ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿ. ಎಸ್. ವಾಸುದೇವ್


ವಿ. ಎಸ್. ವಾಸುದೇವ್

ಡಾ. ವಿ. ಎಸ್. ವಾಸುದೇವ್ ಅವರು ವೃತ್ತಿಪರ ಭೂವಿಜ್ಞಾನಿಯಾಗಿದ್ದು, ಚಿನ್ನ, ಮೂಲ ಲೋಹಗಳು ಮತ್ತು  ಫೆರಸ್ ಖನಿಜಗಳು ಅನ್ವೇಷಣೆಯಲ್ಲಿ ಪರಿಣಿತರಾಗಿ ವಿಶ್ವಮಾನ್ಯರಾಗಿದ್ದಾರೆ.

ವಾಸುದೇವ್ 1948ರ ಸೆಪ್ಟೆಂಬರ್ 29ರಂದು ಜನಿಸಿದರು.  ಇವರು 1970 ರಲ್ಲಿ ಸಂಶೋಧನಾ ಉದ್ಯೋಗಿಯಾಗಿ ತಮ್ಮ ವೃತ್ತಿಪರ ಪ್ರಯಾಣವನ್ನು ಪ್ರಾರಂಭಿಸಿದರು. ಹಟ್ಟಿ ಚಿನ್ನದ ಗಣಿಗಳ ಪ್ರದೇಶ ಇವರ ಕಾರ್ಯವ್ಯಾಪ್ತಿಯಲ್ಲಿತ್ತು. 1973ರಲ್ಲಿ, ಕರ್ನಾಟಕ ಕಾಪರ್ ಕನ್ಸೋರ್ಷಿಯಮ್ ಭಾಗವಾಗಿ ಇವರು ಇಂಗಳಧಾಲ್ ಮತ್ತು ಕಲ್ಯಾಡಿ ತಾಮ್ರದ ಗಣಿಗಳಲ್ಲಿ ಮೈನಿಂಗ್ ಜಿಯಾಲಜಿಸ್ಟ್ ಪಾತ್ರವನ್ನು ವಹಿಸುವ ಮೂಲಕ ತಮ್ಮ ಪರಿಣತಿಯನ್ನು ವಿಸ್ತರಿಸಿಕೊಂಡರು.

ವಾಸುದೇವ್ 1979ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಿಂದ ಆರ್ಥಿಕ ಭೂವಿಜ್ಞಾನದಲ್ಲಿ ತಮ್ಮ ಪಿಎಚ್.‌ಡಿ ಪಡೆದರು. ಪದ್ಮಶ್ರೀ ಪುರಸ್ಕೃತ ಭೂವಿಜ್ಞಾನಿ ಡಾ. ಬಿ. ಪಿ. ರಾಧಾಕೃಷ್ಣ ಇವರ ಪಿಎಚ್.ಡಿ ಮಾರ್ಗದರ್ಶಕರಾಗಿದ್ದರು. ವಾಸುದೇವ್ ತಮ್ಮ ವೃತ್ತಿಜೀವನದುದ್ದಕ್ಕೂ, ಗ್ರೀನ್ಲ್ಯಾಂಡ್, ಐಸ್ಲ್ಯಾಂಡ್ ಮತ್ತು ಅಲಾಸ್ಕಾ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಅನ್ವೇಷಣೆಗಾಗಿ ಉತ್ತರ ಸುಡಾನ್, ಪಶ್ಚಿಮ ಆಫ್ರಿಕಾದ ಸಿಯೆರಾ ಲಿಯೋನ್‌ಗೆ ಸಹಾ ಪ್ರಯಾಣಿಸಿದ್ದರು. 

1986 ಮತ್ತು 1987 ರ ಜುಲೈ ಮತ್ತು ಆಗಸ್ಟ್‌ನಲ್ಲಿ, ಡಾ. ವಾಸುದೇವ್ ಅವರು ಆಗ್ನೇಯ ಗ್ರೀನ್‌ಲ್ಯಾಂಡ್‌ನಲ್ಲಿನ ಅಂತರರಾಷ್ಟ್ರೀಯ ಭೂವೈಜ್ಞಾನಿಕ ಯೋಜನೆಯಲ್ಲಿ (expedition) ಭಾಗಿಯಾಗುವ  ಅವಕಾಶ ಗಳಿಸಿದರು. 

ಯುನೈಟೆಡ್ ಕಿಂಗ್‍ಡಂನಲ್ಲಿನ ಮುಕ್ತ ವಿಶ್ವವಿದ್ಯಾನಿಲಯದ ಡಾ. ಬ್ರಿಯಾನ್ ಫ್ರೆಂಡ್,  ಕ್ಯಾನ್‌ಬೆರಾದಲ್ಲಿನ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯ ಅಲೆನ್ ನಟ್‌ಮನ್ ಹಾಗೂ ಡೆನ್ಮಾರ್ಕ್‌ನ ಜಿಯೋಲಾಜಿಕಲ್ ಸರ್ವೆ ಆಫ್ ಗ್ರೀನ್‌ಲ್ಯಾಂಡ್‌ನ ಭೂವಿಜ್ಞಾನಿಗಳು ಈ ತಂಡದ ಭಾಗವಾಗಿದ್ದರು. 

ವಾಸುದೇವ್ ಅವರು 1990 -  1994 ರ ಅವಧಿಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ, ಡೆಪ್ಯೂಟಿ ಡೈರೆಕ್ಟರ್ ವರೆಗಿನ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. 1996 ರಿಂದ 1999 ರವರೆಗೆ, ಅವರು ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಜರ್ನಲ್‌ನ ಸಹಾಯಕ ಸಂಪಾದಕರಾಗಿದ್ದರು. 

ವಾಸುದೇವ್ ಅವರು ಸೆಪ್ಟೆಂಬರ್ 1994 ರಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದರು.  ಮುಂದೆ ಅವರು ಆಸ್ಟ್ರೇಲಿಯನ್-ಇಂಡಿಯನ್ ರಿಸೋರ್ಸಸ್ ಪ್ರೈ. ಲಿಮಿಟೆಡ್ ಒಡೆತನದ ಜಿಯೋಮೈಸೋರ್‌ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ  ಖನಿಜ ಪರಿಶೋಧನೆಯ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.  2003ರಲ್ಲಿ, ಅವರು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್‌ಗೆ ಎಕ್ಸ್‌ಪ್ಲೋರೇಶನ್ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡರು. ಈ ಎರಡು ಕಂಪನಿಗಳೊಂದಿಗೆ ತಮ್ಮ ಅಧಿಕಾರಾವಧಿಯಲ್ಲಿ, ವಾಸುದೇವ್ ಅವರು ಭಾರತದ ವಿವಿಧ ಭಾಗಗಳು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನ, 

ತಾಮ್ರ, ಮಾಲಿಬ್ಡಿನಮ್, ಸೀಸ, ಸತು, ನಿಕಲ್ ಮತ್ತು ಪ್ಲಾಟಿನಂ ಮುಂತಾದ ಲೋಹಗಳು ಮತ್ತು ಖನಿಜಗಳ ನಿಕ್ಷೇಪಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿ ಸೇವೆ ಸಲ್ಲಿಸಿದರು.  ಫೆಬ್ರವರಿ 16 ರಿಂದ ಆಗಸ್ಟ್ 2018 ರವರೆಗೆ ಅವರು ಸಹವೋಲಾ ಗೋಲ್ಡ್ ಮೈನ್ಸ್ ಮಡಗಾಸ್ಕರ್ ಪ್ರೈ.ಲಿ.ನ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದರು.  ಡಾ. ವಾಸುದೇವ್ ಅವರು 

ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿನ ಅನನ್ವೇಷಿತ ಪ್ರದೇಶವಾದ  ಗಣಜೂರ್ ಚಿನ್ನದ ನಿಕ್ಷೇಪ ಪತ್ತೆಯಲ್ಲಿ ಮಹತ್ವದ ಪಾತ್ರವಹಿಸಿದರು.  ಇದಲ್ಲದೆ ಧಾರವಾಡ ಜಿಲ್ಲೆಯ ಮಂಗಳಗಟ್ಟಿ ಮತ್ತು ಭಾವಿಹಾಳಗಳಲ್ಲಿ ಹಾಗೂ ಆಂಧ್ರಪ್ರದೇಶದ ಜೊನ್ನಗಿರಿ ಗೋಲ್ಡ್ ಫೀಲ್ಡ್ಸ್‌ನ ವೆಸ್ಟ್ ಬ್ಲಾಕ್‌ನಲ್ಲಿ ಚಿನ್ನದ ನಿಕ್ಷೇಪಗಳ ಪತ್ತೆಗಾರಿಕೆಯನ್ನು ನಿರ್ವಹಿಸಿದರು.  ಈ ಕ್ಷೇತ್ರಗಳು ರಾಷ್ಟ್ರದ ಮೊದಲ ಖಾಸಗಿ ವಲಯದ ಚಿನ್ನದ ಗಣಿಯಾಗುವ ಸಮೀಪದಲ್ಲಿವೆ. ಇವು ಖಾಸಗಿ ವಲಯದಲ್ಲಿನ ಪ್ರಥಮ ಚಿನ್ನದ ಗಣಿಯಾಗುವ ಹಂತದಲ್ಲಿದ್ದು,  ಸುಮಾರು 9 ಲಕ್ಷ ಔನ್ಸ್ ಅಷ್ಟು ಚಿನ್ನದ ಸಂಪತ್ತನ್ನು ಹೊಂದಿದೆ ಎಂದು ಆಂದಾಜಿಸಲಾಗಿದೆ.

ವಾಸುದೇವ್ ಅವರು 2012 ಜೂನ್ ಮಾಸದಲ್ಲಿ ರಾಷ್ಟ್ರೀಯ ಖನಿಜ  ಸಂಹಿತೆಗಳ ಪಾರ್ಲಿಮೆಂಟರಿ ಸಮಿತಿಗೆ ತಮ್ಮ ಸುಜ್ಞಾನವನ್ನು ಹಂಚಿಕೊಳ್ಳುವ ಗೌರವ ಪಡೆದರು. ಭಾರತ ಸರ್ಕಾರದ ಗಣಿ ಖಾತೆಗೆ ಸಂಬಂಧಿಸಿದ ಅನೇಕ ಸಮಿತಿಗಳ ಸದಸ್ಯರಾಗಿದ್ದರು. ಅವುಗಳಲ್ಲಿ Inter-Ministerial Committee on Strategic Minerals, the National Centre for Exploration Targeting, and the Mineral Policy Review Committee of NITI Aayog ಸೇರಿವೆ.  ಇವರು ಮೂರು ಬಾರಿ National Geoscience Awards Jury Committeeಯ ಸದಸ್ಯರಾಗಿದ್ದರು.  ನಾಲ್ಕು ವರ್ಷಗಳ ಕಾಲ ನವದೆಹಲಿಯ Federation of Mineral Industries (FIMI)ಯ Non-Ferrous Metals and Precious Metals ಮೇಲಿನ ಸಮಿತಿಯ ಚುನಾಯಿತ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯದ ಖನಿಜ ನಿಯಮಗಳ ಕುರಿತಾದ ಅನೇಕ ಸಮಿತಿಗಳಿಗೆ ತಜ್ಞ ತಾಂತ್ರಿಕರಾಗಿ ಮತ್ತು ಪರಿಣತ ತಜ್ಞರಾಗಿ ಸೇವೆ ನೀಡುತ್ತ ಬಂದಿದ್ದಾರೆ. 

ವಾಸುದೇವ್ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 40ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮತ್ತು ನೂರಕ್ಕೂ ಹೆಚ್ಚು ತಾಂತ್ರಿಕ ವರದಿಗಳನ್ನು ಬರೆದಿದ್ದಾರೆ. 

ಏಪ್ರಿಲ್ 2005 ರಲ್ಲಿ, ವಾಸುದೇವ್ ಅವರು  ಪತ್ನಿ ಮಾಲತಿ ಮತ್ತು ಕುಟುಂಬದ ಸದಸ್ಯರೊಂದಿಗೆ ತಮ್ಮ ತಂದೆ ಜಿ ಸಹಜಾನಂದ ಅವರ ಸ್ಮರಣಾರ್ಥ 

SACRED ಟ್ರಸ್ಟ್ (ಸಹಜಾನಂದ ಕಂಪ್ಯೂಟರ್ ನೆರವಿನ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಟ್ರಸ್ಟ್) ಸ್ಥಾಪಿಸಿ ಆ  ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳ ಅಭಿವೃದ್ಧಿಗೆ ವಿಶಾಲ ತಳಹದಿಯ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ.

ವಾಸುದೇವ್ ಅವರಿಗೆ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಪ್ರಶಸ್ತಿ ಸಂದಿದೆ. ಇದಲ್ಲದೆ 1980ರಲ್ಲಿ "ಯಂಗ್ ಸೈಂಟಿಸ್ಟ್ ಪ್ರಶಸ್ತಿ", 1983ರಲ್ಲಿ ಕರ್ನಾಟಕ ಅಸೋಸಿಯೇಷನ್ ​​ಫಾರ್ ಅಡ್ವಾನ್ಸ್ಮೆಂಟ್ ಸೈನ್ಸ್ ಪ್ರಶಸ್ತಿ, 2018 ರಲ್ಲಿ "ಆಚಾರ್ಯ ಚಾಣಕ್ಯ ಸಮ್ಮಾನ್",  2023ರಲ್ಲಿ "ಮಂತ್ರಾಲಯ ಪರಿಮಳ ಪ್ರಶಸ್ತಿ" ಸೇರಿದಂತೆ ಅನೇಕ ಗೌರವಗಳು ಸಂದಿವೆ 

ಹಿರಿಹ ಭೂವಿಜ್ಞಾನಿ ಡಾ. ವಿ. ಎಸ್. ವಾಸುದೇವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

ಮಾಹಿತಿ ಸಹಕಾರ:. Rashmi Patwardhan 🌷🌷🌷

On the birthday of Professional Earth Scientist Dr. V. S. Vasudev 🌷🙏🌷



(

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ