ಸಾಯಿಕುಮಾರ್
ಸಾಯಿಕುಮಾರ್
ಸಾಯಿಕುಮಾರ್ ಕನ್ನಡ ಮತ್ತು ತೆಲುಗು ಚಿತ್ರಗಳ ಖ್ಯಾತ ನಟರು.
ಸಾಯಿಕುಮಾರ್ 1960ರ ಜುಲೈ 27ರಂದು ಆಂಧ್ರದ ವಿಜಯನಗರಂ ಎಂಬಲ್ಲಿ ಜನಿಸಿದರು. ತಂದೆ ಪಿ.ಜೆ. ಶರ್ಮಾ ಅವರು ಕಂಠದಾನ ಕಲಾವಿದರಾಗಿದ್ದರು. ತಾಯಿ ಕೃಷ್ಣಜ್ಯೋತಿ ಅವರು ಕರ್ನಾಟಕದ ಬಾಗೇಪಲ್ಲಿಯವರಾಗಿದ್ದು
ಕನ್ನಡವೂ ಸೇರಿದಂತೆ ದಕ್ಷಿಣ ಭಾರತದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದರು. ಸಾಯಿಕುಮಾರ್ ಚೆನ್ನೈನಲ್ಲಿ ಎಂ.ಎ. ಮತ್ತು ಎಂ.ಫಿಲ್ ಪದವಿ ಗಳಿಸಿದ ಪ್ರತಿಭಾನ್ವಿತರು. ಇವರ ಸಹೋದರರಾದ ರವಿಶಂಕರ್, ಅಯ್ಯಪ್ಪ ಶರ್ಮಾ ಸಹಾ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಇವರ ಪುತ್ರ ಆದಿ ಸಾಯಿಕುಮಾರ್ ತೆಲುಗು ಚಿತ್ರರಂಗದಲ್ಲಿ ನಾಯಕನಟರಾಗಿ ಹೆಸರಾಗಿದ್ದಾರೆ.
ಸಾಯಿಕುಮಾರ್ 1975ರಲ್ಲಿ ತೆಲುಗಿನ 'ದೇವುಡು ಚೇಸಿನ ಪೆಲ್ಲಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. 1996ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ 'ಪೊಲೀಸ್ ಸ್ಟೋರಿ' ಇವರಿಗೆ ಖ್ಯಾತಿ ತಂದಿತು. ಮುಂದೆ ಕನ್ನಡದಲ್ಲಿ ಅಗ್ನಿ ಐಪಿಎಸ್, ಮನೆ ಮನೆ ರಾಮಾಯಣ, ಪೊಲೀಸ್ ಸ್ಟೋರಿ 2, ಲಾಕ್ಅಪ್ ಡೆತ್, ಸೆಂಟ್ರಲ್ ಜೈಲ್ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲೂ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಧ್ವನಿ ಕಲಾವಿದರಾಗಿಯೂ ಇವರ ಸಾಧನೆ ಅಪಾರ.
ಸಾಯಿಕುಮಾರ್ ಅವರಿಗೆ ಮೂರು ಫಿಲಂಫೇರ್ ಪ್ರಶಸ್ತಿ, ಎರಡು ನಂದಿ ಪ್ರಶಸ್ತಿ ಹಾಗೂ ಒಂದು SIIMA ಪ್ರಶಸ್ತಿ ಸಂದಿದೆ. 2010 ವರ್ಷದ ಪ್ರಸ್ಥಾನಂ ಚಿತ್ರದ ಇವರ ಅಭಿನಯವನ್ನು ದಶಕದ ಶ್ರೇಷ್ಠ ಅಭಿನಯಗಳಲ್ಲಿ ಒಂದು ಎಂದು ಫಿಲಂ ಕಂಪಾನಿಯನ್ ಹೆಸರಿಸಿದೆ.
On the birthday of popular actor Saikumar 🌷🌷🌷
ಕಾಮೆಂಟ್‌ಗಳು