ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಹೇಶ್ ಭಟ್


ಮಹೇಶ್ ಭಟ್

ಮಹೇಶ್ ಭಟ್ ಜನಪ್ರಿಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. 

ಮಹೇಶ್ ಭಟ್ ಅವರು 1948ರ ಸೆಪ್ಟೆಂಬರ್ 20ರಂದು ಮುಂಬೈನಲ್ಲಿ ನಾನಾಭಾಯ್ ಭಟ್ ಮತ್ತು ಶಿರಿನ್ ದಂಪತಿಗೆ ಜನಿಸಿದರು. ಓದುವ ದಿನಗಳಲ್ಲೇ ಕೆಲಸ ಮಾಡುತ್ತಿದ್ದ ಅವರು ಜಾಹಿರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತ ರಾಜ್ ಖೋಸ್ಲಾ ಅವರ ಪರಿಚಯವಾಗಿ ಅವರಿಗೆ ಸಹಾಯಕರಾಗಿ ದುಡಿಯಲಾರಂಭಿಸಿದರು.

ಮಹೇಶ್ ಭಟ್, ತಮ್ಮ 26ನೇ ವಯಸ್ಸಿನಲ್ಲಿ, ಕಬೀರ್ ಬೇಡಿ ಮತ್ತು ಪ್ರೇಮಾ ನಾರಾಯಣ್ ಅಭಿನಯದ 'ಮಂಜಿಲೀನ್ ಔರ್ ಭಿ ಹೈ' (1974) ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರ 1979ರ ‘ಲಾಹು ಕೆ ದೋ ರಂಗ್’ ಚಿತ್ರದಲ್ಲಿ ಶಬಾನಾ ಅಜ್ಮಿ ಮತ್ತು ವಿನೋದ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದರು,  ಈ ಚಿತ್ರ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗಳಿಸಿತು. 1982ರಲ್ಲಿ ಭಟ್  'ಅರ್ಥ್' ಎಂಬ ಕಲಾತ್ಮಕ ಚಿತ್ರದೊಂದಿಗೆ ಗಮನ ಸೆಳೆದರು ಅದು ವಿಮರ್ಶಕರ ಮೆಚ್ಚುಗೆ ಗಳಿಸಿತು.‍ ಮುಂದೆ ಅವರ‍ 'ಸಾರಂಶ್' ಮತ್ತು 'ಜನಮ್' ಚಿತ್ರಗಳು ಅವರಿಗೆ ಹೆಸರು ತಂದವು.

1984ರಲ್ಲಿ ಮಹೇಶ್ ಭಟ್ ಅವರ ಪ್ರಸಿದ್ಧ ಚಿತ್ರ ‘ಸಾರಾಂಶ್’ 14 ನೇ ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ಇದು ಆ ವರ್ಷದ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಯಿತು. 1986ರ 'ನಾಮ್' ಅವರ ಮೊದಲ ವಾಣಿಜ್ಯ ಚಲನಚಿತ್ರ. 1987ರಲ್ಲಿ, ಅವರು ತಮ್ಮ ಸಹೋದರ ಮುಖೇಶ್ ಭಟ್ ಅವರೊಂದಿಗೆ "ವಿಶೇಶ್ ಫಿಲ್ಮ್ಸ್" ಬ್ಯಾನರ್ ಅಡಿಯಲ್ಲಿ 'ಕಬ್ಜಾ' ಚಿತ್ರದೊಂದಿಗೆ ನಿರ್ಮಾಪಕರಾದರು.

ಮಹೇಶ್ ಭಟ್ ಅವರು 'ಡ್ಯಾಡಿ’ (1989) ‘ಸ್ವಯಂ’ (1991),  ‘ಅವರ್ಗಿ’ (1990),  ‘ದಿಲ್ ಹೈ ಕಿ ಮಂತಾ ನಹಿನ್’ (1991) ಅಂತಹ ಯಶಸ್ವೀ ಪ್ರಣಯ  ಚಿತ್ರಗಳನ್ನು  ನೀಡಿ ಜನಪ್ರಿಯ ನಿರ್ದೇಶಕರಾದರು.

‘ಗುಮ್ರಾಹ್' (1993) ಮತ್ತು 'ಕ್ರಿಮಿನಲ್' (1994) ಅಂತಹ ಇತರ ಹಿಟ್‌ಗಳನ್ನು ನೀಡಿದ ಮಹೇಶ್ ಭಟ್ 'ಸರ್' (1993) ಚಿತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆ ಗಳಿಸಿದರು. 1994ರಲ್ಲಿ ಅವರು 'ಹಮ್ ಹೈ ರಾಹಿ ಪ್ಯಾರ್ ಕೆ' (1993) ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಗಳಿಸಿದರು. 1996ರಲ್ಲಿ, ಅವರು ನಿರ್ದೇಶಿಸಿದ 'ತಮನ್ನಾ' ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿತು. 1999ರಲ್ಲಿ ಇವರು ನಿರ್ದೇಶಿಸಿದ  'ಝಖ್ಮ್'  ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿನ ನರ್ಗೀಸ್ ದತ್ ಪ್ರಶಸ್ತಿಯನ್ನು ಗಳಿಸಿತು. 

ಮಹೇಶ್  ಭಟ್ ಅವರು ತಮ್ಮ  ಸಹೋದರ  ಮುಖೇಶ್ ಭಟ್ ಅವರೊಂದಿಗೆ ಸ್ಥಾಪಿಸಿದ 'ವಿಶೇಷ್ ಫಿಲ್ಮ್ಸ್'  ಮೂಲಕ ನಿರ್ಮಿಸಿದ ಇಪ್ಪತ್ತಕ್ಕೂ ಹೆಚ್ಚು ಚಲನಚಿತ್ರಗಳಿಗೆ ಕಥೆ- -ಚಿತ್ರಕಥೆಗಳನ್ನು ನೀಡಿದರು.   ರಾಜ್ (2002), ಜಿಸ್ಮ್ (2003), ಮರ್ಡರ್ (2004), ಗ್ಯಾಂಗ್‌ಸ್ಟರ್ (2006), ವೋ ಲಮ್ಹೆ (2006), ಜನ್ನತ್ (2008), ಮರ್ಡರ್ 2 (2011), ಮತ್ತು ಆಶಿಕಿ 2 (2013) ಅಂತಹ ಯಶಸ್ವಿ  ಚಲನಚಿತ್ರಗಳನ್ನು ನಿರ್ಮಿಸಿದ ಈ ಸಹೋದರ ಜೋಡಿ 2021ರಿಂದ ಬೇರೆಯಾದರು.

ಮಹೇಶ್ ಭಟ್ ಅವರ ಪುತ್ರಿಯರಾದ ಪೂಜಾ ಭಟ್ ಮತ್ತು ಅಲಿಯಾ ಭಟ್ ಚಿತ್ರರಂಗದಲ್ಲಿನ ವಿವಿಧ ಕಾಲಘಟ್ಟಗಳಲ್ಲಿ  ಹೆಸರು ಮಾಡಿದ್ದಾರೆ. 

On the birthday of popular Director Mahesh Bhatt 🌷🌷🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ