ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿದ್ಧಿದಾಯಕನೆ


 ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು||


ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ||

ಮಂದ ಮತಿಯನು ಬಿಡಿಸಿ ಚಂದ ಸುಜ್ಞಾನವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ ನಿನ್ನ ಪದದ್ವಂದ್ವಕೆರಗುವೆನು
ಸಂದೇಹ ಮಾಡದಲೆ ಇಂದು ಕರುಣಿಪುದು ||1||

ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ ||2||

ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭವೇಣುಕೃಷ್ಣಗತಿಪ್ರಿಯ||3||

ಸಾಹಿತ್ಯ: ವ್ಯಾಸರಾಯರು

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ