ಅಂಕಿತ ಪುಸ್ತಕ
'ಅಂಕಿತ' ಪ್ರಕಾಶನಕ್ಕೆ 30ರ ಸಂಭ್ರಮ
ಕನ್ನಡಿಗರಾದ ನಮಗೆ 'ಗಾಂಧೀ ಬಜಾರು' ಹಲವು ಕಾರಣಗಳಿಗೆ ಇಷ್ಟ. 'ಅಂಕಿತ ಪುಸ್ತಕ' ಈ ಪ್ರಮುಖ ಕಾರಣಗಳಲ್ಲೊಂದು.
'ಅಂಕಿತ ಪುಸ್ತಕ' ಮಳಿಗೆಗೆ ಹೋಗಿ ಹಸನ್ಮುಖಿ ಪ್ರಕಾಶ್ ಕಂಬತ್ತಳಿ - ಪ್ರಭಾ ಕಂಬತ್ತಳಿ ದಂಪತಿಯ ಅಕ್ಕರೆಯ ನೆಲೆಯಲ್ಲಿ ಪುಸ್ತಕಗಳನ್ನು ನೋಡಿ, ಕೊಂಡು ಬರುವುದು ಉಲ್ಲಾಸ ತರುವ ಸಂಗತಿ. ಕನ್ನಡದ ಕುರಿತಾಗಿ ಅಪಾರ ಕಾಳಜಿ ಉಳ್ಳವರಾಗಿ, ಬರಹಗಾರರಾಗಿ, ಸಹಸ್ರಾರು ಉತ್ತಮ ಪುಸ್ತಕಗಳನ್ನು ಪ್ರಕಟಿಸಿದವರಾಗಿ ಇವರು ನೀಡಿರುವ ಕೊಡುಗೆ ಅಪಾರ. ತಮ್ಮದೇ ಪ್ರಕಾಶನದ್ದು ಮಾತ್ರವಲ್ಲದೆ ಇತರ ಎಲ್ಲ ಪ್ರಕಾಶನದ ಪುಸ್ತಕಗಳೂ ಇಲ್ಲಿ ಲಭ್ಯ. ಉತ್ತಮ ಪ್ರಕಾಶನದ ಅಭಿರುಚಿಯುಳ್ಳ ಇವರಿಗೆ ಇತರ ಪ್ರಕಾಶಕರು ತಮ್ಮ ಪ್ರತಿಸ್ಫರ್ದಿಗಳೆಂಬ ಭಾವವೇ ಇಲ್ಲ. ಪ್ರತಿ ವರ್ಷ ಉತ್ತಮ ಪ್ರಕಾಶನ ಸಂಸ್ಥೆಗಳಿಗೆ 'ಕಸಾಪ'ದಲ್ಲಿ ದತ್ತಿ ಇರಿಸಿ ಪ್ರಶಸ್ತಿ ಇತ್ತು ಗೌರವಿಸುತ್ತ ಬಂದಿದ್ದಾರೆ. ಅಂಕಿತ ಪುಸ್ತಕದ ಪ್ರತಿ ಪುಸ್ತಕ ಬಿಡುಗಡೆ ಸಮಾರಂಭವೂ ಆಪ್ತ ನೆಲೆಯ ಹಬ್ಬದ ವಾತಾವರಣ ನೀಡುತ್ತವೆ
ಪ್ರಕಾಶ್ ಕಂಬತ್ತಳ್ಳಿ ಅವರು ದಾವಣಗೆರೆಯಲ್ಲಿ ಹುಟ್ಟಿ ಬೆಂಗಳೂರಿಗೆ ಬಂದು ನಾಟಕಶಾಸ್ತ್ರದಲ್ಲಿ ಬಿ.ಎ ಹಾಗೂ ಕನ್ನಡದಲ್ಲಿ ಎಂ.ಎ ಪದವಿ ಪಡೆದಿದ್ದು, ಭಾಷಾಂತರಕಾರರಾಗಿ, ಕಥೆಗಾರರಾಗಿ ಹಾಗೂ ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. ಇವರು ತಮ್ಮ ಪತ್ನಿಯೊಡಗೂಡಿ 1995ರ ಆಗಸ್ಟ್ 15ರಂದು ಪ್ರಾರಂಭಿಸಿದ ಅಂಕಿತ ಪುಸ್ತಕ ಪ್ರಕಾಶನ 30 ವರ್ಷಗಳನ್ನು ಪೂರೈಸಿರುವುದು ಅತ್ಯಂತ ಸಂತಸದ ವಿಷಯ. ಈ ಪ್ರಕಾಶನದಿಂದ ಬೆಳಕಿಗೆ ಬಂದ ಹೊಸ ಪ್ರತಿಭಾನ್ವಿತ ಬರಹಗಾರರು ಅಪಾರ.
ಪ್ರಭಾ - ಪ್ರಕಾಶ್ ಕಂಬತ್ತಳಿ ದಂಪತಿಗೆ ಹೃತ್ಪೂರ್ವಕ ಅಭಿನಂದನೆ.
ಕಾಮೆಂಟ್‌ಗಳು