ಅಕ್ಷತಾ ಕೃಷ್ಣಮೂರ್ತಿ
ಅಕ್ಷತಾ ಕೃಷ್ಣಮೂರ್ತಿ
ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಅಕ್ಷತಾ ಕೃಷ್ಣಮೂರ್ತಿ ಅವರು ಪ್ರತಿಭಾನ್ವಿತ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ನವೆಂಬರ್ 2, ಅಕ್ಷತಾ ಕೃಷ್ಣಮೂರ್ತಿಯವರ ಜನ್ಮದಿನ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೆಕೇರಿ ಇವರ ಹುಟ್ಟೂರು. ಇವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಹಿಂದಿ ರತ್ನ ಪದವಿ ಗಳಿಸಿದ್ದಾರೆ.
ಅಕ್ಷತಾ ಅವರು ಉತ್ತರ ಕನ್ನಡ ಜಿಲ್ಲೆಯ ಅತಿ ಹೆಚ್ಚು ಅರಣ್ಯ ಹೊಂದಿರುವ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿರುವ ಹಿಂದುಳಿದ ಜೊಹಿಡಾ ತಾಲೂಕಿನ ಹುಲಿ ಸಂರಕ್ಷಿತ ಪ್ರದೇಶದ ಅಣಶಿಯಲ್ಲಿ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ಕಂಗೊಳಿಸುತ್ತ ಬಂದಿದ್ದು ಓದುಗರ ಮತ್ತು ವಿದ್ವಜ್ಜನರ ಮೆಚ್ಚುಗೆಗೆ ಪಾತ್ರವಾಗಿವೆ.
ಅಕ್ಷತಾ ಕೃಷ್ಣಮೂರ್ತಿ ಅವರ ಪ್ರಕಟಿತ ಕೃತಿಗಳಲ್ಲಿ 'ಹನ್ನೆರಡು ದಡೆ ಬೆಲ್ಲ’, 'ಕೋಳ್ಗಂಬ', 'ನಾನು ದೀಪ ಹಚ್ಚಬೇಕೆಂದಿದ್ದೆ' ಎಂಬ ಕವನ ಸಂಕಲನಗಳು, ಹಾಲಕ್ಕಿ ಒಕ್ಕಲಿಗರು(ಜನಾಂಗೀಯ ಬರಹ), ‘ಮಧುರ ಚೆನ್ನ', 'ಹಾಲಕ್ಕಿ ಹಾಡು ಕೋಗಿಲೆ ಸುಕ್ರಿ ಬೊಮ್ಮ ಗೌಡ', 'ಹಾಡಿನ ಕಣಜ ಸುಕ್ರಿ ಬೊಮ್ಮ ಗೌಡ' ವ್ಯಕ್ತಿ ಪರಿಚಯಗಳು, 'ಅಬ್ಬೋಲಿ' ಕಥಾ ಸಂಕಲನ, 'ಇಸ್ಕೂಲು' ಎಂಬ ಸರಕಾರಿ ಶಾಲೆಯ ಟೀಚರ್ ಹೇಳುವ ಕತೆ ಮುಂತಾದವು ಸೇರಿವೆ.
ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಕ.ಸಾ.ಪದಿಂದ 2020ನೇ ಸಾಲಿನ ಮಯೂರವರ್ಮ ಸಾಹಿತ್ಯ ಪ್ರಶಸ್ತಿ , ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಡಾ. ಡಿ.ಎಸ್.ಕರ್ಕಿ ಪ್ರಶಸ್ತಿ, ಉತ್ತರ ಕನ್ನಡ ಯುವ ರಾಜ್ಯೋತ್ಸವ ಪುಸ್ತಕ ಪ್ರಶಸ್ತಿ, ಕ.ಸಾ.ಪ ನೀಲಗಂಗಾ ದತ್ತಿ ಪ್ರಶಸ್ತಿ, ಅಂಕೋಲಾ ಉತ್ಸವ ಪ್ರಶಸ್ತಿ, ಅಡ್ವೈಜರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಪ್ರತಿಭಾನ್ವಿತ ಬರಹಗಾರ್ತಿ ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Akshata Krishnmurthy 🌷🌷🌷
ನಮಸ್ಕಾರ ಸರ್...ಧನ್ಯವಾದಗಳು...
ಪ್ರತ್ಯುತ್ತರಅಳಿಸಿಹುಟ್ಟುಹಬ್ಬದ ಶುಭಾಶಯಗಳು ಟೀಚರ್
ಪ್ರತ್ಯುತ್ತರಅಳಿಸಿ