ಕಳೆದುಕೊಳ್ಳಬೇಕು
ಕಳೆದುಕೊಳ್ಳಬೇಕು ನಮ್ಮ ನಾವು
ಹೂವು, ಹಕ್ಕಿ, ನೀರು,
ಹಾಡು, ಕಾಡು, ಮೇಡುಗಳ ನಡುವೆ;
ಕುಳಿತು, ಕುಣಿದು,
ಓಡಿ, ಹಾಡಿ, ಸೈಕಲೇರಿ,
ನಡೆದು, ನಮ್ಮಲೇ ಟಿಸಿಲೊಡೆದು
ನಾವೆಂಬ ಭಾವವೂ ಪುಡಿ ಪುಡಿಯಾಗಿ
ಹೇಳ ಹೆಸರಿಲ್ಲದಂತೆ ಮಾಯವಾಗಿ
ಪೂರ್ಣ ಹೊಸದಾಗುವನಕ
At Meadows, Emirates Hills, Dubai
ಕಾಮೆಂಟ್‌ಗಳು