ವೇಣುಗೋಪಾಲ ಹೆಮ್ಮಿಗೆ
ವೇಣುಗೋಪಾಲ ಹೆಮ್ಮಿಗೆ
ವಿದ್ವಾನ್ ವೇಣುಗೋಪಾಲ ಹೆಮ್ಮಿಗೆ ಅವರು ಸಂಗೀತ ವಿದ್ವಾಂಸರಾಗಿ, ವೇಣುವಾದಕರಾಗಿ, ಸಂಗೀತ ಸಂಯೋಜಕರಾಗಿ ಮತ್ತು ಗುರುವಾಗಿ ಹೆಸರಾಗಿದ್ದಾರೆ.
ವೇಣುಗೋಪಾಲ ಹೆಮ್ಮಿಗೆ ಅವರು 1959ರ ಡಿಸೆಂಬರ್ 25ರಂದು ಜನಿಸಿದರು. ತಾಯಿ ಎಚ್.ಎಸ್. ಜಯಲಕ್ಷ್ಮಿ. ತಂದೆ ಎಚ್.ಎಸ್. ಶ್ರೀನಿವಾಸಮೂರ್ತಿ.
ವೇಣುಗೋಪಾಲ ಹೆಮ್ಮಿಗೆ ಅವರು ಮೈಸೂರಿನಲ್ಲಿ ವಿದ್ವಾನ್ ಎ.ವಿ. ಪ್ರಕಾಶ್ ಅವರಲ್ಲಿ ಅವರ ಆರಂಭಿಕ ಶಿಕ್ಷಣ ಪಡೆದು, ನಂತರ ಬೆಂಗಳೂರಿನಲ್ಲಿ ವಿದ್ವಾನ್ ಎಂ.ಎಸ್. ಶ್ರೀನಿವಾಸ ಮೂರ್ತಿ ಅವರಲ್ಲಿ ಹೆಚ್ಚಿನ ಸಾಧನೆ ಮುಂದುವರಿಸಿದರು. ಇದು ಇವರ ಐದು ದಶಕಗಳಿಗೂ ಹೆಚ್ಚು ಕಾಲದ ಗಮನಾರ್ಹ ವೃತ್ತಿಜೀವನಕ್ಕೆ ಅಡಿಪಾಯ ಹಾಕಿತು.
ವೇಣುಗೋಪಾಲ ಹೆಮ್ಮಿಗೆ ಅವರು ಒಬ್ಬ ಏಕವ್ಯಕ್ತಿ ವಾದಕರಾಗಿ ಮತ್ತು ಸಹ ಕಲಾವಿದರಾಗಿ ಗುರುತಿಸಲ್ಪಟ್ಟಿದ್ದಾರೆ. ಏಕವ್ಯಕ್ತಿ ಕೊಳಲು ವಾದಕರಾಗಿ, ಅವರು ಭಾರತ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರತಿಷ್ಠಿತ ವೇದಿಕೆಗಳನ್ನು ಅಲಂಕರಿಸಿದ್ದು, ತಮ್ಮ ಮಧುರವಾದ ಪ್ರದರ್ಶನಗಳಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಇವರಿಗೆ ಪಿಟೀಲು ವಾದನದಲ್ಲಿಯೂ ಪರಿಶ್ರಮವಿದೆ.
ಮೈಸೂರು ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸ್ಮರಣೀಯ ವಾದನಗೋಷ್ಠಿ ಮತ್ತು ಕರ್ನಾಟಕದ ಮಾಜಿ ರಾಜ್ಯಪಾಲರಾದ ಡಾ. ರಮಾ ದೇವಿ ಅವರ ಸಮ್ಮುಖದಲ್ಲಿ ರಾಜಭವನದಲ್ಲಿ ನಡೆಸಿದ ವಿಶಿಷ್ಟ ಸಂಗೀತ ಕಚೇರಿಗಳೂ ಸೇರಿದಂತೆ ವೇಣುಗೋಪಾಲ ಹೆಮ್ಮಿಗೆ ಅವರ ಕಛೇರಿಗಳು ಭಾರತದ ವಿವಿಧ ಪ್ರಸಿದ್ಧ ಸಭಾ ಮತ್ತು ವೇದಿಕೆಗಳಲ್ಲದೆ
ವಿಶ್ವದಾದ್ಯಂತ ಸಂಗೀತ ರಸಿಕರ ಮನತಣಿಸಿವೆ.
ವೇಣುಗೋಪಾಲ ಹೆಮ್ಮಿಗೆ ಅವರು ಸಂಗೀತ ನಿರ್ದೇಶಕರಾಗಿ ಅನೇಕ ಸಂಗೀತ ಪ್ರದಾನ ಆಲ್ಬಮ್ಗಳು, ನಾಟ್ಯಸಂಯೋಜನೆಗಳು ಮತ್ತು ರಂಗಪ್ರದರ್ಶನಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು ಅವುಗಳಲ್ಲಿ ಡಾ. ಎಸ್. ಎಲ್. ಭೈರಪ್ಪನವರ 'ಮಂದ್ರ' ಕಾದಂಬರಿ ಆಧಾರಿತ ರಂಗ ಪರಿಕಲ್ಪನೆಯ ಪ್ರದರ್ಶನಗಳೂ ಸೇರಿವೆ.
ವೇಣುಗೋಪಾಲ ಹೆಮ್ಮಿಗೆ ಅವರು ಬೆಂಗಳೂರಿನಲ್ಲಿ ಗೋಕುಲಮ್ ಸಂಗೀತ ಶಾಲೆ ನಡೆಸುತ್ತಿದ್ದು ಅನೇಕ ಪ್ರತಿಭೆಗಳಿಗೂ ಬೆಳಕು ನೀಡುತ್ತಿದ್ದಾರೆ. ವೇಣುಗೋಪಾಲ ಹೆಮ್ಮಿಗೆ ಅವರಿಗೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ
ಸಂಗೀತ ಸಾಧಕರಾದ ವೇಣುಗೋಪಾಲ ಹೆಮ್ಮಿಗೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to Great Musician, Flutist, Music Guru, Music Composer Venugopal Hemmige Sir 🌷🙏🌷

ಕಾಮೆಂಟ್‌ಗಳು