ಶ್ರೀವತ್ಸ
ಶ್ರೀವತ್ಸ ಸತ್ಯನಾರಾಯಣ
ಶ್ರೀವತ್ಸ ನನಗೆ ಎಚ್ಎಮ್‍ಟಿಯಲ್ಲಿ ಸಹೋದ್ಯೋಗಿ ಆಗಿದ್ದ ಆತ್ಮೀಯ ಗೆಳೆಯ. ಸುರದ್ರೂಪಿ. ಮಹಾನ್ ಪರ್ವತಾರೋಹಿ. ಹಿಮಾಲಯ ಮತ್ತು ಹಲವು ದೇಶಗಳ ಅನೇಕ ಶಿಖರಗಳನ್ನು ಏರಿದ್ದಾನೆ. ಕರ್ನಾಟಕ ಮೌಂಟೆನಿಯರಿಂಗ್ ಅಸೋಸಿಯೇಷನ್ ಸಂಸ್ಥಾಪಕರಲ್ಲಿ ಒಬ್ಬನಾಗಿ, ಇಂದೂ ಸಹಸ್ರಾರು ಮಂದಿಯನ್ನು ಮಾರ್ಗದರ್ಶಿಸುತ್ತಾ ಸಾಗಿದ್ದಾನೆ. ಪರ್ವತಾರೋಹಣ ಸಾಧನೆಯಲ್ಲಿ ದಕ್ಷಿಣ ಭಾರತದಲ್ಲೇ ಈತ ದೊಡ್ಡ ಹೆಸರು. ರಾಜ್ಯ ಪ್ರಶಸ್ತಿ ಅಲ್ಲದೆ ಅನೇಕ ಪ್ರಶಸ್ತಿ ಗಳಿಸಿದ್ದಾನೆ. ಅತ್ಯುತ್ಕೃಷ್ಟ ವೃತ್ತಿ ನಿರತ ಹಾಗೂ ಹವ್ಯಾಸಿ ಛಾಯಾಗ್ರಾಹಕನಾಗಿಯೂ ಮಹತ್ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾನೆ.
'ಶ್ರೀವತ್ಸ - ಶ್ರೀಧರ' ನಮ್ಮ ಜೋಡಿ ಎಚ್ಎಮ್‍ಟಿ ದಿನಗಳಲ್ಲಿ ಕಾರ್ಮಿಕ ಸಂಘದಲ್ಲಿ ಜೋಡಿಯಾಗಿ ಹೆಸರಾಗಿತ್ತ. ನನ್ನ 'ಎಚ್ಎಮ್‍ಟಿ ಕನ್ನಡ ಸಂಪದ (ಸಂಘ)ಕ್ಕೆ ಅವನ ಸಹಾಯ, ಅವನ ಸಾಹಸ ಚಟುವಟಿಕಗೆ ನನ್ನ ಚಿಕ್ಕ ಪುಟ್ಟ ಸಹಕಾರ ಹೀಗೆ ನಮದು ಆಪ್ತ ಬಂಧವಿತ್ತು. ಕಾರ್ಮಿಕ ಸಂಘದ ಪದಾಧಿಕಾರಿಗಳಾಗಿ ದೇಶದ ಹಲವೆಡೆ ಜೊತೆಯಾಗಿ ಸುತ್ತಿದ್ದೆವು. ನಾ ಯಾವುದೇ ಇಲಾಖೆಯಲ್ಲಿ ಕೆಲಸ ಆಗಬೇಕಿದ್ದರೂ ಶ್ರೀವತ್ಸನನ್ನ ಕರೆದೊಯ್ಯುತ್ತಿದ್ದೆ. ಅವನ ಸುಂದರ ಮುಖ, ಅದಕ್ಕೆ ಅನುರೂಪವಾದ ನಗು, ಸರಳ ಸ್ನೇಹಯುತ ನಡವಳಿಕೆ, ಎಲ್ಲರನ್ನೂ ಗೌರವಿಸುವ ಗುಣ ಇವುಗಳಿಂದ ಅವನಿದ್ದೆಡೆ ಸುಲಭವಾಗಿ ಕೆಲಸ ಆಗಿಬಿಡುತ್ತಿತ್ತು.
ಶ್ರೀವತ್ಸನಿಗೆ ದೊರೈ ಭಗವಾನ್ ಖ್ಯಾತಿಯ ಭಗವಾನ್ ಅವರು ಚಿಕ್ಕಪ್ಪ. ಹೀಗಾಗಿ ಕಮರ್ಷಿಯಲ್ ಸ್ಟ್ರೀಟ್ ಬಳಿ ಭಗವಾನ್ ಅವರು ನಡೆಸುತ್ತಿದ್ದ ಹೋಟೆಲ್ಗೆ ಹೋಗಿ ಭಗವಾನ್ ಅವರ ಜೊತೆ ಸ್ವಲ್ಪ ಹೊತ್ತು ಸಮಯ ಕಳೆದು ಬರ್ತಾ ಇದ್ವಿ. ನಾವಿದ್ದೆಡೆಯಲ್ಲಿ ಖುಷಿ ಇರ್ತಿತ್ತು. ಜೊತೆಗೆ ಕಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡ್ತಿದ್ವಿ. ನೆನೆಸಿಕೊಂಡ್ರೆ ಖುಷಿಯಾಗುತ್ತೆ. ಶ್ರೀವತ್ಸ ತನ್ನ ಮನೆಯ ಸಮೀಪವಾಸಿಗಳಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯನವರಿಗೆ ಅತ್ಯಂತ ಅಪ್ತನಾಗಿದ್ದ
ನನ್ನಾತ್ಮೀಯ ಗೆಳೆಯ ಶ್ರೀವತ್ಸನಿಗೆ ಹುಟ್ಟುಹಬ್ಬದ ಶುಭಾಶಯ.
Happy birthday Srivatsa Satyanarayan 🌷🌷🌷
ಕಾಮೆಂಟ್‌ಗಳು