ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ಎಫ್.ದಂಡಿನ

ಬಿ.ಎಫ್. ದಂಡಿನ 


ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಬಿ.ಎಫ್. ದಂಡಿನ (92) ಅವರು  ನಿಧನರಾಗಿದ್ದಾರೆ.

ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ರೂವಾರಿ, ಡಾ.ಬಿ.ಎಫ್. ದಂಡಿನ ಈ ನಾಡು ಕಂಡ ಅಪರೂಪದ ವ್ಯಕ್ತಿತ್ವ.  ಪ್ರತಿಭಾವಂತ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳ ತವರು ಮನೆಯಾದ ಇವರು ಸ್ಥಾಪಿಸಿರುವ ಕನಕದಾಸ ಶಿಕ್ಷಣ ಸಮಿತಿ 65 ಸಂಸ್ಥೆಗಳನ್ನು ಹೊಂದಿದೆ. 

ರೋಣ ತಾಲೂಕಿನ ಹಿಂದುಳಿದ ಗ್ರಾಮ ದ್ಯಾಮಣಸಿ ಗ್ರಾಮದ ಪ್ರೊ.ದಂಡಿನ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ, ಉನ್ನತ ವ್ಯಾಸಂಗ ಪಡೆದ ಮೊದಲಿಗರು. ಹಾಲುಮತ ಸಮಾಜದ ಯುವಕರಾದ ಪ್ರೊ.ದಂಡಿನ ಅವರು ಕೆ.ಎಲ್.ಇ. ಸಂಸ್ಥೆಯ ಜೆ.ಟಿ.ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿದರು. 
ಬೆಳಗಾವಿಗೆ ವರ್ಗಾವಣೆ ಆದಾಗ ಅವರಿಗೆ ಬೇಸರವಾಯಿತು, ಅದಕ್ಕೆ ಕಾರಣ ಆಗ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಒಳಿತಿಗಾಗಿ ಹಾಸ್ಟೆಲ್ ಪ್ರಾರಂಭ ಮಾಡಿದ್ದರು. ಇದರಿಂದ ಬೇಸತ್ತ ಅವರು ಯಾರೂ ಊಹಿಸದ ಗಟ್ಟಿ ನಿರ್ಣಯ ತೆಗೆದುಕೊಂಡು, ಹುದ್ದೆಗೆ ರಾಜೀನಾಮೆ ನೀಡಿ, ಗದುಗಿಗೆ ಮರಳಿದರು.

ದಂಡಿನ ಅವರು.ಬಡಮಕ್ಕಳು ಊಟವಿಲ್ಲದೆ, ಶಾಲೆಗಳಿಂದ ವಿಮುಖವಾಗವಾರದೆಂದು 1965ರಲ್ಲಿ ಕನಕದಾಸ ಉಚಿತ ಪ್ರಸಾದ ನಿಲಯ ಸ್ಥಾಪಿಸಿದರು‌. ಅದೇ ವರ್ಷ ಕನಕದಾಸ ಶಿಕ್ಷಣ ಸಮಿತಿ ಸ್ಥಾಪಿಸಿದರು. ಸಮಿತಿಯಡಿ ಈಗ ರಾಜ್ಯದ ವಿವಿಧೆಡೆ ಎರಡು ಸಿಬಿಎಸ್ಇ ಶಾಲೆಗಳು, ಐದು ಪ್ರಾಥಮಿಕ ಶಾಲೆಗಳು, 10 ಪ್ರೌಢಶಾಲೆಗಳು, ಎಂಟು ಪದವಿಪೂರ್ವ ಕಾಲೇಜುಗಳು, ಆರು ಪದವಿ ಕಾಲೇಜುಗಳು, 11 ಸ್ನಾತಕೋತ್ತರ ಕೇಂದ್ರಗಳು, ಬಿಎಸ್ ಡಬ್ಲ್ಲು, ಡಿಇಡಿ, ಬಿಇಡಿ ಸೇರಿದಂತೆ 65ಕ್ಕೂ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿ, ಮುನ್ನಡೆಯುತ್ತಿವೆ. ಮಹಿಳಾ ವಸತಿ ನಿಲಯ, ಗ್ರಂಥಾಲಯ, ಶಿಶುಮಂದಿರಗಳನ್ನೂ ಸ್ಥಾಪಿಸಿದ್ದಾರೆ. ಈ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣ ಪಡೆದ ಅನೇಕ ಮಂದಿ ಸಮಾಜದ ಉನ್ನತ ಸ್ಥಾನಗಳಲ್ಲಿದ್ದಾರೆ.

ಡಾ. ಬಿ.ಎಫ್. ದಂಡಿನ ಅವರ ಬದುಕಿನ ಮೇಲೆ ಬೆಳಕು ಚೆಲ್ಲುವ ‘ದಣಿವರಿಯದ ದಾರಿ’ ಎಂಬ ಕೃತಿ ಪ್ರಕಟಗೊಂಡಿದೆ.

ಬಿ.ಎಫ್.‌ದಂಡಿನ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸೇವಾ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿದ್ದವು.

ಪ್ರೊ. ಬಿ.ಎಫ್. ದಂಡಿನ ಅವರು 2026ರ  ಜೂನ್ 27ರಂದು ನಿಧನರಾದರು.

Respects to departed soul Prof. B. F. Dandina 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!