ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನೂಪ್ ಜಲೋಟಾ

 ಅನೂಪ್ ಜಲೋಟಾ



ಅನೂಪ್ ಜಲೋಟಾ ಭಜನೆ ಸಂಗೀತದ ಸಾಮ್ರಾಟರೆಂದು ಖ್ಯಾತರು. 

ಅನೂಪ್ ಜಲೋಟಾ 1953ರ ಜುಲೈ 29ರಂದು ನೈನಿತಾಲ್ನಲ್ಲಿ ಜನಿಸಿದರು. ತಂದೆ ಪುರುಷೋತ್ತಮ್‌ದಾಸ್ ಜಲೋಟಾ ಪಂಜಾಬಿನ ಶಾಸ್ತ್ರೀಯ ಸಂಗೀತಗಾರರಾಗಿ ಭಜನೆ ಸಂಗೀತದಲ್ಲೂ ಹೆಸರಾಗಿದ್ದರು. ಅನೂಪ್  ತಂದೆಯವರಿಂದಲೇ ಸಂಗೀತ ಕಲಿತರು. ಕಥಕ್ ನೃತ್ಯಗಾತಿಯಾಗಿದ್ದ ತಾಯಿಯ ಪ್ರೇರಣೆಯೂ ಇವರ ಜೊತೆಗಿತ್ತು. ಲಕ್ನೋದಲ್ಲಿ ತಮ್ಮ  ಏಳನೇ ವಯಸ್ಸಿನಲ್ಲೇ ನಡೆಸಿದ ಮೊದಲ ಕಚೇರಿಯಿಂದ ಇವರಲ್ಲಿ ಆತ್ಮವಿಶ್ವಾಸ ಚಿಗುರಿತ್ತು. ಅನೂಪ್ ಜಲೋಟಾ ಲಕ್ನೋ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ ಭಾತ್‌ಖಂಡೆ ವಿಶ್ವವಿದ್ಯಾಲಯದಿಂದ  ಸಂಗೀತ (ಮಧ್ಯಮ) ಪದವಿಯನ್ನು ಪಡೆದರು.

ರಾಮ್ ರಾಮ್ ರಾಮ್ ಎಂದು ಅನೂಪ್ ಜಲೋಟಾ ಹಾಡುತ್ತಿದ್ದರೆ ಕೇಳುಗನ ಮನ ಆ ಗಾನ ಪರವಶತೆಯಲ್ಲಿ ಕಳೆದುಹೋಗಿರುತ್ತದೆ.  ಇವರಿಗೆ ತಮ್ಮಗಾಯನದಲ್ಲಿನ 'ಐಸಿ ಲಾಗಿ ಲಗನ್ ಮೀರಾ ಹೋಗಯಿ ಮಗನ್...' (ಭಜನ್) ಹಾಗೂ 'ಚಾಂಚ್ ಅಂಗ್ಡಾಯಿಯಾ ಲೇರಹಾಹೆ' (ಗಝಲ್) ತುಂಬಾ ಪ್ರಿಯ.

ಅನೂಪ್ ಜಲೋಟಾ ಆಕಾಶವಾಣಿಗೆ ಗೋಷ್ಠಿ ಗಾಯಕನಾಗಿ ವೃತ್ತಿ ಆರಂಭಿಸಿ ಕ್ರಮೇಣ ಪ್ರಸಿದ್ಧ ಗಾಯಕರಾಗಿ ಬೆಳೆದರು. ಐಸಿ ಲಾಗಿ ಲಗನ್ ಮೀರಾ ಹೋಗಯಿ ಮಗನ್, ಮೈ ನಹಿ ಮಖನ್ ಖಾಯೋ, ರಂಗ್ ದೇ ಚುನರಿಯ, ಜಗಮೇ ಸುಂದರ್ ಹೈ ದೋ ನಾಮ್, ಚಾದರಿಯಾ ಝಿನಿ ರೇ ಝಿನಿ ಮುಂತಾದ ಅವರ ಅನೇಕ ಆಲ್ಬಮಗಳು ಪ್ರಸಿದ್ಧ.  ಅವರು ಕಿರುತೆರೆಯಲ್ಲಿ ಹಲವು ವರ್ಷ ಧಾರ್ಮಿಕ ಸಂಗೀತ ಕಾರ್ಯಕ್ರಮ ಸಂಯೋಜಿಸಿದ್ದರು. ವಿಶ್ವದೆಲ್ಲೆಡೆ ಅವರ ಕಾರ್ಯಕ್ರಮಗಳು ಜನಪ್ರಿಯಗೊಂಡಿವೆ.  ಅನೂಪ್ ಜಲೋಟಾ ಅವರಲ್ಲಿ ಅನೇಕ ವಿದ್ಯಾರ್ಥಿಗಳು ಗುರುಕುಲ ಪದ್ಧತಿಯಲ್ಲಿ ಭಜನೆ, ಗಝಲ್, ಸಂಗೀತವನ್ನು ನಿಷ್ಠೆ, ಕಠಿಣ ಪರಿಶ್ರಮದಿಂದ ಕಲಿಯುತ್ತಿದ್ದಾರೆ.

ಅನೂಪ್ ಜಲೋಟಾ ಅವರಿಗೆ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ.

On the birthday of Bhajan Samrat Anup Jalota 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!