ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ. ಎ. ಜ್ಯೋತಿ


 ಎಂ.ಎ. ಜ್ಯೋತಿ


ವಿದುಷಿ ಡಾ. ಎಂ.ಎ. ಜ್ಯೋತಿ ಅವರು ಪಿಟೀಲು ವಾದನ ಮತ್ತು ಗಾಯನ ಕಲಾವಿದೆ.

ಮೇ 5, ಮಿರ್ಲೆ ಅಚ್ಯುತರಾವ್ ಜ್ಯೋತಿ ಅವರ ಜನ್ಮದಿನ.  ಮೈಸೂರಿನವರಾದ ಇವರದು ಸಂಗೀತ ಸಂಸ್ಕೃತಿಗಳ ಮಹಾನ್ ಕುಟುಂಬ.  

ಜ್ಯೋತಿ ಅವರ ತಾಯಿ ನೀರಜಾ ಅವರೂ ಸಂಗೀತ ಮತ್ತು ಸಾಂಸ್ಕೃತಿಕ ಲೋಕದ ಸಾಧಕಿ. ನೀರಜಾ ಅವರ ತಂದೆ ಎಚ್. ಯೋಗಾನರಸಿಂಹo ಅವರು ಸಂಗೀತ ಹಾಗೂ ಸಂಸ್ಕೃತದಲ್ಲಿ ಘನ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ, ಶಿಕ್ಷಣಾಧಿಕಾರಿಗಳಾಗಿ, ಕಲಾನುರಾಗಿಗಳಾಗಿ, ಅಧ್ಯಾಪಕರಾಗಿ ಪ್ರಸಿದ್ಧರಾಗಿದ್ದವರು. ನೀರಜಾ ಅವರ ತಾಯಿ ಸರಸ್ವತಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕೆ ಅಪಾರವಾಗಿ ಶ್ರಮಿಸಿದವರು. ನೀರಜಾ ಅವರ ಸಹೋದರ ಎಚ್. ವೈ.  ಶಾರದಾಪ್ರಸಾದ್ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಹುಕಾಲ ಮಾಧ್ಯಮ ಸಲಹೆಗಾರರಾಗಿದ್ದ ಸಮರ್ಥರು. ಮತ್ತೊಬ್ಬ ಸಹೋದರ ಎಚ್. ವೈ. ಮೋಹನ್ ರಾಮ್ ಪ್ರಸಿದ್ಧ ಸಸ್ಯಶಾಸ್ತ್ರಜ್ಞರಾಗಿದ್ದರು.  

ಜ್ಯೋತಿ ಅವರು ಸಂಗೀತ ಕ್ಷೇತ್ರದಲ್ಲಿ ಪಿಟೀಲು ವಾದನದಲ್ಲಿ ಮತ್ತು ಗಾಯನದಲ್ಲಿ ಹೆಸರಾಗಿದ್ದಾರೆ. ಅವರು ತಮ್ಮ ತಾಯಿ ವಿದುಷಿ ನೀರಜಾ ಅಚ್ಯುತರಾವ್ ಅವರಿಂದ ಸಂಗೀತ ಗಾಯನ ಶಿಕ್ಷಣವನ್ನು ಪಡೆದರು. ಹೆಚ್ಚಿನ ಶಿಕ್ಷಣವನ್ನು ವಿದುಷಿ ಡಾ. ಸುಕನ್ಯಾ ಪ್ರಭಾಕರ್ ಹಾಗೂ ವಿದುಷಿ ನೀಲಾ ರಾಮಗೋಪಾಲ್ ಅವರಲ್ಲಿ ಗಳಿಸಿದರು. ಪಿಟೀಲು ವಾದನವನ್ನು ಕಲೈಮಾಮಣಿ ನೈವೇಲಿಯ ಎಂ. ಎನ್. ಗಣೇಶ ಪಿಳ್ಳೆ, ಮೈಸೂರು ಮಹಾದೇವಪ್ಪ ಹಾಗೂ ಲಾಲ್ಗುಡಿ ಜಯರಾಮನ್ ಅವರ ಮಾರ್ಗದರ್ಶನದಲ್ಲಿ ಸಾಧಿಸಿದರು. 

ಗಾಯನ ಮತ್ತು ಪಿಟೀಲು ವಾದನ ಕಾರ್ಯಕ್ತಮಗಳೆರಡಕ್ಕೂ ಹೆಸರಾಗಿರುವ ಜ್ಯೋತಿ ಅವರು ಆಕಾಶವಾಣಿಯ ಗ್ರೇಡೆಡ್ ಕಲಾವಿದೆ.  ಜ್ಯೋತಿ ಅವರು ಶೈಕ್ಷಣಿಕವಾಗಿಯೂ ಸ್ನಾತಕೋತ್ತರ ಪದವಿ ಮತ್ತು ಪಿಎಚ್.ಡಿ. ಸಾಧನೆ ಮಾಡಿದ್ದಾರೆ. 

ಬಹುಮುಖಿ ಪ್ರತಿಭಾನ್ವಿತರಾದ ಜ್ಯೋತಿ ಅವರು ಹಲವಾರು ಸಂಗೀತದ ಆಲ್ಬಮ್ ಮೂಡಿಸಿದ್ದು, ಅನೇಕ ಸಂಗೀತದ ಬರಹಗಳನ್ನು ಪ್ರಸ್ತುತಪಡಿಸಿ ಹೆಸರಾಗಿದ್ದಾರೆ. SPICMACAY ಸಹಯೋಗದೊಂದಿಗೆ ಅನೇಕ ಸಂಗೀತ ಕಾರ್ಯಕ್ರಮಗಳ ವ್ಯವಸ್ಥಾಪನೆಗೂ ಹೆಸರಾಗಿದ್ದಾರೆ. 

ಸಾಧಕಿ ವಿದುಷಿ ಜ್ಯೋತಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  ನಮಸ್ಕಾರ.

Happy birthday Mirle Achuta Rao Jyothi 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ