ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಮರ್ಥ ಕಾಂತಾವರ


 ಸಮರ್ಥ ಕಾಂತಾವರ


ಇಂದು ಆತ್ಮೀಯ ಕ್ರಿಯಾಶೀಲ ಗೆಳೆಯ ಸಮರ್ಥ ಕಾಂತಾವರ ಅವರ ಹುಟ್ಟುಹಬ್ಬ.  ಆತ್ಮೀಯ ಸಾಂಸ್ಕೃತಿಕ ಸಹೃದಯ ಮನೋಭಾವದ ಈತ ಎಲ್ಲರಿಗೂ ಪ್ರಿಯ ವ್ಯಕ್ತಿ. 

ಸಮರ್ಥ ಕಾಂತಾವರ ಅವರ ಹುಟ್ಟು ಹಬ್ಬ ಸೆಪ್ಟೆಂಬರ್ 1ರಂದು.  ಹುಟ್ಟಿದ ಊರು ದಾವಣಗೆರೆ.  ಇವರ ಮೂಲ ಸ್ಥಳ ಅವಿಭಜಿತ ದಕ್ಷಿಣ ಕನ್ನಡದ ಕಾಂತಾವರ. ಈಗ ಇರುವುದು ಬೆಂಗಳೂರಿನಲ್ಲಿ. ತಂದೆ ಮಂಜುನಾಥ್.  ತಾಯಿ ವಿಜಯಕುಮಾರಿ. ವೃತ್ತಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನಲ್ಲಿ ಇಂಜಿನಿಯರ್. 

ಓದುವುದು ಮತ್ತು ಹಿಂದೂಸ್ತಾನಿ ಸಂಗೀತ ಸಮರ್ಥ ಅವರ ಆಸಕ್ತಿ. ಹಿಂದೂಸ್ತಾನಿ ಸಂಗೀತ ತಬಲಾದಲ್ಲಿ ಸಾಕಷ್ಟು ಅಭ್ಯಾಸ ಆಗಿದೆ. ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತಿ ಉಳ್ಳ ಇವರಿಗೆ ಫೋಟೊಗ್ರಫಿ ಪ್ರಿಯ ಹವ್ಯಾಸ.  ತಾಂತ್ರಿಕ ವಿಚಾರಗಳ ಅಧ್ಯಯನದಲ್ಲೂ ಅಪಾರ ಒಲವು. 

ಸ್ನೇಹ - ಸದಭಿರುಚಿಗಳ ಆತ್ಮೀಯ ನಗೆಮೊಗದ ಯುವ ಗೆಳೆಯ ಸಮರ್ಥ ಕಾಂತಾವರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಮರ್ಥ ಕುಟುಂಬ ವತ್ಸಲ.  ಇವರ ಫೋಟೊ ಸದಾ ಅವರ ಕುಟುಂದೊಂದಿಗೆ ನಗುಮೊಗದಲ್ಲಿ ಶೋಭಿಸುತ್ತಿರುತ್ತದೆ.  ಸಮರ್ಥರ ಕುಟುಂಬದವರಿಗೂ ಶುಭವಾಗಲಿ.


Happy birthday Samarth M Kanthavara



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ