ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಜಯಲಕ್ಷ್ಮೀ


ವಿಜಯಲಕ್ಷ್ಮೀ

ವೃತ್ತಿಯಿಂದ ಶಿಕ್ಷಕಿಯಾಗಿ,  ವಿಜ್ಞಾನ ಮತ್ತು ಗಣಿತ ತಜ್ಞೆಯಾದ ವಿಜಯಲಕ್ಷ್ಮೀ, ಸಾಹಿತ್ಯ, ಸಂಗೀತ, ಸಂಸ್ಕೃತ, ಸಂಸ್ಕೃತಿ, ಅಧ್ಯಾತ್ಮ ಹೀಗೆ ಬಹುಮುಖಿ ಆಸಕ್ತರು.

ಅಕ್ಟೋಬರ್ 14, ವಿಜಯಲಕ್ಷ್ಮೀ ಅವರ ಜನ್ಮದಿನ.  ಇವರು ಮೂಲತಃ ಶಿವಮೊಗ್ಗದವರು.  ವಿಜ್ಞಾನ ಪದವಿ, ಶಿಕ್ಷಕರ ತರಬೇತಿ ಪದವಿ, ಭೌತಶಾಸ್ತ್ರದಲ್ಲಿ ಎಂ.ಎಸ್ಸಿ ಹಾಗೂ ಸಂಸ್ಕೃತದಲ್ಲಿ ಎಂ.ಎ. ಪದವಿಗಳನ್ನು ಗಳಿಸಿರುವ ಇವರು ಸಂಗೀತ ಮತ್ತು ನೃತ್ಯಗಳನ್ನೂ ಸಾಕಷ್ಟು ವ್ಯವಸ್ಥಿತವಾಗಿ ಕಲಿತಿದ್ದಾರೆ.

ಸರ್ಕಾರಿ ಹೈಸ್ಕೂಲಿನಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಮಕ್ಕಳಿಗೆ ಅಕ್ಕರೆಯಿಂದ ಬೋಧಿಸುವ  ವಿಜಯಲಕ್ಷ್ಮೀ ಅವರು ವಚನ ಸಾಹಿತ್ಯ, ಭಗವದ್ಗೀತೆ ಮತ್ತು ಸಂಸ್ಕೃತ ಪಠಣಗಳ ಪ್ತಿಯರು. ಕನ್ನಡ ಸಾಹಿತ್ಯವನ್ನು ಆಳವಾಗಿ ಓದಿರುವ ಅವರ ಚಿಂತನಶೀಲತೆ ಆಳ ಮತ್ತು ಬಹುಮುಖವಾದದ್ದು.

ನಿತ್ಯ ಹಸನ್ಮುಖಿ, ಉತ್ಸಾಹಶೀಲೆ ಮತ್ತು ನನ್ನ ಬರಹಗಳ ಬೆಂಬಲಿಗರಾದ ವಿಜಯಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.

Happy birthday Vijayathi Krishna 🌷🌷🌷Vijayalakshmi


  

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ