ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲಿಕೆ ನಿರಂತರ


ಕಲಿಕೆ ನಿರಂತರ
 
ಬದುಕಿನಲ್ಲಿ ಒಂದು ರೀತಿಯಲ್ಲಿ ಎಲ್ಲರೂ ಶಿಕ್ಷಕರು
ಎಲ್ಲರೂ ಶಿಷ್ಯರು.  ಬದುಕೇ ಒಂದು ಶಾಲೆ. 

ಶಿಕ್ಷಣ ಕ್ಷೇತ್ರದಲ್ಲಿ ದುಡಿದ - ದುಡಿಯುತ್ತಿರುವ ಅನೇಕರನ್ನು ನನ್ನ ಸ್ನೇಹ ಬಳಗದಲ್ಲಿ ಕಂಡಿದ್ದೇನೆ.  ಎರಡು ವರ್ಷದ ಹಿಂದೆ ಅಂತಹವರನ್ನು ನನಗೆ ಸಾಧ್ಯವಾದ ಮಟ್ಟಿಗೆ ಇಲ್ಲಿ ಒಂದೆಡೆ ಸೇರಿಸಲು ಯತ್ನಿಸಿದ್ದೆ. ಕಳೆದೆರಡು ವರ್ಷದಲ್ಲಿ ನನ್ನ ಸ್ನೇಹ ಬಳಗ ಹಲವು ಪಟ್ಟು ವಿಸ್ತಾರಗೊಂಡಿದೆ.  ಹಾಗಾಗಿ ನನ್ನ ಸ್ನೇಹ ಬಳಗದವರನ್ನು ಒಂದೆಡೆ ತರಬೇಕೆಂದರೆ ಈ ತರಹದ ಹಲವು ಕೊಲಾಜ್ ಮಾಡಬೇಕಾದೀತೇನೊ!  ಎಂದೋ ಮಾಡುತ್ತೇನೆ.  ಯಾಕೆಂದರೆ ನನಗೆ ನನ್ನ ಸ್ನೇಹದಲ್ಲಿರುವ ಪ್ರತಿಯೊಬ್ಬರೂ ಮುಖ್ಯ. ಸ್ನೇಹಿತರಾಗಿಲ್ಲದೆಯೇ ನನ್ನ ಬರವಣಿಗೆ ಅನುಸರಿಸುತ್ತಿರುವ ಹಲವು ಸಹಸ್ರಮಂದಿಯೂ ನನಗೆ ಆಪ್ತರೇ. ತಾವೆಲ್ಲರೂ ನನ್ನ ಗುರು ಸಮಾನರೆ 🌷🙏🌷 ಹೀಗಾಗಿ ಇಲ್ಲಿನ ಚಿತ್ರ ಪ್ರಾತಿನಿಧಿಕ. 

ಶಿಕ್ಷಕರು ಎಂಬ ಪ್ರಶ್ನೆ ಬಂದಾಗ, ಹಿರಿಯರು ಮತ್ತು ಕಿರಿಯರು ಎಂಬ ತಾರತಮ್ಯ ನನ್ನ ಮನದಲ್ಲಿ ಮೂಡುವುದಿಲ್ಲ.  ಸಕಲ ಶಿಕ್ಷಕರಿಗೂ ಗೌರವಪೂರ್ವಕ ಶುಭಹಾರೈಕೆಗಳು.

ಕಲಿಕೆ ನಿರಂತರ ಎಂಬ ಭಾವವೇ ಸಹಜ ಬದುಕಿನ ಮಾರ್ಗ. ನನ್ನ ಕಲಿಕೆಗೆ ತಾವೂ ಕಾರಣ. ಶಿಕ್ಷಕರ ದಿನದ ಅಭಿವಂದನೆಗಳು. ಬದುಕು ಹೀಗೆ ಕಲಿಯುತ್ತ ಕಲಿಸುತ್ತ ಸುಂದರವಾಗಿರಲಿ.  🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ