ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಮಲೇ ಕಮಲಾಲಯೆ

 


ಕಮಲೇ ಕಮಲಾಲಯೇ
ಕಮಲ ಭವಾದಿ ಸುರ ವಂದಿತ ಪದೇ
                             
ತ್ರಿಗುಣಾಭಿಮಾನಿಯೇ
ಅಗಣಿತ ಗುಣ ಶ್ರೇಣಿಯೇ
ಖಗವಾಹನನ ರಾಣಿಯೇ 
ಹಗಲು ಇರುಳು 
ಹರಿಪದಯುಗ ತೋರಿಸೆ 
                           
ಲಿಂಗ ಶರೀರವ ಭಂಗವ ಮಾಡಲು
ನಿನ್ನಂಗದಲ್ಲಿನಾ ಬೆವರಿನ 
ಸಂಗವಾಗಲು ಭವಭಂಗ ಹಿಂಗುವುದು 
                             
ಧಾಮತ್ರಯ ರೂಪಿಣೀ
ಕಮಲ ಭವಾಂತ ಕಾರಿಣಿ
ವಿಮಲ ಪದುಮ ಸರೋವಾಸಿನಿ 
ಸ್ವಾಮಿತೀರ್ಥದಿ ನಿಂತ 
ಶ್ರೀ ವೆಂಕಟೇಶನ ರಾಣಿ

ಸಾಹಿತ್ಯ: ಬೇಲೂರು ವೆಂಕಟ ದಾಸರು
                            


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ