ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಿದ್ದೇಶ್ ಹನುಮಂತಪ್ಪ


 ಸಿದ್ದೇಶ್ ಹನುಮಂತಪ್ಪ

ಸಿದ್ದೇಶ್ ಹನುಮಂತಪ್ಪ ಅವರು ಅಪರೂಪದ ಶಿಸ್ತುಬದ್ದ ಓಟಗಾರರು. 

ಸಿದ್ದೇಶ್ ಹನುಮಂತಪ್ಪ ಅವರು ಜನಿಸಿದ್ದು 1959ರ ಮಾರ್ಚ್ 3ರಂದು.  ಅಂದರೆ ಅವರಿಗೀಗ 67 ವರ್ಷ.   ಇವರು ನಿತ್ಯವೂ 22ರಿಂದ 24 ಕಿಮೀ ಓಡುತ್ತಾರೆ.  ಯಾವುದೇ ದಾಖಲೆ ಮಾಡುವುದಕ್ಕಲ್ಲ.  "ನಾನು ನಿತ್ಯ 22-24 ಕಿಮೀ ಓಟ  ಮತ್ತು 6-8 ಕಿಮೀ ಕಾಲ್ನಡಿಗೆ ಮಾಡದಿದ್ದರೇ ನನಗೆ ಶಾಂತಿಯೇ ಇಲ್ಲ, 5 ಕಿಮೀ ಒಳಗಡೆ ಪ್ರದೇಶಗಳಿಗೆ ನಡೆದುಕೊಂಡೇ ಹೋಗುತ್ತೇನೆ, ಗಾಡಿ ಅವಲಂಬನೆ ತೀರಾ ಕಡಿಮೆ” ಎನ್ನುತ್ತಾರೆ.  ಕೆಲವೊಂದು ವರ್ಷಗಳ ಕಾಲ ನಿರಂತರವಾಗಿ ನೂರಾರು ಮ್ಯಾರಥಾನ್‍ಗಳನ್ನು ಕ್ರಮಿಸಿದ್ದಾರೆ. 

ನಿವೃತ್ತ ಸೇನಾನಿಯಾದ  ಸಿದ್ದೇಶ್ ಹನುಮಂತಪ್ಪ ಅವರು ರಕ್ಷಣಾ ಇಲಾಖೆಯ ಆರ್ ಅಂಡ್ ಡಿ ವಿಭಾಗದ ನಿರ್ದೇಶಕರಾಗಿ ನಿವೃತ್ತರಾದವರು.  ಅವರು ಓಡಿರುವ ಮ್ಯಾರಥಾನ್‍ಗಳು ಲೆಕ್ಕವಿಲ್ಲದಷ್ಟು.  ಅವರು ದಾರಿಯಲ್ಲಿ ಹಾದುವಾಗ ರಸ್ತೆಗಳಲ್ಲಿ ಮಾರಾಟಮಾಡುವವರಿಂದ ನೀರು, ಬನ್, ಚಿಕ್ಕಿ, ಕ್ಯಾಂಡಲ್ ಇತ್ಯಾದಿಗಳನ್ನು ಕೊಂಡು ಅವರಿಗೂ ಪ್ರೀತಿ ಹರಿಸುತ್ತಾರೆ.  ಬೆಂಗಳೂರಿನಲ್ಲಿ ಉದ್ಯಾನವನಗಳಲ್ಲಿ ಓಡಾಡುವಾಗ ಅವರನ್ನು ಭೇಟಿಯಾಗಿದ್ದೇನೆ. ಅವರನ್ನು ಕಂಡರೆ ಅವರ ಪರಿಸರದಲ್ಲಿನ ಬಳಗದವರಿಗೆಲ್ಲ ಒಂದು ರೀತಿಯ ನಲ್ಮೆಯ ವಿದ್ಯುತ್ ಸಂಚಾರ. ಅವರ ನಗುಮುಖ ಮೋಹಕವಾದದ್ದು. ಅವರ ವ್ಯಾಯಾಮ, ಓಟ, ನಡೆ ಇವುಗಳಲ್ಲಿ ಹನಿಯುವ ಅವರ ಮೊಗದಲ್ಲಿನ ಬೆವರು ಅವರ ನಗೆಯಲ್ಲಿ ಮುತ್ತಂತೆ ಹೊಳೆಯುವುದನ್ನು ಕಾಣುವವರ ಭಾಗ್ಯವೇ ಭಾಗ್ಯ.

ಸಿದ್ದೇಶ್ ಹನುಮಂತಪ್ಪನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ