆ ತೊಡಕುಂಟಾಯಿತು. ಸ್ಪ್ಯಾನಿಷ್ ಅಮೆರಿಕನ್ ಯುದ್ಧದಲ್ಲಿ ಪಾಲ್ಗೊಂಡು ಅನಂತರ ಕೆಲಕಾಲ ಬಣ್ಣದ ಕಾರ್ಖಾನೆಯೊಂದರ ವ್ಯವಸ್ಥಾಪಕನಾಗಿ ಕೆಲಸ ಮಾಡಿದ.

ವಿಂಡಿ ಮೆಕ್ ಫರ್‍ಸನ್ಸ್ ಸನ್ (1916), ಮಾರ್ಚಿಂಗ್ ಮೆನ್ (1917) ಮೊದಲಾದ ಕಾದಂಬರಿಗಳನ್ನು ಬರೆದರೂ ವೈನ್ಸ್‍ಬರ್ಗ್ ಓಹಿಯೊ ಎಂಬ ಕಥಾಸಂಕಲನ ಪ್ರಕಟವಾದ ಮೇಲೆ ಷರ್‍ವುಡ್ ಪ್ರಸಿದ್ಧನಾದ. ಪೂರ್‍ವೈಟ್ (1920), ಡಾರ್ಕ್ ಲಾಫ್ಟರ್ (1925), ಪರ್‍ಹ್ಯಾಪ್ಸ್ ವಿಮೆನ್(1931) ಮೊದಲಾದ ಕಾದಂಬರಿಗಳು ಯಂತ್ರಗಳ ಆಗಮನದಿಂದ ನಗರ ಜೀವನದ ನೈರ್ಮಲ್ಯ ಕದಡಿದುದನ್ನೂ ಅವುಗಳನ್ನು ಅವಲಂಬಿಸಿ ಬಿಳಿಯರ ಬದುಕು ಪಕ್ವಹೀನವಾಗುತ್ತಿರುವುದನ್ನು ಅವುಗಳಿಂದ ಪಾರಾಗುವ ಬಗ್ಗೆ ಯಾವುದೆಂಬುದನ್ನೂ ಚಿತ್ರಿಸುತ್ತವೆ. ದಿ ಟ್ರಯಂಫ್ ಆಫ್ ದಿ ಎಗ್ (1921), ಹಾರ್ಸಸ್ ಅಂಡ್ ಮೆನ್ (1923), ಡೆತ್ ಇನ್ ದಿ ವುಡ್ಸ್ (1933)- ಇವು ಆತನ ಕೆಲವು ಕಥಾ ಸಂಗ್ರಹಗಳು. ಹೋಮ್‍ಟೌನ್ ಎಂಬ ಪ್ರಬಂಧ ಸಂಕಲನ ಮರಣಾನಂತರ ಪ್ರಕಟವಾಯಿತು.

ಷರ್‍ವುಡ್ ಆಂಡರ್‍ಸನ್ 1941ರ ಮಾರ್ಚ್ 8ರಂದು ನಿಧನನಾದ.

On the birth anniversary of Sherwood Anderson

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ