ನೂರೊಂದು ಗಣಪತಿ
ಮೈಸೂರಿನ ನೂರೊಂದು ಗಣಪತಿ ದೇಗುಲ
101 Ganapathi Mysore
ನಮ್ಮ ಕಾಲದಲ್ಲಿ ಮೈಸೂರಿನ ಪ್ರಭುದೇವ ಚಿತ್ರಮಂದಿರದ ಎದುರಿನ ವೃತ್ತದಲ್ಲಿ ನೂರೊಂದು ಗಣಪತಿಗಳನ್ನು ಗಣೇಶ ಹಬ್ಬದ ಸಮಯದಲ್ಲಿ ಮಾತ್ರಾ ಇಟ್ಟು ದೊಡ್ಡ ಸಾಂಸ್ಕೃತಿಕ ಹಬ್ಬ ಮಾಡ್ತಿದ್ರು. ಅಂದಿನ ದಿನಗಳಲ್ಲಿ ಹಬ್ಬದ ಸಂದರ್ಭ ಅಲ್ಲಿಗೆ ಹೋಗದ ಮೈಸೂರಿಗರು ಇರಲಿಲ್ಲ. ಮುಂದೆ ಅದು ದೇಗುಲವಾಯ್ತು. ಹಿಂದೆ ಸಂಗೀತ ಕಚೇರಿ ಕೇಳುತ್ತಿದ್ದ ಗಣಪ ಪಾಪ, ಇಲಿ ಮೇಲೆ ಹತ್ತಿ ಕೋರ್ಟು ಕಚೇರಿ ಕೂಡಾ ಅಲೆಯಬೇಕಾಯ್ತು. ಸ್ಥಾವರ ಏನಾದ್ರೂ ಆಗಲಿ, ಅಂದಿನ ದಿನಗಳಲ್ಲಿ ‘ಆಲ್ ರೋಡ್ಸ್ ಆಫ್ ಮೈಸೂರ್ ಲೀಡ್ಸ್ ಟು ನೂರೊಂದು ಗಣಪತಿ' ಎಂಬ ಜಂಗಮ ಭಾವ ಅಳಿಯಲಾರದ್ದು.
At our 101 Ganesha Temple, Mysore on 9.9.2013
ಹೌದು. ಅದೇ ರೀತಿ, ೬೦-೭೦ ರ ದಶಕಗಳಲ್ಲಿ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿ (ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿ) ಮತ್ತು ಬನುಮಯ್ಯ ಚೌಕದಲ್ಲಿ ಕೂಡ, ಗಣೇಶನ ಹಬ್ಬವನ್ನು ಅದ್ದೂರಿಯಾಗಿಯೂ, ಅಚ್ಚುಕಟ್ಟಾಗಿಯೂ ಮತ್ತು ಅರ್ಥವತ್ತಾಗಿಯೂ ಆಚರಿಸುತ್ತಿದ್ದರು. ಈಗ ಗೊತ್ತಿಲ್ಲ. ಗುರುರಾಜುಲು ನಾಯ್ಡು, ಭದ್ರಗಿರಿ ಕೇಶವ ದಾಸ್ ಅವರ ಹರಿಕಥೆ, ಕಾಳಿಂಗರಾವ್ ಅವರ ಗಾಯನ, ಚೆಲುವರಾಜ್ ಅವರ ಆರ್ಕೆಸ್ಟ್ರಾ ಅಂದರೆ ಜನ ಸಾಗರ ತುಂಬಿರುತ್ತಿತ್ತು.
ಪ್ರತ್ಯುತ್ತರಅಳಿಸಿ