ಜಯಶ್ರೀ ಶರ್ಮ
ಜಯಶ್ರೀ ಶರ್ಮ
ಜಯಶ್ರೀ ಶರ್ಮ ಕದ್ರಿ ಶಿವಭಾಗ್ ಹೆಸರಾಂತ ಚಿತ್ರಕಲಾವಿದರು.
ಜನವರಿ 28, ಜಯಶ್ರೀ ಶರ್ಮ ಅವರ ಜನ್ಮದಿನ. ಇವರು ಮೂಲತಃ ಮಂಗಳೂರಿನವರು. ಎಂ.ಎಸ್ಸಿ (ಸೂಕ್ಷ್ಮಾಣು ಜೀವಶಾಸ್ತ್ರ)
ಸ್ನಾತಕೋತ್ತರ ಪದವಿ ಗಳಿಸಿರುವ ಇವರು 2000 ದಿಂದ 2020ರ ವರೆಗೆ20 ವರ್ಷಗಳ ಕಾಲ ಉಪನ್ಯಾಸಕಿಯಾಗಿ ವೃತ್ತಿಯಲ್ಲಿದ್ದವರು.
ಜಯಶ್ರೀ ಶರ್ಮ ಅವರು ಪವೃತ್ತಿಯಲ್ಲಿ ಸಣ್ಣ ಕವನಗಳ ರಚನೆ, ಸಾಹಿತ್ಯ, ಸಂಗೀತದ ಒಡನಾಟ ಹಾಗೂ ಬಹು ಮುಖ್ಯವಾಗಿ ಚಿತ್ರಕಲೆಯಲ್ಲಿ ತೊಡಗಿಕೊಂಡವರು. ಚಿಕ್ಕಂದಿನಲ್ಲೇ ಸ್ವಪ್ರಯತ್ನದಿಂದ ಚಿತ್ರಕಲೆಯಲ್ಲಿ ತೊಡಗಿಸಿಕೊಂಡು, ತನ್ನ ಅವಳಿ ಸಹೋದರನೊಂದಿಗೆ ಪ್ರೌಢ ಶಾಲೆಯಲ್ಲಿರುವಾಗಲೇ ಚಿತ್ರಕಲಾ ಪ್ರದರ್ಶನಗಳನ್ನು ಕೊಟ್ಟವರು. 2003ರಲ್ಲಿ ಮಂಗಳೂರಿನ ಪ್ರಸಾದ್' ಸ್ಕೂಲ್ ಆಫ್ ಆರ್ಟ್ಸ್' ಸಂಸ್ಥೆಯಲ್ಲಿ ಎರಡು ತಿಂಗಳ ತರಬೇತಿಯನ್ನು ಪಡೆದು ಮೈಸೂರು ಕಲಾ ಶೈಲಿ, ತಂಜಾವೂರ್ ಕಲಾ ಶೈಲಿಯನ್ನೂ ಕರಗತ
ಮಾಡಿಕೊಂಡವರು. 2020ರಲ್ಲಿ ಉಪನ್ಯಾಸಕ ವೃತ್ತಿಯನ್ನು ತೊರೆದ ಇವರು ಸಂಪೂರ್ಣವಾಗಿ ಚಿತ್ರಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜಯಶ್ರೀ ಅವರು ಮಂಗಳೂರಿನ ಕರಾವಳಿ ಚಿತ್ರಕಲಾ ಚಾವಡಿಯಲ್ಲಿ ಪದಾಧಿಕಾರಿಗಳಾಗಿದ್ದಾರೆ. ಕೆಲವೊಂದು ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಕಲಾವಿದರಾಗಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳಿಗೆ ಮುಖಪುಟ ರಚನೆ ಮಾಡಿದ್ದಾರೆ. ಅನೇಕ ಚಿತ್ರಕಲಾ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ, ಅನೇಕ ಮಕ್ಕಳ ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಚಿತ್ರಕಲೆಗೆ ಸಂಬಂಧಪಟ್ಟ ಉಪನ್ಯಾಸ
ಕಾರ್ಯಕ್ರಮಗಳಲ್ಲಿಯೂ ಸಕ್ರಿಯರಾಗಿದ್ದಾರೆ.
ಜಯಕ್ರೀ ಶರ್ಮಾ ಅವರು ದೇಶದಾದ್ಯಂತ ಅನೇಕ ಚಿತ್ರ ಕಲಾ ಶಿಬಿರಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಇವುಗಳಲ್ಲಿ
ಇಂಡಿಯನ್ ಐಕಾನ್ ಅವಾರ್ಡ್, ಉತ್ತರಪ್ರದೇಶದ ಎ.ಜಿ.ಎಲ್ (ಅಡ್ವಾನ್ಸ್ ಗ್ರೋತ್ ಅಂಡ್ ಲರ್ನಿಂಗ್) ಗ್ರೂಪ್ ಅವರ ಇನ್ಸ್‌ಪೈರಿಂಗ್ ವಿಮೆನ್ ಅವಾರ್ಡ್; ಮಣಿಕರ್ಣಿಕ ಕಲಾ ಅವಾರ್ಡ್', ಮಣಿಕರ್ಣಿಕ ಪವರ್ ಆಫ್ ವಿಮೆನ್ ಆವಾರ್ಡ್, ಅಮೃತಾ ಶೇರ್ ಗಿಲ್ ಅವಾರ್ಡ್; ಟ್ಯಾಲೆಂಟಿಲಾ ಆರ್ಟ್ ಫೌಂಡೇಶನ್, ಹಿಸಾರ್ ಅಲ್ಲಿನ ಕಲ್ಚರಲ್ ಆರ್ಟಿಸ್ಟ್ ಅವಾರ್ಡ್; ಮ್ಯಾಕ್ಸ್ ಲೈಫ್ ಇನ್ನುರೆನ್ಸ್, ಮಂಗಳೂರು ಅವರಿಂದ 'ಕಲಾರತ್ನ ಅವಾರ್ಡ್ 2023', ಆಳ್ವಾಸ್ ವಿರಾಸತ್, ಮೂಡುಬಿದ್ರಿ ಅವರ ರಾಜ್ಯಮಟ್ಟದ ಸಮೂಹ ಚಿತ್ರಕಲಾ ಪ್ರದರ್ಶನದಲ್ಲಿ ಅತ್ಯುತ್ತಮ ಕಲಾಕೃತಿ ಪ್ರಶಸ್ತಿ, ಇ೦ಟರ್ನ್ಯಾಷನಲ್ ವಿಮೆನ್ ಅಚೀವರ್ ಅವಾರ್ಡ್, ಟಾಪ್ 20 ಡಿಸೈರೇಬಲ್ ಫೀಮೇಲ್ ಆರ್ಟಿಸ್ಟ್ ಆಫ್ ಏಷ್ಯಾ,ಲಿಯೋನಾರ್ಡೋ ಡಾ ವಿಂಚಿ ಇಂಟರ್ನ್ಯಾಷನಲ್ ಡೈ ಮಂಡ್ ಅವಾರ್ಡ್, ಗ್ಲೋಬಲ್ ಆರ್ಟಿಸ್ಟ್ ಆಫ್ ದಿ ಇಯರ್ 2024'-ಯು.ಎಸ್ ಆರ್ಟ್ ಗ್ಯಾಲರಿ, ಅಸ್ಪಾಂ; ರಾಜಾ ರವಿವರ್ಮ ಅವಾರ್ಡ್ 2024, ತೇಜಸ್ವಿನಿ ಕಲಾ ರತ್ನ ಅವಾರ್ಡ್ ಆರ್ಟಿಸ್ಡ್ ಅಫ್ ದಿ ಇಯರ್ 2023, ರಿವೈವಲ್ ಆಫ್ ಫೋಕ್ ಆರ್ಟ್ ಉತ್ತರಾಖಂಡ್; Special Mention in International Brooklyn Forum Award ಸೇರಿವೆ.
ಕಲಾಸಾಧಕಿ ಜಯಶ್ರೀ ಶರ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday to artiste Jayashri Sharma 🌷🌷🌷

ಕಾಮೆಂಟ್‌ಗಳು