ಭಾಗ್ಯದ ಲಕುಮಿ
ಬಂದಾಳೆ ಭಾಗ್ಯದ ಲಕುಮಿ
ಇಂದು ನಮ್ಮ ಮನೆಗೆ ಸಂದೇಹವಿಲ್ಲವಂತೆ
ಇಂದಿರೆ ಲೋಕಮಾತೆ ಇಷ್ಟಾರ್ಥ ಕೊಡಲಿಕ್ಕೆ
ಅಂದಾವ ಆ ತನ್ನ ಕಾಂತಾನ ಕೂಡಿಕೊಂಡು
ಬಂದಾಳೆ ಭಾಗ್ಯದ ಲಕುಮಿ
ಇಂದು ನಮ್ಮ ಮನೆಗೆ ಸಂದೇಹವಿಲ್ಲವಂತೆ
ಕಾಂತವದಿದೆ ಮಂದಿರ
ಜನನಿ ಬರಲು ದಿವಕರ ಪ್ರಭೆಯಂತೆ
ಜಲಜಾಕ್ಷಿಯರೆಲ್ಲರೂ ಜಯ ಜಯ ಜಯವೆನ್ನೆ
ಕಾಂತವಲ್ಲಿಯು ತನ್ನ ಕಾಂತಾನ ಕೂಡಿಕೊಂಡು
ಬಂದಾಳೆ ಭಾಗ್ಯದ ಲಕುಮಿ
ಇಂದು ನಮ್ಮ ಮನೆಗೆ ಸಂದೇಹವಿಲ್ಲವಂತೆ
ಅರಶಿಣ ಕುಂಕುಮ ಗಂಧ
ಪರಿಪರಿಯ ಪುಷ್ಪಗಳಿಂದ ಪೂಜಿಪೆ
ಭೂಸುರರೆಲ್ಲರು ಸಾಸಿರನಾಮವ ಹಾಡೆ
ಲಕ್ಷ್ಮೀದೇವಿಯು ಶ್ರೀನಿವಾಸನ ಕೂಡ
ಬಂದಾಳೆ ಭಾಗ್ಯದ ಲಕುಮಿ
ಇಂದು ನಮ್ಮ ಮನೆಗೆ ಸಂದೇಹವಿಲ್ಲವಂತೆ
ಭಾಗ್ಯಗಳುಂಟಾಯಿತು
ಇಂದು ನಮ್ಮ ಮನೆಯಲ್ಲಿ ಬಡತನ ನೀಗಿಹೋಯಿತು
ಲಕ್ಷ್ಮೀ ಬಂದ ವೇಳೆ ಅಷ್ಟೈಶ್ವರ್ಯ ಬಂತು
ಮನದಿಷ್ಟಾರ್ಥವೆಲ್ಲವು ಸಂಪೂರ್ಣವಾಯಿತು
ಬಂದಾಳೆ ಭಾಗ್ಯದ ಲಕುಮಿ
ಇಂದು ನಮ್ಮ ಮನೆಗೆ ಸಂದೇಹವಿಲ್ಲವಂತೆ
(ನಾನು ತುಂಬಾಚಿಕ್ಕವನಿದ್ದಾಗ ನಮ್ಮಮ್ಮ ಬೆಳಗಿನ ಹೊತ್ತು ಈ ಹಾಡನ್ನು ರಾಗವಾಗಿ ಹಾಡುತ್ತಿದ್ದರು. ಈ ಹಾಡಿನ ಬರಹ ಎಲ್ಲೂ ಸಿಗದೆ ಸುಮಾರು ನಾಲ್ಕು ದಶಕಗಳಿಗೂ ಹಿಂದಿನ ನೆನಪಿನಿಂದ, ನನ್ನ ನೆನಪಿಗೆ ಸಿಕ್ಕಷ್ಟು ಇಲ್ಲಿ ಮೂಡಿಸಿದ್ದೇನೆ. ಯಾರಿಗಾದರೂ ಇದು ಹೆಚ್ಚು ತಿಳಿದಿದ್ದರೆ ನನ್ನನ್ನು ತಿದ್ದಬಹುದು. ಎಲ್ಲರಿಗೂ ಶುಭವಾಗಲಿ. ನಮಸ್ಕಾರ)
ಕಾಮೆಂಟ್‌ಗಳು