ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಗಾಯತ್ರಿ ಹೆಗಡೆ

ಗಾಯತ್ರಿ ಹೆಗಡೆ


ಯುವ ಪ್ರತಿಭಾನ್ವಿತೆ ಗಾಯತ್ರಿ ಹೆಗಡೆ ಸಾಹಿತ್ಯದಲ್ಲಿ ಸಾಧನೆ ಮಾಡುವುದರ ಜೊತೆಗೆ ಖಗೋಳ ವಿಜ್ಞಾನವನ್ನೂ ಅಭ್ಯಾಸ ಮಾಡುತ್ತಿದ್ದಾರೆ. 

ಜನವರಿ 15, ಗಾಯತ್ರಿ ಹೆಗಡೆ ಅವರ ಹುಟ್ಟುಹಬ್ಬ. 
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆ ಇವರ ಊರು. ಸದ್ಯ ಬೆಂಗಳೂರಿನಲ್ಲಿದ್ದಾರೆ. ಇವರು ಪ್ರಸ್ತುತ ಬಿಎಸ್ಸಿ. ಬಿಎಡ್ ಮುಗಿಸಿ,  ಎಂ.ಎಸ್ಸಿಗಾಗಿ ತಯಾರಿ ನಡೆಸುತ್ತಿದ್ದಾರೆ. ಜೊತೆಗೆ ಖಗೋಳ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಉಳ್ಳ ಇವರು ಡಾಎಸ್ ಬಾಲಚಂದ್ರ ರಾವ್  Balachandra Rao  ಅವರಲ್ಲಿ ಎರಡು ವರ್ಷಗಳಿಂದ ಅಭ್ಯಾಸ ನಡೆಸುತ್ತಿದ್ದಾರೆ.

ಗಾಯತ್ರಿ ಹೆಗಡೆ ಹವ್ಯಾಸಕ್ಕಾಗಿ ಬರೆಯುತ್ತಾರೆ. ಇವರ ಬೆಳ್ಳಿಯ ಚಂದಿರ (ಮಕ್ಕಳ ಕವನ ಸಂಕಲನ- 2014), ಮಾಯಾ ಗುಡಿಸಲು ಮತ್ತು ಇತರ ಕತೆಗಳು (ಮಕ್ಕಳ ಕಥಾ ಸಂಕಲನ-2018), ಯಶೋಧರ ಮತ್ತು ಮಹಿಳಾ ಪ್ರಜ್ಞೆ (ಪ್ರಬಂಧ) ಕೃತಿಗಳು ಮುದ್ರಣಗೊಂಡಿವೆ.  ಇವರು ಸಮಯ-ಅವಕಾಶ ಇರುವಾಗ ಕವಿಗೋಷ್ಠಿ, ಚರ್ಚಾಸ್ಪರ್ಧೆ, ಚೆಸ್ ಪಂದ್ಯಾವಳಿ, ಸೆಮಿನಾರ್ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತ ಬಂದಿದ್ದಾರೆ.

ಯುವ ಉತ್ಸಾಹಿ ಪ್ರತಿಭಾನ್ವಿತೆ ಗಾಯತ್ರಿ ಹೆಗಡೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Gayatri Hegde 🌷🌷🌷


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ