ಮಹಾಗಣಪತಿಂ ಮನಸಾಸ್ಮರಾಮಿ
ಶ್ರೀ ಮಹಾಗಣಪತಿಂ ಮನಸಾಸ್ಮರಾಮಿ
ವಸಿಷ್ಠ ವಾಮ ದೇವಾದಿವಂದಿತ
ಮಹಾಗಣಪತಿಂ ಮನಸಾಸ್ಮರಾಮಿ
ಮಹಾದೇವಸುತಂ ಗುರುಗುಹನುತಂ
ಮಾರಕೋಟಿ ಪ್ರಕಾಶಂಶಾಂತಂ
ಮಹಾಕಾವ್ಯನಾಟಕಾದಿ ಪ್ರಿಯಂ
ಮೂಷಿಕವಾಹನ ಮೋದಕಪ್ರಿಯಂ
ಶ್ರೀಮಹಾಗಣಪತಿಂ ಮನಸಾಸ್ಮರಾಮಿ
ವಸಿಷ್ಠ ವಾಮ ದೇವಾದಿವಂದಿತ
ಮಹಾಗಣಪತಿಂ ಮನಸಾಸ್ಮರಾಮಿ
ಸಾಹಿತ್ಯ: ಮುತ್ತುಸ್ವಾಮಿ ದೀಕ್ಷಿತರು
ಗಾಯನ: ಕೆ. ಜೆ. ಯೇಸುದಾಸ್
ಸಂಗೀತ: ಇಳಯರಾಜಾ
(ಶ್ರೀ ಮಹಾಗಣಪತಿಯನ್ನು ನಾನು ಮನಸಾರೆ ಸ್ಮರಿಸುತ್ತೇನೆ. ವಸಿಷ್ಠ ವಾಮದೇವರಂತಹ ಸಕಲ ಋಷಿ ಶ್ರೇಷ್ಠರಿಂದ ಅರ್ಚಿಸಲ್ಪಟ್ಟ ಮಹಾಗಣಪತಿಯನ್ನು ನಾನು ಸ್ಮರಿಸುತ್ತೇನೆ.
ಮಹಾದೇವನ ಪುತ್ರ, ಗುರುಗುಹ(ದೀಕ್ಷಿತರ ಕಾವ್ಯನಾಮವೂ ಗುರುಗುಹ)ನಿಂದ ಅಭಿಮಾನಿತನಾದ ಹಲವಾರು ಕೋಟಿ ಸೂರ್ಯರ ಪ್ರಕಾಶವುಳ್ಳವನಾದರೂ ಶಾಂತನಾದ, ಮಹಾಕಾವ್ಯ, ನಾಟಕ ಮುಂತಾದ ಕಲೆಗಳ ಪ್ರಿಯನಾದ, ಮೂಷಿಕವಾಹನನಾದ ಮಹಾಗಣಪತಿಯನ್ನು ನಾನು ಮನಸಾರೆ ಸ್ಮರಿಸುತ್ತೇನೆ.)
Thank you Sahana Rao🌷🙏🌷
ಕಾಮೆಂಟ್‌ಗಳು