ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯಾ ಅರಕೆರೆ


 ಸಂಧ್ಯಾ ಅರಕೆರೆ


ಸಂಧ್ಯಾ ಅರಕೆರೆ ಅವರು ಖ್ಯಾತ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ.

ಡಿಸೆಂಬರ್ 25, ಸಂಧ್ಯಾ ಅವರ ಜನ್ಮದಿನ. 
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ಇವರ ಊರು. ಅರಕೆರೆಯಲ್ಲಿ ಪಿಯುವರೆಗೆ ಓದಿ, ಮೈಸೂರಿನಲ್ಲಿ ಪದವಿಗೆ ಓದಿದರು. ನಂತರ ನೀನಾಸಂ ಸೇರಿದರು. 

ಸಂಧ್ಯಾ ಅವರು 2015ರಲ್ಲಿ ಥಿಯೇಟರ್ ನಲ್ಲಿ ಎಂಎ ಮಾಡಬೇಕು ಎಂದು ಬೆಂಗಳೂರಿಗೆ ಬಂದಾಗ  ಒಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಅವರನ್ನರಸಿ ಬಂದವು. 'ಸುಳಿ’ ಸಂಧ್ಯಾ ಅವರ ಮೊದಲ ಸಿನಿಮಾ. ಪ್ರಕಾಶ್ ರೈ ಪ್ರಸ್ತುತ ಪಡಿಸಿದ  ‘ಫೋಟೋ’, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಭೀಮ ಸೇನ ನಳ ಮಹರಾಜ’, ‘ಒಂದಲ್ಲ ಎರಡಲ್ಲ’, ‘ಬೈ ಟು ಲವ್’, ಸ್ವಾತಿ ಮುತ್ತಿನ ಮಳೆ ಹನಿಯೇ', 'ಟೋಬಿ' ಮೊದಲಾದ ಚಿತ್ರಗಳಲ್ಲಿ ನಟಿಸಿದ ಅವರಿಗೆ 'ಸು ಫ್ರಮ್ ಸೋ’ ಚಿತ್ರದಲ್ಲಿನ ಭಾನು ಪಾತ್ರ ಅಪಾರ ಕೀರ್ತಿ ತಂದಿದೆ. 

ರಂಗಭೂಮಿ ಹಿನ್ನೆಲೆಯವರಾದ ಸಂಧ್ಯಾ
ಅನೇಕ ನಾಟಕಗಳನ್ನೂ ಮಾಡಿದ್ದಾರೆ. ‘ಗಾಂಧಿ vs ಗಾಂಧಿ’, ‘ಅಂಬೇಡ್ಕರ್’, ‘ಸೀತಾ ಸ್ವಯಂವರ’ ಈ ರೀತಿಯ ಹಲವು ನಾಟಕಗಳಲ್ಲಿ ಅವರು ನಟಿಸಿದ್ದಾರೆ.

ಸಂಧ್ಯಾ ಅರಕೆರೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Sandhya Arakere 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ