ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿ ಎಸ್. ಜಯರಾಮನ್

 


ಸಿ. ಎಸ್. ಜಯರಾಮನ್

'ಶಿವಪ್ಪ ಕಾಯೋ ತಂದೆ' ಗೀತೆಯನ್ನರಿಯದ ಕನ್ನಡಿಗರಿಲ್ಲ.  1954ರಲ್ಲಿ ರಾಜ್‍ಕುಮಾರ್ ಅವರನ್ನು ಪರಿಚಯಿಸಿದ 'ಬೇಡರ ಕಣ್ಣಪ್ಪ' ಚಿತ್ರದ ಗೀತೆ 70 ವರ್ಷಗಳ ನಂತರವೂ ಜನಮನದಲ್ಲಿ ಇಂದೂ ಆಪ್ತವಾಗಿ ಉಳಿದಿದೆ.  ಇದನ್ನು ಹಾಡಿದವರು ಸಿ. ಎಸ್.  ಜಯರಾಮನ್.  ಇಂದು ಅವರ ಸಂಸ್ಮರಣೆ ದಿನ. 

ಜಯರಾಮನ್ 1917ರ ಜನವರಿ 6ರಂದು ಜನಿಸಿದರು.  ಇವರ ಊರು ಪ್ರಸಿದ್ಧ ಪುಣ್ಯಕ್ಷೇತ್ರವಾದ ಚಿದಂಬರಂ.  ಇವರ ತಂದೆ ಸುಂದರಂ ಪಿಳ್ಳೆ ಪ್ರಖ್ಯಾತ ಗಾಯಕರಾಗಿದ್ದರು. ಕರುಣಾನಿಧಿಯವರಿಗೆ ಜಯರಾಮನ್ ಭಾವನವರಾಗಿದ್ದರು.  ಜಯರಾಮನ್ ಅವರ ದೆಸೆಯಿಂದ ಕರುಣಾನಿಧಿ ಅವರು ಚಲನಚಿತ್ರರಂಗದಲ್ಲಿ ಸಾಹಿತ್ಯರಚನಕಾರರಾಗಿ ದುಡಿಯುವ ಅವಕಾಶ ಪಡೆದರು.
 
ಜಯರಾಮನ್ 1940 ರಿಂದ 60 ದಶಕಗಳ ಕಾಲದಲ್ಲಿ ಬಹುಬೇಡಿಕೆಯ ಗಾಯಕರಾಗಿದ್ದರು. ಅನೇಕ ಚಿತ್ರಗಳಿಗೆ ಸಹಸಂಯೋಜಕರಾಗಿ ಮತ್ತು ಸಂಗೀತ ಸಂಯೋಜಕರಾಗಿ ಕೆಲಸ ಮಾಡಿದ್ದರು

ಕನ್ನಡದಲ್ಲಿ 'ಬೇಡರ ಕಣ್ಣಪ್ಪ' ಅಲ್ಲದೆ 
ಭೂಕೈಲಾಸ ಚಿತ್ರದಲ್ಲಿಯೂ ಜಯರಾಮನ್ ಹಾಡಿರುವ ಗೀತೆಗಳು ಜನಪ್ರಿಯ. ಆ ಚಿತ್ರದ 'ಭಕ್ತವತ್ಸಲ ಬಾರಾ' ಗೀತೆಯ ಗಾನ ಪ್ರಸ್ತುತಿ ಅಸಾಮನ್ಯವಾದದ್ದು.

ಜಯರಾಮನ್ ಅವರು 1995ರ ಜನವರಿ 29ರಂದು ನಿಧನರಾದರು. 

On Rememberance Day of Great Singer C. S. Jayaraman 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ