ಸೀರೆ ದಿನ
ಸೀರೆ ದಿನ
ಇಂದು 'ವಿಶ್ವ ಸೀರೆ ದಿನ'ವಂತೆ. ನಾ ಸೀರೆ ಬಗ್ಗೆ ಗಮನ ಹರಿಸಿದರೆ "ಗಂಡಿಸಿಗ್ಯಾಕೆ ಈ ವಿಷಯ" ಅನ್ನಬೇಡಿ. ಇದು ಸಂತಸದ ವಿಷಯ. ಯಾವುದೇ ಹಬ್ಬ ಇರಲಿ, ಸಮಾರಂಭ ಇರಲಿ ಅಲ್ಲಿ ಬಗೆ ಬಗೆಯ ಬಣ್ಣದ ಸೀರೆ ಧರಿಸಿದ ಸ್ತ್ರೀಯರ ಸಂಭ್ರಮವನ್ನು ನೋಡುವುದಕ್ಕಿಂತ ವೈಭವಯುತ ನೋಟ ಮತ್ತೊಂದಿಲ್ಲ. ಬಹುಶಃ ಬದುಕಿನ ಕಲೆಗೆ ವರ್ಣ ವೈಭೋಗ ಬಂದಿರುವುದೇ ಸೀರೆಯಂತಹ ವೈವಿಧ್ಯದಿಂದ. ಅದು ಕ್ರಮೇಣ ಪುರುಷರ ವಸ್ತ್ರಗಳನ್ನೂ ಸೇರಿ ಎಲ್ಲ ಬಗೆಯ ವಸ್ತ್ರಗಳು ಮಾತ್ರವಲ್ಲದೆ ನಮ್ಮ ಬದುಕನ್ನೂ ವರ್ಣ ವೈವಿಧ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.
“ಸರೀಕಾ" ಎಂಬ ಸಂಸ್ಕೃತದ "ಉದ್ದನೆಯ ಬಟ್ಟೆ” ಎಂಬರ್ಥದ ಪದವೇ ಸೀರೆಯಾಯ್ತಂತೆ. ಒಂದು ಕಾಲದಲ್ಲಿ ಉತ್ತರ ಭಾರತೀಯ ಉಡುಪುಗಳು ಮತ್ತು ಪಾಶ್ಚಿಮಾತ್ಯರ ಉಡುಪುಗಳು ದೈನಂದಿನದಲ್ಲಿ ಸೀರೆಯ ಉಪಯೋಗವನ್ನು ಕಡಿಮೆ ಮಾಡಿರಬಹುದಾದರೂ, ಸೀರೆಯ ಬಳಕೆಗಿರುವ ಹೊಳಪಂತೂ ಎಂದೂ ಮಾಸುವುದಿಲ್ಲ.
On International Saree Day
ಕಾಮೆಂಟ್ಗಳು