ಬೇದ್ರೆ ಮಂಜುನಾಥ್
ಬೇದ್ರೆ ಮಂಜುನಾಥ್
ಆಕಾಶವಾಣಿಯಲ್ಲಿ ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿರುವ ಬೇದ್ರೆ ಮಂಜುನಾಥ್ ಅವರು ಲೇಖಕರಾಗಿ ಹಾಗೂ ಚಿಂತಕರಾಗಿ, ಅದರಲ್ಲೂ ಆ ಕಾಯಕದ ಮೂಲಕ ವಿಶಾಲ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ ಮಾಡುತ್ತಿರುವ ಕೆಲಸ ಅಪಾರವಾದುದು.
ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು. ಅವರು 1967ರ ಜೂನ್ 10ರಂದು ಜನಿಸಿದರು. ಕುಟುಂಬದಲ್ಲಿ ಬಡತನದವಿದ್ದರೂ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿಯಾಗಿ ರೂಪುಗೊಂಡರು. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದ ಇವರು 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ ಹತ್ತಾರು ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಪ್ರಥಮ ಶ್ರೇಣಿಯಲ್ಲಿ ಪದವಿ ಪಡೆದರು. ಮೈಸೂರಿಗೆ ತೆರಳಿ ಇಂಗ್ಲೀಷಿನಲ್ಲಿ ಎಂ.ಎ ಮುಗಿಸಿದರು.
ಮಂಜುನಾಥ್ ಅವರು ಡಿವಿಎಸ್ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 1991ರಿಂದ ಆಲ್ ಇಂಡಿಯಾ ರೇಡಿಯೋ ಚಿತ್ರದುರ್ಗದಲ್ಲಿ ತಮ್ಮ ಸೇವೆ ಮುಂದುವರಿಸಿದರು. ಇತ್ತೀಚೆಗೆ ಅವರು ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ನಿವೃತ್ತರಾದರು.
ಮಂಜುನಾಥ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನಗಳು ಮತ್ತು ಬರಹಗಳು ನಾಡಿನ ಎಲ್ಲ ನಿಯತಕಾಲಿಕಗಳಲ್ಲಿ ಶೋಭಿಸಿವೆ.
ಸದಾ ಕ್ರಿಯಾಶೀಲರಾಗಿರುವ ಮಂಜುನಾಥ್ ಯುವಜನರೊಟ್ಟಿಗೆ, ವಿದ್ಯಾರ್ಥಿಗಳೊಟ್ಟಿಗೆ ಹೆಚ್ಚಿನ ಕಾಲ ಕಳೆಯುತ್ತಾರೆ. ಕಂಪ್ಯೂಟರ್, ಕಥೆ ಹೇಳುವ ಸಮಯ, ಸರ್ವರಿಗು ಸಮಪಾಲು, ಸ್ಕೂಲ್ ಡೈರಿ, ಆಡಿ ಕಲಿಯೋಣ, ಇಂಗ್ಲಿಷ್ ಸಂವಹನ ಸೇರಿದಂತೆ ಅವರ ಕೃತಿ ವಿವರಗಳು ಇಂತಿವೆ:
ಇಂಗ್ಲಿಷ್ ಮತ್ತು ಕನ್ನಡ ಭಾಷಾ
ಕಲಿಕೆಯ ಪುಸ್ತಕಗಳು:
* Applied English Course
* One Minute English
* Rhymes Rhymes Here Again!
* Multimedia Language Laboratory to learn Spoken and Written English
* My First Library of Little Books
* Play and Learn English
* Easy English Ready Steady Go...
* Comprehension - Read well to score more
* Antonymes and Synonyms
* Voice - Active and Passive
* Speech - Direct and Indirect
* The Tense
* ಇಂಗ್ಲಿಷ್ ಸಂವಹನ
* ಇಂಗ್ಲಿಷ್ ಪದಸಂಪತ್ತು
* ಆಡಿ ಕಲಿಯೋಣ ಕನ್ನಡ
* ಪುಟಾಣಿ ಪುಸ್ತಕಗಳ ನನ್ನ ಮೊದಲ ಗ್ರಂಥಾಲಯ
* English Proverbs with Kannada Explanation
* English Idiom and Phrases with Kannada Explanation
* Applied English Course for Competitive Examinations
* Concise Applied English Course - A Practical Handbook of Spoken and Written English
* One Hour English Grammar
* One Hour English Composition
ಮಕ್ಕಳ ಕಥೆ ಪುಸ್ತಕಗಳು:
* ಸ್ಕೂಲ್ ಡೈರಿ
* ಸಂದರ್ಶನ
* ಗೆದ್ದೇ ಗೆಲ್ಲುವೆವು
* ಇ-ಲರ್ನಿಂಗ್
* ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ
* ಅತ್ಯುಪಯುಕ್ತ ವೆಬ್‌ಸೈಟ್
* ಸಿಡಿ & ಡಿಜಿಟಲ್ ಪುಸ್ತಕಗಳು
* ಬ್ಲಾಗ್ ಬ್ಲಾಗ್ ಬ್ಲಾಗ್
* ಕ್ವಿಜ್
* ಕಂಪ್ಯೂಟರ್
* ಆನ್‌ಲೈನ್ - ಆಫ್‌ಲೈನ್ ಕಲಿಕೆ ಗೆದ್ದೇ ಗೆಲ್ತೀವಿ
* ನಮ್ಮ ಸ್ಕೂಲ್ ಡೈರಿ
* ಕಥೆ ಹೇಳುವ ಸಮಯ
* ಚೀನಾದ ಚಿಟ್ಟೆ ಕಥೆಗಳು
* ಸರ್ವರಿಗೂ ಸಮಪಾಲು
* ಕೊಂಫಕ್ ಕೋಮಾರ್
* ಅಡ್ವೆಂಚರ್
* ಜಮ್ಲೊ ಹೆಜ್ಜೆ ಹಾಕುತ್ತಾಳೆ
* ಡೂಡಲ್ - ಗೂಗಲ್
ಸಂಪಾದಿತ ಕೃತಿಗಳು:
* ವಿಶ್ವಸಂಸ್ಥೆ
* ಸಾಗರಗಳು
* United Nations
* ಅನೌಪಚಾರಿಕ ಶಿಕ್ಷಣ
* ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ
* ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಸ್ವರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ
* ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ
* ಎಫ್‌ಡಿಎ/ಎಸ್‌ಡಿಎ ಪರೀಕ್ಷಾ ಮಾರ್ಗದರ್ಶಿ
* ಸಾಮಾನ್ಯ ಜ್ಞಾನ ಕೈಪಿಡಿ
ಮಕ್ಕಳ ಕಥೆ ಪುಸ್ತಕಗಳು:
* ಅಮ್ಮನ ಹಾಲು ಅಮೃತ
* ಹಾಡಿನ ಬಂಡಿ
* ವಿರಾಮದ ವೇಳೆಯ ಸದುಪಯೋಗ
* ದಿನಾಚರಣೆಗಳು
* ಬತ್ತಿದ ಬಾವಿ ತುಂಬಿತು
* ಸ್ವ-ಸಹಾಯ ಸಂಘ
* ಕಷ್ಟಪಟ್ಟರೆ ಮಾತ್ರ ಫಲ
* ಕಂಪ್ಯೂಟರ್
* Remedial English Course
* ದೃಕ್-ಶ್ರವಣ ಬೋಧನೋಪಕರಣಗಳು
* ನಾಳಿನ ಪುಸ್ತಕ-ಇ-ಬುಕ್
* ಶೃತಿ (ಕವನ ಸಂಕಲನ)
* ಅಪಶೃತಿ (ಕವನ ಸಂಕಲನ)
* ಸ್ವಾತಿ (ಕವನ ಸಂಕಲನ)
* ದಂದಣ - ದತ್ತಣ
* ಅಲ್ಲೊಂದು-ಇಲ್ಲೊಂದು
* ಸ್ವರ್ಧಾ ಇಂಗ್ಲಿಷ್ ಕಾರ್ನರ್
* ಭಾಷಾ ಆಟಗಳು
* ಇಂಗ್ಲಿಷ್ ಪದಪರಿಚಯ
* ಕರೋಡ್‌ಪತಿ ಕ್ವಿಜ್
* ಭಾಷಾ ಪ್ರಯೋಗಶಾಲೆ
* ಸುವರ್ಣ ಕರ್ನಾಟಕ ಜಿಲ್ಲಾ ದರ್ಶನ,
* ಇಂಗ್ಲಿಷ್ ಕಲಿಯೋಣ ಬನ್ನಿ!
* ಒಳ್ಳೆಯ ಇಂಗ್ಲಿಷ್ ಕಲಿಯೋಣ
* ಕ್ರಾಷ್‌ಕೋರ್ಸ್
* ಕ್ವಿಜಿಕ್ಸ್
* ಸಾಹಸ ಕ್ರೀಡೆಗಳು
* ಸಾಹಸಿ ಮೊಮೆತಾರೊ
* ಪ್ರೀತಿಯ ಕಾಣಿಕೆ
ಅಪಾರ ಅಭಿಮಾನಿ ಬಳಗವನ್ನು ಗಳಿಸಿರುವ ಬೇದ್ರೆ ಮಂಜುನಾಥ್ ಅವರ ಆತ್ಮೀಯರು ಅವರ ಗೌರವಾರ್ಥ ಕೆಳಗೆ ನಮೂದಿಸಿರುವ ಸುಂದರ ವೆಬ್‍ಸೈಟ್ ನಿರ್ಮಿಸಿದ್ದಾರೆ.
ಸರಳ ಸಹೃದಯಿ ವಿನಯವಂತರಾದ ಬೇದ್ರೆ ಮಂಜುನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಮಾಹಿತಿ ಕೃಪೆ: https://bedremanjunath.my.canva.site/
Happy birthday Bedre Manjunath Sir 🌷🙏🌷

ಕಾಮೆಂಟ್‌ಗಳು