ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಂದಿರಾಜಾನಕಿ ಎಸ್.ಶರ್ಮ


 ಇಂದಿರಾಜಾನಕಿ ಎಸ್.ಶರ್ಮ


ಇಂದಿರಾಜಾನಕಿ ಎಸ್.ಶರ್ಮ ಸಾಹಿತ್ಯಲೋಕದಲ್ಲಿ ಸಾಧನೆ ಮಾಡುತ್ತ ಬಂದವರು. ಇವರು ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ, ನಟ, ನಿರ್ದೇಶಕ, 
ಶ್ರೀರಾಮಚರಿತಾಮೃತಂ, ಶ್ರೀಮನ್ಮಹಾಭಾರತ ಕಥಾಮೃತಂ, ಕುರುಕ್ಷೇತ್ರಕ್ಕೊಂದು ಆಯೋಗ, ರಾಮರಾಜ್ಯದ ರೂವಾರಿ, ರಾಮರಾಜ್ಯಪೂರ್ವರಂಗ
ಪ್ರಿಯದರ್ಶನಂ, ಯಕ್ಷಗಾನ ವಿವೇಚನೆ ಮುಂತಾದ ಕೃತಿಗಳನ್ನು ರಚಿಸಿದ ಮಹಾನ್
ಸಾಹಿತಿ ದೇರಾಜೆ ಸೀತಾರಾಮಯ್ಯನವರ ಮಗಳು.

ಇಂದಿರಾಜಾನಕಿ ಅವರು 1957ರ ಡಿಸೆಂಬರ್ 15ರಂದು ಜನಿಸಿದರು.   ಇವರ ಪತಿ ದಿ. ಕೆ.ಎಸ್.ಶರ್ಮ ಕರ್ಣಾಟಕ ಬ್ಯಾಂಕಿನ ಉದ್ಯೋಗಿಯಾಗಿದ್ದವರು. ಮಗ ಅಶ್ವಿನ್ ಶರ್ಮ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ.
 
ಇಂದಿರಾಜಾನಕಿ ಅವರು ಬಾಲ್ಯದಿಂದಲೇ ತನ್ನ ತೀರ್ಥರೂಪರ ಮಾತುಗಳನ್ನು ಕೇಳುತ್ತಾ,  ಅವರ ಕೃತಿಗಳನ್ನು ಪ್ರತಿ ಮಾಡಿಕೊಡುತ್ತಾ, ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಒಲವನ್ನೂ, ವಿವಿಧ ಕಲೆಗಳಲ್ಲಿ ಪ್ರೀತಿಯನ್ನೂ ಬೆಳೆಸಿಕೊಂಡವರು.  ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗಳ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕನ್ನಡದಲ್ಲಿ ಎಂ.ಎ. ಪದವೀಧರರು.
 
ಪತಿ ಹಾಗೂ ಮಗನ ಪ್ರೋತ್ಸಾಹದಿಂದ ಕವನಗಳನ್ನೂ, ಕತೆ, ಪ್ರಬಂಧಗಳನ್ನೂ ಬರೆಯಲು ಪ್ರಾರಂಭಿಸಿದ ಇಂದಿರಾಜಾನಕಿ ಅವರ  "ಕೃಷ್ಣ ಬಲರಾಮರ ಸಂವಾದ" ಮತ್ತು "ಸ್ವಚ್ಛಭಾರತ" ಕವನಗಳಿಗೆ ಹಾಗೂ ... "ಕುಟುಂಬದಲ್ಲಿ ಮಹಿಳೆಯ ಪಾತ್ರ" ಮತ್ತು "ಸನಾತನ ಧರ್ಮದ ಪುನರುತ್ಥಾನಕ್ಕೆ ಆಚಾರ್ಯತ್ರಯರ ಕೊಡುಗೆ" ಪ್ರಬಂಧಗಳಿಗೆ ಪುರಸ್ಕಾರಗಳು ಲಭಿಸಿವೆ.  ಹವ್ಯಕ ಕಥಾ ಸಂಪುಟದಲ್ಲಿ ಇವರ ಕತೆ ಪ್ರಕಟವಾಗಿದೆ. "ಕಲ್ಲೊಳಗೆ ಕತೆ ಹುಟ್ಟಿ ...." ಇವರ ಮೊದಲ ಪ್ರಕಟಿತ ಕವನ ಸಂಕಲನ.  ನೂರಾರು ಅಪ್ರಕಟಿತ ಕವನಗಳೂ ಇವೆ.  ಛಂದಸ್ಸಿನ ಪ್ರಕಾರಗಳಲ್ಲಿ ಒಂದಾದ ಸಾಂಗತ್ಯದಲ್ಲಿ  ರಾಮಾಯಣವನ್ನು 'ಸಾಂಗತ್ಯ ರಾಮಾಯಣ' ಎಂಬ ಕೃತಿಯಾಗಿ ಮೂಡಿಸಿದ್ದಾರೆ.

ಇಂದಿರಾಜಾನಕಿ ಎಸ್.ಶರ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday Indirajanaki K 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ