ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಮ್ ಸುತಾರ್


 ಅಗಲಿದ ಶಿಲ್ಪಿ ರಾಮ್ ಸುತಾರ್ ನಮನ


ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ 2025ರ ಡಿಸೆಂಬರ್ 17ರಂದು ತಮ್ಮ 101ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.  ರಾಮ್ ಸುತಾರ್ ಅವರು ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್‌ ಅವರ ಸ್ಮರಣಾರ್ಥವಾಗಿ ಅರ್ಪಿತಗೊಂಡಿರುವ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯೂ ಸೇರಿದಂತೆ ಅನೇಕ ಪ್ರಸಿದ್ಧ ಶಿಲ್ಪಗಳಿಗೆ ಹೆಸರಾಗಿದ್ದಾರೆ.

ರಾಮ್ ಸುತಾರ್ ಅವರು 1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ ಜನಿಸಿದರು.  ಅವರು ಬಾಲ್ಯದಿಂದಲೇ ಶಿಲ್ಪಕಲೆಯತ್ತ ಆಕರ್ಷಿತರಾದರು. ಮುಂಬೈನ ಪ್ರತಿಷ್ಠಿತ ಜೆಜೆ ಸ್ಕೂಲ್ ಆಫ್ ಆರ್ಟ್ ಅಂಡ್ ಆರ್ಕಿಟೆಕ್ಚರ್‌ನಿಂದ ಚಿನ್ನದ ಪದಕ ವಿಜೇತರಾದ ರಾಮ್  ಸುತಾರ್ ಅವರು ಅಪಾರ ಸಾಧನಗೆಳನ್ನು ಮಾಡಿದ್ದಾರೆ.  ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವ ಮಹಾತ್ಮ ಗಾಂಧಿಯವರ ಪ್ರತಿಮೆಗಳು ಮತ್ತು ಸಂಸತ್ತಿನ ಆವರಣದಲ್ಲಿ ಕುದುರೆ ಸವಾರಿ ಮಾಡುತ್ತಿರುವ ಛತ್ರಪತಿ ಶಿವಾಜಿಯ ಪ್ರತಿಮೆಗಳು ಅವರ ಅತ್ಯುತ್ತಮ ಸೃಷ್ಟಿಗಳಲ್ಲಿ ಸೇರಿವೆ.  ರಾಮ್ ಸುತಾರ್ ಅವರು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿರುವ ಸ್ಟ್ಯಾಚು ಆಫ್ ಯುನಿಟಿಯನ್ನು ಗುಜರಾತ್ ರಾಜ್ಯದ ನರ್ಮದಾ ನದಿಯ ತಟದಲ್ಲಿರುವ ಕೆವಾಡಿಯಾ (ಏಕ್ತಾ ನಗರ) ದಲ್ಲಿ ಮೂಡಿಸಿರುವುದು 2018ರಲ್ಲಿ ಉದ್ಘಾಟನೆಗೊಂಡಿದೆ. ಇದರ ಎತ್ತರ 182 ಮೀಟರ್ (ಸುಮಾರು 597 ಅಡಿ) ಆಗಿದೆ. 

ರಾಮ್ ಸುತಾರ್ ಅವರಿಗೆ 1999 ರಲ್ಲಿ ಪದ್ಮಶ್ರೀ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುತಾರ್ ಅವರಿಗೆ ಮಹಾರಾಷ್ಟ್ರ. ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ ಮಹಾರಾಷ್ಟ್ರ ಭೂಷಣ್ ಪುರಸ್ಕಾರವನ್ನು ಸಹ ನೀಡಿ ಗೌರವಿಸಲಾಗಿತ್ತು.

ರಾಮ್ ಸುತಾರ್ ತಮ್ಮ101ನೇ ವಯಸ್ಸಿನಲ್ಲಿ 2025ರ ಡಿಸೆಂಬರ್ 17ರಂದು ನಿಧನರಾದರು. ಅಗಲಿದ ಮಹಾನ್ ಕಲಾಚೇತನಕ್ಕೆ ನಮನ.

Respects to departed soul Great sculptor and architect Ram Sutar Ji 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ