ನಗುತಿರೆ
ನೀ ನಗುತಿರೆ ಹೂವು ಅರಳುವುದು😊
ಸಂತಸವೆಂಬುದು,
ನಾವು ಬದುಕಿಗೆ ಹೇಗೆ ಸ್ಪಂದಿಸುತ್ತಿದ್ದೇವೆ
ಎಂಬುದನ್ನವಲಂಬಿಸಿದೆ 😇
Life is all about how we approach it.
ಕೃತಜ್ಞತೆ: ಈ ಚಿತ್ರವನ್ನು ಅಕ್ಕರೆಯಿಂದ ಕಳುಹಿಸಿದ ಸಹೋದರಿ ಪೂರ್ಣಿಮಾ ನರಸಿಂಹ ಅವರಿಗೆ 🌷🌷🌷Thank you ಪುಟ್ಟಿ
ಅವರ ಕವಿತೆ ಇಲ್ಲಿದೆ:
ಚಿಟ್ಟೆ ..ಚಾಕ್ಲೇಟ್
ಬರೆವೆ ಬರೆವೆ ಚುಕ್ಕಿ ಚುಕ್ಕಿ ಚಿಟ್ಟೆ ಹಾಡನು..
ತರುವೆ ತರುವೆ ರಾಗ ಹಾಕಿ ಹಾಡೋ ಹಾಡನು..
ಮೆರೆವೆ ಮೆರೆವೆ ಹೂಬನದೊಳು ಚಿಟ್ಟೆಯಂತೆಯೆ..
ನಲಿವೆ ನಲಿವೆ ಹಾಡಿ ಮರೆವೆ ಜಗದ ಚಿಂತೆಯ..
ಎರಡು ಎರಡು ಪಕ್ಕ ಬೇಕು ನನಗೆ ಎಡಬಲ..
ಕಟ್ಟಿಕೊಂಡು ಹಾರುವೆನು ಮುಗಿಲಿನೆತ್ತರ...
ಚಂದಮಾಮನನ್ನೂ ಕರೆವೆ ಮುಗಿಲ ಬಯಲಿಗೆ
ಪಾತರಗಿತ್ತಿಯರೆ ಬನ್ನಿ ನೀವೂ ಅಲ್ಲಿಗೆ...
ಗರಿಯ ನುಣುಪು ರಂಗು ರಂಗು ಹಬ್ಬ ಕಣ್ಣಿಗೆ..
ಚಿಕ್ಕಿ ತಾರೆ ಆಟನೋಡಿ ಚಿಟ್ಟೆಯೊಂದಿಗೆ.....
ಬೆಳ್ಳಿ ಮುಗಿಲ ವನದಲೀಗ ಚಿಟ್ಟೆ ಲೋಕವು..
ಅಲ್ಲೂ ಈಗ ಬಹುಬಗೆಯ ಹೂವ ತೋಟವು.
ಪಕ್ಕ ಕಟ್ಟಿ ಹಾರಿದಂತ ಪುಟ್ಟಿಯ ಖುಷಿಯು
ಚಿತ್ರದಲ್ಲಿ ಮೂಡಿತಲ್ಲ ಚಿಟ್ಟೆಯ ಜಗವು!
ತಿರುವಣ್ಣನ ಒತ್ತಾಸೆಗೆ ಹುಟ್ಟಿತು ಹಾಡು..
ಚಾಕಲೇಟೇ ಪೆಟೆಂಟು ಕವನಕೆ ನೋಡು..
😍😍😍🖊🖊🖊🖊
ಪೂರ್ಣಿಮಾ ಕಮಲಶಿಲೆ.
ಚಿತ್ರ: ಜಾಲತಾಣ.

ಕಾಮೆಂಟ್‌ಗಳು