ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕತ್ತೆಗೊಂದು ದಿನ


 ನಮಗೂ ಒಂದಿನ ಇದೆ, ಗೊತ್ತಾ😊

Happy Donkey’s Day

"ಏಯ್ ಕತ್ತೆ" ಅಂತ ಅದೆಷ್ಟು ಸಲ ಬೈಸಿಕೊಂಡಿದ್ದೇನೊ!  ನೀವೂ ಬೈಯೊ ಹಾಗಿದ್ರೆ ಬೈಕೋಳಿ.  ಕತ್ತೆಗೂ ಒಂದು ಕಾಲ.  ಪ್ರತಿ ಕತ್ತೆಗೂ ಅದರದೇ ಆದ ದಿನ ಇದೆ.  Each Donkey has its own Day ಎಂಬ ಮಾತು ನೆನಪಾಯ್ತು.  ಇವತ್ತು ಕತ್ತೆಗಳ ದಿನ.  Happy Donkeys’ Day.

ಕತ್ತೆ ತರಹ ಕೆಲಸ ಮಾಡ್ತಾನೆ ಅನ್ನೋವ್ರಿಗೆ ಕತ್ತೆ ಅನ್ನಬೇಕು.  ನನ್ನಂತಹ ಸೋಂಬೇರಿಗೆ ಯಾಕೆ ಕತ್ತೆ ಅಂತಿದ್ರೋ!  ಕೆಲವರು ಕತ್ತೆ ದಡ್ಡ ಪ್ರಾಣಿ ಅಂತಾನೂ ಕರೀತಾರೆ.  ಬಹುಶಃ ಅದಕ್ಕೆ ನನಗೆ ಕತ್ತೆ ಅಂತಿದ್ರು ಅನಿಸುತ್ತೆ.

ಕತ್ತೆ ಕುರಿತು ಕೆಲವು ಸುಂದರ ನೆನಪಿದೆ. ಒಂದು ಬೀchi ಹೇಳುವ ಈ ಮಾತು:

ನಿನ್ನಂತೆ ನೀನಾಗು 
ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ 
ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? 
ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ.   
(- ಅಂದನಾ ತಿಂಮ)

ಇನ್ನೊಂದು ಉದಯ್ ಜಾದೂಗಾರ್ ತಮ್ಮ ಮಾತನಾಡೊ ಬೊಂಬೆ ಪ್ರದರ್ಶನದಲ್ಲಿ ಹೇಳಿದ್ದ ಸನ್ನಿವೇಶ:

ಒಂದಿನ ಉದಯ್ ಜಾದೂಗಾರ್ ಮನೆ ಬಾಗಿಲಲ್ಲಿ
ಇವರ ಮಾತನಾಡೊ ಬೊಂಬೆ ಜೊತೆ ಕೂತಿದ್ರು.  ಪಕ್ಕದ ಮನೆಯವ ಕುದುರೆ ಹತ್ತಿ ಇವರ ಮುಂದೆ ಹೊರಟ.

ಈ ಮಾತನಾಡೊ ಬೊಂಬೆ ಸುಮ್ನೆ ಇರಬಾರದ! ಎಲ್ಲರಿಗೂ ಕೇಳೋ ತರಹ ಜೋರಾಗಿ ಹೇಳ್ತು "ಕತ್ತೆ ಜೊತೆ ಹೊರಟ!" ಅಂತ.  ಸವಾರಿ ಮಾಡ್ತಿದ್ದವನಿಗೆ ಅವಮಾನ ಆಯ್ತು.  ಕೋಪದಿಂದ ಬಂದೇ ಬಿಟ್ಟ "ಏನ್ ನಿನ್ನ ಬೊಂಬೆಗೆ ಕಣ್ ಕಾಣಲ್ವಾ, ನಾ ಹೋಗ್ತಿರೋದು ಕುದುರೆ ಜೊತೆ”.

ಬೊಂಬೆ ಹೇಳ್ತು: "ನಾ ನಿನಗಲ್ಲ ಹೇಳಿದ್ದು! ನಾ ಹೇಳಿದ್ದು ನಿನ್ನ ಕುದುರೆಗೆ!!!"

ಮತ್ತೊಂದು ಸಂಗತಿ ಅಂದ್ರೆ ಸಿನಿಮಾಗಳಲ್ಲಿ ಕೆಟ್ಟದಾಗಿ ಹಾಡೋರ ಪಕ್ಕ ಕತ್ತೆ ತೋರಿಸ್ತಾರೆ.

ಪಾಪ! ಎಲ್ರೂ ಕತ್ತೇನೇ ನಿಂದಿಸ್ತಾರೆ.  ಹುಲಿ, ಸಿಂಹ ಆನೆಗಳನ್ನ, ಹೆಂಡತೀನ (No ಬಹುವಚನ🙊), ಮಕ್ಕಳನ್ನ  ನಿಂದಿಸಿ ನೋಡೋಣ 😊 

ಕತ್ತೆಗೂ ಒಂದು ಕಾಲ.  ಅದು ಇವತ್ತು!

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ