ಜ್ಯೋತಿಲಕ್ಷ್ಮಿ
ಜ್ಯೋತಿಲಕ್ಷ್ಮಿ ಅಂದ್ರೆ ನೆನಪಾಗೋದು ಅಪರಿಮಿತ ಉತ್ಸಾಹದ ಮುದ್ದು ಮಗುವಿನ ನಿಷ್ಕಲ್ಮಶ ನಗೆ, ಸಮಸ್ತಲೋಕಕ್ಕೂ ಹಂಚುವಷ್ಟು ಅಪರಿಮಿತ ಪ್ರೀತಿ, ಎಲ್ಲರನ್ನೂ ಒಂದೇ ಕ್ಷಣದಲ್ಲಿ ಮಾತಿಗೆಳೆಯುವ ಸ್ನೇಹ, ಯಾರಿಗೇ ಆಗಲಿ ಮಿಡಿಯುವ ಕರುಣೆ, ಹೀಗೆ ಈಕೆಯಲ್ಲಿ ಎಲ್ಲವೂ ಸಕಾರಾತ್ಮಕವೇ.
ದೊಡ್ಡ ಮನೆ, ಜನ, ತೋಟ, ಪಶು, ಪಕ್ಷಿ, ಸಸ್ಯ, ಹೀಗೆ ತನ್ನ ಆವರಣದ, ಸಕಲ ಸಂಕುಲ ಮತ್ತು ಪರಿಸರಕ್ಕಾಗಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ, ಸಾಹಿತ್ಯ, ಕಲೆ, ಸಂಸ್ಕೃತಿ, ಸ್ನೇಹಲೋಕಕ್ಕೂ ತನ್ನ ಹೃದಯತುಂಬಿದ ಚೆಲುವಿನ ನಗೆಯಿಂದ ಬಿಡುವು ಮಾಡಿಕೊಳ್ಳುವ ಈಕೆಯ ಸದಭಿರುಚಿಗಳು ಅನೇಕ. ಈಕೆಯಲ್ಲಿರುವ ಬರೆವಣಿಗೆಯ ಶೈಲಿಯೂ ಸರಾಗವಾದದ್ದು ಮತ್ತು ಸರಳ ಸುಂದರವಾದದ್ದು.
ದೊಡ್ಡವರಾದ ಮೇಲೂ ಮಗುವಾಗಿರುವುದು ನಿಜಕ್ಕೂ ಒಂದು ವರ. ಆ ವರವನ್ನು ತನ್ನದಾಗಿಸಿಕೊಂಡಿರುವ ಈ ಅನುಪಮ ಸಹೃದಯಿ ಜ್ಯೋತಿಲಕ್ಷ್ಮಿ ಎಂಬ ಬೆಡಗಿಗೆ ಅಕ್ಕರೆಯ ಹುಟ್ಟುಹಬ್ಬದ ಶುಭಹಾರೈಕೆಗಳು. God bless you ಕಂದಾ. ನೂರು ವರ್ಷ ನಗು ನಗುತ್ತಾ ಯಾವುದೇ ನೋವುಗಳಿಲ್ಲದಂತೆ ಬಾಳು. ನಿನ್ನಂತೆ ನಿಷ್ಕಲ್ಮಶವಾಗಿ ಮಗುವಿನಂತಿರುವುದು ನಮಗೂ ಸ್ಬಲ್ಪ ಕಲಿಸಿಕೊಡು. 😊
Happy birthday Jyothilakshmi Shettigar🌷🌷🌷

ಕಾಮೆಂಟ್ಗಳು