ವಿಟ್ಲ ಶಂಭು ಶರ್ಮ
ವಿಟ್ಲ ಶಂಭು ಶರ್ಮ ನಮನ
ಯಕ್ಷಗಾನ ಕಲಾವಿದ, ತಾಳಮದ್ದಳೆ ಅರ್ಥಧಾರಿ ವಿಟ್ಲ ಶಂಭು ಶರ್ಮ ಅವರು ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಶಂಭು ಶರ್ಮರು ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಕೃಷ್ಣ ಭಟ್ಟ - ಹೇಮಾವತಿ ದಂಪತಿಯ ಸುಪುತ್ರರಾಗಿ 1951 ರ ಅಕ್ಟೋಬರ್ 13 ರಂದು ಜನಿಸಿದರು. ಆಕಸ್ಮಿಕ ಸಂದರ್ಭವೊಂದರಲ್ಲಿ ತಾಳಮದ್ದಲೆ ಅರ್ಥ ಹೇಳುವ ಮೂಲಕ ಯಕ್ಷ ಕ್ಷೇತ್ರಕ್ಕೆ ಕಾಲಿಟ್ಟ ಇವರು, ಇದೇ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರಸಿದ್ಧ ಅರ್ಥಧಾರಿಯಾಗಿ ಹೆಸರು ಮಾಡಿದರು.
ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಶಂಭು ಶರ್ಮರು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಸುಬ್ರಹ್ಮಣ್ಯ ಮೇಳ, ಕದ್ರಿ ಮೇಳ ಮೊದಲಾದ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದರು.
ಅಗಲಿದ ಮಹಾನ ಕಲಾಚೇತನಕ್ಕೆ ನಮ್ರ ನಮನ 🌷🙏🌷
Respects to departed soul Great Yakshagana artiste Vitla Shambhu Sharma 🌷🙏😊

ಕಾಮೆಂಟ್‌ಗಳು