ಕೆ.ಆರ್.ನರಸಿಂಹನ್
ಕೆ.ಆರ್.ನರಸಿಂಹನ್
ವೃತ್ತಿಯಿಂದ ನಿವೃತ್ತ ಅಧ್ಯಾಪಕರಾದ ಕೆ.ಆರ್. ನರಸಿಂಹನ್ ಶಿಲಾ ಶಾಸನಗಳ ಕುರಿತಾಗಿ ಅಧ್ಯಯನಶೀಲರಾಗಿ ಹೆಸರಾಗಿದ್ದಾರೆ.
ಕೆ.ಆರ್.ನರಸಿಂಹನ್ 1950ರ ನವೆಂಬರ್ 21ರಂದು ಜನಿಸಿದರು. ಇವರು ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದವರು.
ನರಸಿಂಹನ್ ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ 1971ರಲ್ಲಿ ಸೇವೆಗೆ ಸೇರಿದರು. ಅಧ್ಯಾಪನದ ಜತೆಗೆ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲದಿಂದ ಶಿಲಾ ಶಾಸನಗಳ ಅಧ್ಯಯನಕ್ಕೆ ತೊಡಗಿದರು. ಶಿಲಾಶಾಸನಗಳ ಅಧ್ಯಯನಕ್ಕಾಗಿಯೆ ತಮಿಳು, ತೆಲುಗು, ಹಳಗನ್ನಡ ಕಲಿತು ಅವಿಭಜಿತ ಕೋಲಾರ ಜಿಲ್ಲೆಯ ಹಲವಾರು ದೇವಾಲಯಗಳ ಕುರಿತು ಸಂಶೋಧನಾತ್ಮಕ ಅಧ್ಯಯನ ನಡೆಸಿದರು.
ನರಸಿಂಹನ್ ಅವರು ಶಿಲಾಶಾಸನ ಅಭ್ಯಸಿಸುವುದಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ದೊರಕುತ್ತಿದ್ದ ಜಿಲ್ಲೆಯ ಶಿಲಾ ಶಾಸನಗಳ ಕುರಿತಾದ ಪೂರ್ವ ಅಧ್ಯಯನಗಳನ್ನು ಪರಿಶೀಲಿಸಿ ಮುಂದಿನ ತಯಾರಿಗೆ ಸಜ್ಜಾಗುತ್ತಿದ್ದರು. "ಹೀಗಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಶಿಲಾಶಾಸನಗಳನ್ನು ಪುಸ್ತಕಗಳಲ್ಲಿ ದಾಖಲಿಸುವುದರೊಂದಿಗೆ ಅದರ ಮಹತ್ವದ ಬಗ್ಗೆ ಸಂಶೋಧನೆ ನಡೆಸಲು ಸಾಧ್ಯವಾಯಿತು" ಎನ್ನುತ್ತಾರೆ ನರಸಿಂಹನ್.
ನರಸಿಂಹನ್ ಅವರು ಅವಿಭಜಿತ ಕೋಲಾರ ಜಿಲ್ಲೆಯ ಬಹುತೇಕ ಶಾಸನಗಳನ್ನು ಅಭ್ಯಸಿಸಿ ಅವುಗಳಿಗೆ ಪುಸ್ತಕ ರೂಪ ಕೊಟ್ಟಿದ್ದಾರೆ. ಕೋಲಾರ ಜಿಲ್ಲೆಯ ಸುತ್ತಮುತ್ತಲಿನ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಾಲಯ, ಕುರುಡುಮಲೆ ಗಣಪತಿ ದೇವಾಲಯಗಳ ಕುರಿತು ಮಹತ್ವದ ವಿಷಯಗಳನ್ನು ದಾಖಲಿಸಿದ್ದಾರೆ.
ನರಸಿಂಹನ್ 5 ಸ್ವಂತ ಕೃತಿ, 4 ಸಂಪಾದಿತ ಕೃತಿ ಪ್ರಕಟಿಸಿದ್ದಾರೆ ಹಾಗೂ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ.
ನರಸಿಂಹನ್ ಅವರಿಗೆ ಹಂಸ ಸನ್ಮಾನ್, ಗಾಯತ್ರಿ ಪುರಸ್ಕಾರ, ಜಿಲ್ಲಾ ಸಾಹಿತ್ಯ ಸಮ್ಮೇಳನ ಪುರಸ್ಕಾರ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ಹಿರಿಯರಾದ ಕೆ.ಆರ್.ನರಸಿಂಹನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to Great Teacher and historian Narasimhan Kr Sir 🌷🙏😊

ಕಾಮೆಂಟ್‌ಗಳು