ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಮಾ ಸಮುದ್ರನ


ರಮಾ ಸಮುದ್ರನ ಕುಮಾರಿ ನಿನ್ನಯ 
ಸಮಾನರಾರಮ್ಮ
ಸುಮಾಸ್ತ್ರನಯ್ಯನ ಎದೆಯಲಿ ಸತತವೂ
ಅಭಿಮಾನದಲಿ ಮೆರೆವ ಮಹಾಮಹಿಮಳೇ 

ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ 
ಶ್ರೀ ಚಂದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ
ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ
ಚಂಪಕನನೆ ನಾಸಾಗ್ರದೊಳೂಗುವ ಮೌಕ್ತಿಕ ಲೋಲೇ
ಮಿನುಗುವ ಮಾಣಿಕದ ಮಣಿಮಯಧರ 
ಪುಟದೊಳನುಪಮ ವಜ್ರದಿ ಕಣಗಳ 
ದಶನಯುತ ಸ್ಮೇರಾನನನ ಶುಭಕಾಂತಿಯಿಂ ಸ್ಮೇರಾನನನ ಶುಭಕಾಂತಿಯಿಂ
ವನಜ ಭವನ ಮನೆಗೆ ಮಂಗಳಗರೆವ

ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೇ 
ಒಪ್ಪುವ ಕರಿರಾಜನ ಕರದಿರುವಿಕೆ ಕರಗಳ ಲೀಲೇ
ಶರಣಾಗತ ಪರಿಪಾಲನಿರತ ಶೀಲೇ
ಗಂಡನ ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ

ಕರುಣಿಸಮ್ಮ ತವ ಕರುಣ ಕಟಾಕ್ಷದ
ಸಿರಿಯ ಬೆಳಗಿನೊಳ್ ಪರಿಚರಿಸುವ ಸುಜನರ 
ಚರಣಾಂಬುಜ ಪರಿಮಳದೊಳು 
ಮನವೆರಗಿಸುವದು ಸೌಂದರ್ಯ ಶಿಖಾಮಣಿ 

ರಮಣೀಯ ವಿಮಲ ಕಮಲದಳಾಯತನೇತ್ರೆ  
ಚಂಪಕ ಸುಮದ ಸುವರ್ಣ ಪರಿಮಳದ ಸುಂದರ ಗಾತ್ರೇ
ಕಮಲ ಭವೇಂದ್ರಾದ್ಯಮರ ಮುನಿಗಣ ಸ್ತೋತ್ರೇ  
ಶ್ರೀಕಮಲೇಶ ವಿಠಲರಾಯನ ಕರುಣಕೆ ಪಾತ್ರೇ 

ಭ್ರಮಿಸುವೆನು ಭವದ ತಿಮಿರದೊಳು ಅಘ
ಮಮ ಮದದಿಂದಲಿ ಸುಮಾರ್ಗವನರಿಯದೆ
ವಿಮಲದೃಷ್ಟಿ ಚಂದ್ರಮನಮೃತ ಕಿರಣ
ನಮಗೆ ಸಲಿಸೆ ಮಾರಮಣೆ ಮಜ್ಜನನಿ

ಸಾಹಿತ್ಯ: ಕಮಲೇಶ ವಿಠಲರು


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ