ಎಂ.ಎಸ್.ಗಾಯತ್ತಿ
ಎಂ. ಎಸ್. ಗಾಯತ್ರಿ
ಎಂ. ಎಸ್ ಗಾಯತ್ರಿ ಅವರು ಭೌತಶಾಸ್ತ್ರ ತಜ್ಞರಾಗಿ, ನಿವೃತ್ತ ಕಾಲೇಜು ಪ್ರಾಚಾರ್ಯರಾಗಿ, ವಿಜ್ಞಾನ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ
ಜೂನ್ 15 ಗಾಯತ್ರಿ ಅವರ ಜನ್ಮದಿನ. ಇವರು ಮಹಾನ್ ವಿದ್ವಾಂಸರಾದ ಎಂ.ವಿ. ಸತ್ಯನಾರಾಯಣ ಶಾಸ್ತ್ರಿಗಳ ಸುಪುತ್ರಿ. ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್ಸಿ ಓದಿದ ಗಾಯತ್ರಿ ಅವರಿಗೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲೂ ಒಲವಿದೆ
ಗಾಯತ್ರಿ ಅವರು ಕಾಲೇಜಿನಲ್ಲಿ ಭೌತಶಾಸ್ತ್ರ ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ವಿದ್ಯಾರ್ಥಿ ಬಳಗಕ್ಕೆ ಆಪ್ತರಾಗಿದ್ದವರು.
"ನಿತ್ಯಜೀವನದಲ್ಲಿ ಇರುವ ಭೌತವಿಜ್ಞಾನ"ದ ಕುರಿತಾದ ಅವರ ಸರಳ ಸುಂದರ ಕನ್ನಡದ ಸರಣಿ ಬರಹಗಳನ್ನು ಓದುವುದೇ ಚಂದದ ಅನುಭವ. ಪತ್ರಿಕೆಗಳಲ್ಲಿಯೂ ಅವರ ಶಿಕ್ಷಣ ಕಾಳಜಿಯ, ವಿಜ್ಞಾನದ ಕುರಿತಾದ ವೈವಿಧ್ಯಪೂರ್ಣ ಬರಹಗಳು ಮೂಡಿಬಂದಿವೆ. ಅಧ್ಯಾತ್ಮ, ಅಡುಗೆ ಕಲೆ, ಸಂಸ್ಕೃತಿ , ಪ್ರವಾಸದ ಅವರ ಅನುಭವಾತ್ಮಕ ಬರಹಗಳೂ ಅಷ್ಟೇ ಸುಂದರ.
ನಸುನಗೆಯ ವಿಶಾಲ ಮನೋಭಾವದಿಂದ ನಮ್ಮೆಲ್ಲರನ್ನೂ ಪ್ರೋತ್ಸಾಹಿಸುವ ಆತ್ಮೀಯರಾದ ಗಾಯತ್ರಿ ಶಾಸ್ತ್ರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ 🌷🙏🌷
Happy birthday Gayathri Shastry🌷🙏🌷
ಕಾಮೆಂಟ್ಗಳು